‘ನಮೋ’ ಪೌರತ್ವಕ್ಕೆ ನೋಂದಣಿ ಅಗತ್ಯವಿಲ್ಲ-ಪ್ರಧಾನಿ ಕಾರ್ಯಾಲಯ

ದೆಹಲಿ: ಪ್ರಧಾನಿ ನರೇಂದ್ರ ಮೋದಿ ನಿಜಕ್ಕೂ ಭಾರತೀಯರಾ..? ಅಥವಾ ಬೇರೆ ದೇಶದವರಾ ಅಂತಾ ಕೇಳಿದಾಕ್ಷಣ ಅರೆ, ಯಾಕೆ ಈ ರೀತಿ ಕೇಳ್ತಾರೆ ಅಂತಾ ಕನ್​ಫ್ಯೂಸ್ ಆಗ್ಬೇಡಿ. ದೇಶದಲ್ಲಿ ಪೌರತ್ವ ಕಾಯ್ದೆ ಜಾರಿ ಬಳಿಕ ಎನ್​ಆರ್​ಸಿ ಜಾರಿಗೆ ಕೇಂದ್ರ ಚಿಂತಿಸ್ತಿತ್ತು. ಆದ್ರೆ, ಮೋದಿ ಅವರ ಪೌರತ್ವವನ್ನೇ ಕೇಳಿದ್ದವರಿಗೆ ಪ್ರಧಾನಿ ಕಚೇರಿ ಈ ಗೊಂದಲಕ್ಕೆ ತೆರೆ ಎಳೆದಿದೆ. ಪೌರತ್ವ ಕಾಯ್ದೆ ಕಿಚ್ಚು ದೇಶದಾದ್ಯಂತ ಜ್ವಾಲೆಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಹಿಂಸೆ ಜ್ವಾಲಾಮುಖಿಯಂತೆ ಸ್ಫೋಟಗೊಳ್ತಿದ್ರೆ, ಹೋರಾಟದ ಅಬ್ಬರ ದಿನೇ ದಿನೆ ಹೆಚ್ಚುತ್ತಲೇ ಇದೆ. […]

‘ನಮೋ’ ಪೌರತ್ವಕ್ಕೆ ನೋಂದಣಿ ಅಗತ್ಯವಿಲ್ಲ-ಪ್ರಧಾನಿ ಕಾರ್ಯಾಲಯ
Follow us
ಸಾಧು ಶ್ರೀನಾಥ್​
|

Updated on:Mar 01, 2020 | 8:08 AM

ದೆಹಲಿ: ಪ್ರಧಾನಿ ನರೇಂದ್ರ ಮೋದಿ ನಿಜಕ್ಕೂ ಭಾರತೀಯರಾ..? ಅಥವಾ ಬೇರೆ ದೇಶದವರಾ ಅಂತಾ ಕೇಳಿದಾಕ್ಷಣ ಅರೆ, ಯಾಕೆ ಈ ರೀತಿ ಕೇಳ್ತಾರೆ ಅಂತಾ ಕನ್​ಫ್ಯೂಸ್ ಆಗ್ಬೇಡಿ. ದೇಶದಲ್ಲಿ ಪೌರತ್ವ ಕಾಯ್ದೆ ಜಾರಿ ಬಳಿಕ ಎನ್​ಆರ್​ಸಿ ಜಾರಿಗೆ ಕೇಂದ್ರ ಚಿಂತಿಸ್ತಿತ್ತು. ಆದ್ರೆ, ಮೋದಿ ಅವರ ಪೌರತ್ವವನ್ನೇ ಕೇಳಿದ್ದವರಿಗೆ ಪ್ರಧಾನಿ ಕಚೇರಿ ಈ ಗೊಂದಲಕ್ಕೆ ತೆರೆ ಎಳೆದಿದೆ.

ಪೌರತ್ವ ಕಾಯ್ದೆ ಕಿಚ್ಚು ದೇಶದಾದ್ಯಂತ ಜ್ವಾಲೆಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಹಿಂಸೆ ಜ್ವಾಲಾಮುಖಿಯಂತೆ ಸ್ಫೋಟಗೊಳ್ತಿದ್ರೆ, ಹೋರಾಟದ ಅಬ್ಬರ ದಿನೇ ದಿನೆ ಹೆಚ್ಚುತ್ತಲೇ ಇದೆ. ಪ್ರತಿಭಟನೆಯ ಆಕ್ರೋಶಕ್ಕೆ ಗಲ್ಲಿ ಗಲ್ಲಿಯಲ್ಲೂ ಸೂತಕ ಆವರಿಸಿದೆ.

ಮೋದಿಯೇ ಪೌರತ್ವ ರುಜುವಾತು ಮಾಡಲಿ ಎಂದಿದ್ದವರಿಗೆ ಶಾಕ್! ಭಾರತದ ಪೌರರು ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಇದಕ್ಕೆ ಅಗತ್ಯ ಮಾಹಿತಿಗಳನ್ನ ನೀಡಬೇಕಿದೆ. ಆದ್ರೆ, ಇದನ್ನು ವಿರೋಧಿಸಿ ಹಲವು ಹೋರಾಟಗಳು ನಡೀತಿದ್ರೂ ಕೇಂದ್ರ ಸರ್ಕಾರ ಮಾತ್ರ ಎನ್​ಆರ್​ಸಿ ಕಾಯ್ದೆಯನ್ನ ಹಿಂತೆಗೆದುಕೊಳ್ಳೋ ಮನಸ್ಸು ಮಾಡ್ತಿಲ್ಲ.

ಮೋದಿ ಹುಟ್ಟಿನಿಂದಲೇ ಭಾರತದ ಪೌರತ್ವ ಪಡೆದಿದ್ದಾರೆ: ಹೌದು, ಎನ್​ಆರ್​ಸಿ ವಿರೋಧಿಸುವವರು ಪದೇಪದೆ ಪ್ರಧಾನಿ ಮೋದಿಯೇ ಮೊದಲು ತಮ್ಮ ಪೌರತ್ವ ನೋಂದಣಿ ದಾಖಲೆ ನೀಡಲಿ ಅಂತಾ ಬಹಿರಂಗ ಸಮಾವೇಶದಲ್ಲಿ ಸವಾಲು ಎಸೆಯುತ್ತಿದ್ರು. ಇದೇ ಪ್ರಶ್ನೆಯನ್ನ ಮಾಹಿತಿ ಹಕ್ಕು ಕಾರ್ಯಕರ್ತ ಶುಭಾಂಕರ್ ಸರ್ಕಾರ್ ಅವರು, ಪ್ರಧಾನಿ ಕಾರ್ಯಾಲಯಕ್ಕೆ ಕೇಳಿದ್ದರು. ಪ್ರಧಾನಿ ಮೋದಿ ಅವರ ಪೌರತ್ವ ಸರ್ಟೀಫಿಕೆಟ್ ಅನ್ನು ಮಾಹಿತಿ ಹಕ್ಕು ಕಾಯಿದೆಯಡಿ ನೀಡಿ ಅಂತಾ ಪ್ರಶ್ನೆ ಕೇಳಿದ್ರು. ಈ ಪ್ರಶ್ನೆಗೆ ಪ್ರಧಾನಿ ಕಾರ್ಯಾಲಯವು ಉತ್ತರ ನೀಡಿದೆ. ಪ್ರಧಾನಿ ಕಾರ್ಯಾಲಯ ನೀಡಿರುವ ಉತ್ತರವು ಸಖತ್ ಇಂಟರೆಸ್ಟಿಂಗ್ ಆಗಿದೆ.

ಪ್ರಧಾನಿ ಕಾರ್ಯಾಲಯದ ಉತ್ತರವೇನು ಗೊತ್ತಾ? ಪೌರತ್ವ ಕಾಯಿದೆಯ 1955ರ ಸೆಕ್ಷನ್ 3ರಡಿ ನರೇಂದ್ರ ಮೋದಿ ಅವರು ಹುಟ್ಟಿನಿಂದಲೇ ಭಾರತದ ಪೌರರಾಗಿದ್ದಾರೆ. ಹೀಗಾಗಿ, ಸಿಟಿಜನ್‌ಷಿಪ್ ಸರ್ಟಿಫಿಕೇಟ್ ಹೊಂದುವ ಅಗತ್ಯವೇ ಇಲ್ಲ. ಆ ಪ್ರಶ್ನೆಯೂ ಉದ್ಭವಿಸಲ್ಲ. ಸಿಟಿಜನ್‌ಷಿಪ್​ನ್ನು ರಿಜಿಸ್ಟರ್ ಮಾಡಿಸಿದ್ದರೆ ಮಾತ್ರ ಸಿಟಿಜನ್‌ಷಿಪ್ ಸರ್ಟಿಫಿಕೇಟ್‌ ನೀಡಲಾಗುತ್ತೆ. ಪ್ರವೀಣ್ ಕುಮಾರ್. ಅಧೀನ ಕಾರ್ಯದರ್ಶಿ ಪ್ರಧಾನಿ ಕಾರ್ಯಾಲಯ

ಹೀಗೆ ಪ್ರಧಾನಿ ಕಾರ್ಯಾಲಯದಿಂದ ಶುಭಾಂಕತ್ ಸರ್ಕಾರ್ ಅವ್ರ ಪ್ರಶ್ನೆಗೆ ಉತ್ತರಿಸಿದ್ದಾರೆ. ಇನ್ನು ಪೌರತ್ವ ಕಾಯ್ದೆಯ ಸೆಕ್ಷನ್‌3ರಡಿ 1950ರ ಜನವರಿ 26ಕ್ಕಿಂತ ಮುಂಚೆ ಇಲ್ಲವೇ ನಂತರ ಹುಟ್ಟಿದವರು ಭಾರತದ ಪೌರರಾಗಿರುತ್ತಾರೆ. ಇನ್ನು ಭಾರತದ ಪೌರತ್ವ ಪಡೆಯಲು ಇರುವ ಇತರ ಮಾರ್ಗಗಳೆಂದರೇ, ಪೌರತ್ವ ಕಾಯಿದೆಯ ಸೆಕ್ಷನ್ 4ರಡಿ ಹುಟ್ಟಿದ ಮಗುವಿನ ಪೋಷಕರು ಭಾರತೀಯರಾಗಿದ್ದರೇ, ಮಗುವಿಗೂ ಭಾರತದ ಪೌರತ್ವ ಸಿಗಲಿದೆ.

ಸೆಕ್ಷನ್ 5ರಡಿ ರಿಜಿಸ್ಟ್ರೇಷನ್‌ ಮೂಲಕ ಭಾರತದ ಪೌರತ್ವ ಪಡೆಯಬಹುದು. ಸೆಕ್ಷನ್‌ 6ರಡಿ ಬೇರೆ ದೇಶದಿಂದ ವಲಸೆ ಬಂದವರು ಅರ್ಜಿ ಸಲ್ಲಿಸಿ ಪೌರತ್ವ ಪಡೆಯಬಹುದು. ಹೀಗಾಗಿ ಎಲ್ಲರೂ ಪೌರತ್ವ ಸರ್ಟೀಫಿಕೇಟ್‌ಗಾಗಿ ರಿಜಿಸ್ಟರ್ ಮಾಡಿಸುವ ಅಗತ್ಯ ಇರೋದಿಲ್ಲ. ಪ್ರಧಾನಿ ಮೋದಿ ಅವರು 1950ರಲ್ಲಿ ಹುಟ್ಟಿದವರಾಗಿರುವುದರಿಂದ ಪೌರತ್ವ ನೋಂದಣಿ ಮಾಡಿಸಿಲ್ಲ. ಅದರ ಅಗತ್ಯವೂ ಕಾಯಿದೆಯ ಪ್ರಕಾರ ಇಲ್ಲ ಎಂದಿದ್ದಾರೆ. ಈ ಸ್ಪಷ್ಟನೆಯೊಂದಿಗೆ ದೇಶದಲ್ಲಿ ಮೋದಿಯ ಪೌರತ್ವ ಪ್ರಶ್ನಿಸಿ ಹೋರಾಡುತ್ತಿದ್ದವರಿಗೆ ಹಿನ್ನಡೆಯಾದಂತಾಗಿದೆ.

Published On - 8:06 am, Sun, 1 March 20

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ