ಸಂಸತ್​ನಲ್ಲಿ ದೆಹಲಿ ದಳ್ಳುರಿ, ಅಧಿವೇಶನದಲ್ಲಿ ಕೇಂದ್ರದ ವಿರುದ್ಧ ಮುಗಿಬೀಳಲು ಕೈ ಸಜ್ಜು

ದೆಹಲಿ: ಇಂದಿನಿಂದ ಸಂಸತ್ ಅಧಿವೇಶನ ಆರಂಭವಾಗಲಿದ್ದು ಏಪ್ರಿಲ್ 3 ರವರೆಗೆ ನಡೆಯಲಿದೆ. ಈಶಾನ್ಯ ದೆಹಲಿ ಹಿಂಸಾಚಾರ, ಕುಸಿದಿರುವ ಆರ್ಥಿಕತೆ ವಿಚಾರದಲ್ಲಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ತಯಾರಿ ನಡೆಸಿವೆ. ಸಂಸತ್​ ಅಧಿವೇಶನ ಮತ್ತೆ ಕದನವ್ಯೂಹವಾಗಲಿದೆ. ಏಟಿಗೆ ಎದಿರೇಟು. ಪಟ್ಟುಗಳಿಗೆ ಪ್ರತಿ ಪಟ್ಟುಗಳು. ದೆಹಲಿ ದಂಗೆ ವಿರುದ್ಧ ದಂಗಲ್ ಮಾಡಲು ಪ್ರತಿಪಕ್ಷಗಳ ರಣತಂತ್ರ. ಹೌದು, ಇಂದಿನಿಂದ ಆರಂಭವಾಗಲಿರುವ ಬಜೆಟ್ ಮೇಲಿನ ಅಧಿವೇಶನದಲ್ಲಿ ಬೆಂಕಿ ಬಿರುಗಾಳಿಯೇ ಬೀಸಲಿದೆ. ಮಾತಿನ ಮೊರೆತ. ಸದನದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗೋದು ಪಕ್ಕಾ. ಕೇಂದ್ರ ಸರ್ಕಾರದ […]

ಸಂಸತ್​ನಲ್ಲಿ ದೆಹಲಿ ದಳ್ಳುರಿ, ಅಧಿವೇಶನದಲ್ಲಿ ಕೇಂದ್ರದ ವಿರುದ್ಧ ಮುಗಿಬೀಳಲು ಕೈ  ಸಜ್ಜು
Follow us
ಸಾಧು ಶ್ರೀನಾಥ್​
|

Updated on:Mar 02, 2020 | 10:27 AM

ದೆಹಲಿ: ಇಂದಿನಿಂದ ಸಂಸತ್ ಅಧಿವೇಶನ ಆರಂಭವಾಗಲಿದ್ದು ಏಪ್ರಿಲ್ 3 ರವರೆಗೆ ನಡೆಯಲಿದೆ. ಈಶಾನ್ಯ ದೆಹಲಿ ಹಿಂಸಾಚಾರ, ಕುಸಿದಿರುವ ಆರ್ಥಿಕತೆ ವಿಚಾರದಲ್ಲಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ತಯಾರಿ ನಡೆಸಿವೆ.

ಸಂಸತ್​ ಅಧಿವೇಶನ ಮತ್ತೆ ಕದನವ್ಯೂಹವಾಗಲಿದೆ. ಏಟಿಗೆ ಎದಿರೇಟು. ಪಟ್ಟುಗಳಿಗೆ ಪ್ರತಿ ಪಟ್ಟುಗಳು. ದೆಹಲಿ ದಂಗೆ ವಿರುದ್ಧ ದಂಗಲ್ ಮಾಡಲು ಪ್ರತಿಪಕ್ಷಗಳ ರಣತಂತ್ರ. ಹೌದು, ಇಂದಿನಿಂದ ಆರಂಭವಾಗಲಿರುವ ಬಜೆಟ್ ಮೇಲಿನ ಅಧಿವೇಶನದಲ್ಲಿ ಬೆಂಕಿ ಬಿರುಗಾಳಿಯೇ ಬೀಸಲಿದೆ. ಮಾತಿನ ಮೊರೆತ. ಸದನದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗೋದು ಪಕ್ಕಾ.

ಕೇಂದ್ರ ಸರ್ಕಾರದ ವಿರುದ್ಧ ಮುಗಿಬೀಳಲು ‘ಕೈ’ ಪಡೆ ಸಜ್ಜು..! ಹೌದು, ಮೊದಲ ಅಧಿವೇಶನ ಸ್ವಲ್ಪ ಬ್ರೇಕ್ ಪಡೆದು, ಎರಡನೇ ಅವಧಿಯ ಸೆಷನ್ ಇಂದಿನಿಂದ ಆರಂಭವಾಗ್ತಿದೆ. ಏಪ್ರಿಲ್ 3 ರವರೆಗೂ ಅಧಿವೇಶನದ ನಡೆಯಲಿದ್ದು, ಈಶಾನ್ಯ ದೆಹಲಿ ಹಿಂಸಾಚಾರ, ಕುಸಿದ ಆರ್ಥಿಕ ವ್ಯವಸ್ಥೆ ವಿಚಾರಗಳೇ ಪ್ರತಿಪಕ್ಷಗಳಿಗೆ ಅಸ್ತ್ರವಾಗಿದ್ದು, ಕೇಂದ್ರ ಸರ್ಕಾರಕ್ಕೆ ಸವಾಲಾಗೋ ಸಾಧ್ಯತೆ ಇದೆ.

ದೇಶದ ಆರ್ಥಿಕತೆಗೆ ಗರ ಬಡಿದಂತಾಗಿದೆ. ಸತತ ಏಳನೇ ಅವಧಿಯಲ್ಲೂ ದೇಶದ ಜಿಡಿಪಿ ಬೆಳವಣಿಗೆ ಪಾತಳಕ್ಕಿಳಿದಿದೆ. ಜಿಡಿಪಿ ಬೆಳವಣಿಗೆ ಶೇಕಡ 4.7ಕ್ಕೆ ಕುಸಿದಿರುವ ಬಗ್ಗೆ ವಿಪಕ್ಷ ನಾಯಕರು ಸಂಸತ್​ನಲ್ಲಿ ಗಮನ ಸೆಳೆಯಲಿದ್ದಾರೆ. ಈಗಾಗಲೇ ಆರ್ಥಿಕ ಹಿಂಜರಿತದ ಬಗ್ಗೆ ಮಾತನಾಡಲು ಕಾಂಗ್ರೆಸ್ ಸಜ್ಜಾಗಿದೆ.

ಪ್ರತಿಪಕ್ಷಗಳ ಅಸ್ತ್ರ: ಇನ್ನು ಪೌರತ್ವ ತಿದ್ಡುಪಡಿ ಕಾಯ್ದೆ ವಿಚಾರವಾಗಿ ದೆಹಲಿಯಲ್ಲಿ ನಡೆದ ಹಿಂಸಾಚಾರದ ವಿಚಾರವನ್ನು ಪ್ರತಿಪಕ್ಷಗಳು ಎತ್ತಿಕೊಂಡಿದ್ದು, ಸರ್ಕಾರದ ವಿರುದ್ಧ ಮುಗಿಬೀಳಲು ಸಿದ್ದತೆ ನಡೆಸಿವೆ. ದೆಹಲಿ ಹಿಂಸಾಚಾರವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವ ಸಾಧ್ಯತೆ ಇದೆ. 43 ಜನರ ಸಾವಿಗೆ ಕಾರಣವಾದ ಹಿಂಸಾಚಾರಕ್ಕೆ ಸಂಬಂಧಿಸಿದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ರಾಜೀನಾಮೆಯನ್ನು ಕಾಂಗ್ರೆಸ್ ಮತ್ತು ಇತರೆ ಪಕ್ಷಗಳ ನಾಯಕರು ಆಗ್ರಹಿಸುವ ಸಾಧ್ಯತೆ ಇದೆ.

ಇನ್ನು ವಿರೋಧ ಪಕ್ಷಗಳ ಟೀಕಾಸ್ತ್ರಕ್ಕೆ ತಿರುಗೇಟು ನೀಡಲು ಆಡಳಿತ ಪಕ್ಷ ಬಿಜೆಪಿ ಸಿದ್ಧತೆ ನಡೆಸಿದೆ. ದೆಹಲಿ ಹಿಂಸಾಚಾರಕ್ಕೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಕೈವಾಡ ಇದೆ ಎಂಬ ವಾದ ಮಂಡಿಸಲು ಬಿಜೆಪಿ ನಾಯಕುರ ಸರ್ವ ಸಿದ್ದತೆ ಮಾಡಿಕೊಂಡಿದ್ದಾರೆ.

ಒಟ್ನಲ್ಲಿ ಬಜೆಟ್ ಅಧಿವೇಶನದ ಎರಡನೇ ಅವಧಿಯ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಕಲಾಪ ಹೇಗೆ ನಡೆಯಲಿದೆ ಅನ್ನೋ ವಿಚಾರವೇ ರಣರೋಚಕವಾಗಿರಲಿದೆ.

Published On - 7:03 am, Mon, 2 March 20

ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ