ದೆಹಲಿ ಜನವರಿ 12: ಜನವರಿ 22 ರಂದು ನಡೆಯಲಿರುವ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮವನ್ನು ಕಾಂಗ್ರೆಸ್ (Congress) ಬಹಿಷ್ಕರಿಸುವ ವಿವಾದವು ಬಿಜೆಪಿಯ(BJP)ಪಿತೂರಿಯೇ ಹೊರತು ಬೇರೇನೂ ಅಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge )ಹೇಳಿದ್ದಾರೆ. ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ಉದ್ದೇಶವಲ್ಲ ಆದರೆ ರಾಜಕೀಯ ಉದ್ದೇಶ ಹೊಂದಿರುವ ಬಿಜೆಪಿ/ಆರ್‌ಎಸ್‌ಎಸ್ ಕಾರ್ಯಕ್ರಮವನ್ನು ತಿರಸ್ಕರಿಸುವುದು ಕಾಂಗ್ರೆಸ್ ಉದ್ದೇಶವಾಗಿದೆ ಎಂದು ಈಗಾಗಲೇ ತನ್ನ ನಿಲುವನ್ನು ವ್ಯಕ್ತಪಡಿಸಿದ್ದೇನೆ.ರಾಮನ ಮೇಲೆ ನಂಬಿಕೆ ಇರುವವರು ಯಾವಾಗ ಬೇಕಾದರೂ ಅಯೋಧ್ಯೆಗೆ ಭೇಟಿ ನೀಡಬಹುದು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಅಧೀರ್ ರಂಜನ್ ಚೌಧರಿ ಅವರು ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಎಂದು ಕಾಂಗ್ರೆಸ್ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿದ್ದು, ಬಿಜೆಪಿ ಅವರನ್ನು ಹಿಂದೂ ವಿರೋಧಿ ಎಂದು ಕರೆಯುತ್ತಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು, ಕಾಂಗ್ರೆಸ್ ನಾಯಕರನ್ನು ಆಹ್ವಾನಿಸಲೇಬಾರದಿತ್ತು. ಕಾರ್ಯಕ್ರಮಕ್ಕೆ ಹಾಜರಾಗುವುದರಿಂದ ತಮ್ಮ ಹಿಂದಿನ ಪಾಪವನ್ನು ಕಡಿಮೆ ಮಾಡಬಹುದಾಗಿತ್ತು ಎಂದು 2005 ರಲ್ಲಿ ಕಾಬೂಲ್‌ನಲ್ಲಿ ಬಾಬರ್ ಸಮಾಧಿಗೆ ಭೇಟಿ ನೀಡಿದ ರಾಹುಲ್ ಗಾಂಧಿ ಫೋಟೋವನ್ನು ಹಂಚಿಕೊಂಡು ವಾಗ್ದಾಳಿ ನಡೆಸಿದ್ದರು.
भगवान श्रीराम का विरोध है कांग्रेस की परंपरा… pic.twitter.com/pzEGKO30ip
— BJP (@BJP4India) January 12, 2024
ರಾಮನನ್ನು ವಿರೋಧಿಸುವುದು ಕಾಂಗ್ರೆಸ್‌ನ ಸಂಪ್ರದಾಯ ಎಂದು ಹೇಳುವ ವಿಡಿಯೊವನ್ನು ಬಿಜೆಪಿ ಶುಕ್ರವಾರ ಹಂಚಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್, ಕಾರ್ಯಕ್ರಮಕ್ಕೆ ಹಾಜರಾಗದ ನಾಲ್ವರು ಶಂಕರಾಚಾರ್ಯರನ್ನು ಬಿಜೆಪಿ ಏಕೆ ಪ್ರಶ್ನಿಸುತ್ತಿಲ್ಲ ಎಂದು ಪ್ರಶ್ನಿಸಿದೆ.
ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ ನಾಯಕರು ಜನವರಿ 15 ರಂದು ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. “ಆಹ್ವಾನ ಸಿಕ್ಕಿದ ನಂತರವೇ ಒಬ್ಬರು ದೇವರ ದೇವಸ್ಥಾನಕ್ಕೆ ಹೋಗುತ್ತಾರೆಯೇ? ಎಂಬುದು ಮೊದಲ ಪ್ರಶ್ನೆ ಅದು ದೇವಸ್ಥಾನ, ಚರ್ಚ್ ಅಥವಾ ಮಸೀದಿಯಾಗಿರಲಿ, ನಾವು ಅಲ್ಲಿಗೆ ಹೋಗಲು ಆಹ್ವಾನ ಬೇಕೆ? ಯಾವ ದಿನಾಂಕ ಮತ್ತು ಯಾವ ವರ್ಗದ ಜನರು ಹೋಗಬೇಕೆಂದು ಯಾರು ನಿರ್ಧರಿಸುತ್ತಾರೆ? ರಾಜಕೀಯ ಪಕ್ಷವು ನಿರ್ಧರಿಸುತ್ತದೆಯೇ ?ಅದರ ದಿನಾಂಕವನ್ನು ಹೇಗೆ ನಿರ್ಧರಿಸಲಾಯಿತು ಎಂಬುದನ್ನು ನಾವು ತಿಳಿದುಕೊಳ್ಳಲು ಬಯಸುತ್ತೇವೆ. ತಾರೀಖ್ ಕಾ ಚುನಾವ್ ನಹೀ ಹುವಾ ಹೈ, ಚುನಾವ್ ದೇಖ್ ಕರ್ ತಾರೀಖ್ ತೈ ಕೀ ಹೈ (ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ದಿನಾಂಕವನ್ನು ಆಯ್ಕೆ ಮಾಡಲಾಗಿದೆ) ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಹೇಳಿದ್ದಾರೆ.
ನಾಲ್ವರು ಶಂಕರಾಚಾರ್ಯರು ಪ್ರಾಣ ಪ್ರತಿಷ್ಠಾ ಸಮಾರಂಭದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ, ಆದರೂ ಅವರಲ್ಲಿ ಇಬ್ಬರು ಕಾರ್ಯಕ್ರಮವನ್ನು ಬೆಂಬಲಿಸಿದ್ದಾರೆ. ಶೃಂಗೇರಿ ಪೀಠದ ಶಂಕರಾಚಾರ್ಯ ಸ್ವಾಮಿ ಭಾರತೀ ತೀರ್ಥಜ್ ಮತ್ತು ದ್ವಾರಕಾ ಪೀರ್‌ನ ಶಂಕರಾಚಾರ್ಯ ಸ್ವಾಮಿ ಸದಾನಂದ ಸರಸ್ವತಿ ಅವರು ಜನವರಿ 22 ರಂದು ರಾಮಮಂದಿರದ ಉದ್ಘಾಟನೆ ಸನಾತನ ಧರ್ಮದ ಅನುಯಾಯಿಗಳಿಗೆ ಸಂತೋಷದ ವಿಷಯವಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ನಾಸಿಕ್ ಕಾಲಾರಾಮ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ; ರಾಜಕೀಯವಾಗಿ ಇದು ಹೇಗೆ ಮಹತ್ವ ಪಡೆದಿದೆ?
ಪುರಿ ನಿಶ್ಚಲಾನಂದ ಸರಸ್ವತಿಯ ಶಂಕರಾಚಾರ್ಯ ಅವರು ಸಮಾರಂಭಕ್ಕೆ ಹಾಜರಾಗುವುದಿಲ್ಲ ಎಂದು ಮೊದಲೇ ಹೇಳಿದ್ದರು.“ದೇಶದ ಪ್ರಧಾನಿಯವರು ಗರ್ಭಗುಡಿಯಲ್ಲಿ ವಿಗ್ರಹವನ್ನು ಸ್ಪರ್ಶಿಸುತ್ತಾರೆ ಮತ್ತು ‘ಪ್ರಾಣ ಪ್ರತಿಷ್ಠಾ’ ಸಮಾರಂಭವನ್ನು ಮಾಡುತ್ತಾರೆ, ಇದಕ್ಕೆ ರಾಜಕೀಯ ರಂಗು ನೀಡಲಾಗಿದೆ, ಶ್ರೀರಾಮನ ಪ್ರಾಣ ಪ್ರತಿಷ್ಠೆ ಆಗಬೇಕಾದರೆ, ಅದು ಧರ್ಮಗ್ರಂಥದ ಮಾರ್ಗಸೂಚಿಗಳ ಪ್ರಕಾರವಾಗಿರಬೇಕು.. ನಾನು ಅದನ್ನು ವಿರೋಧಿಸುವುದಿಲ್ಲ ಅಥವಾ ನಾನು ಹಾಜರಾಗುವುದಿಲ್ಲ. ನಾನು ನನ್ನ ನಿಲುವನ್ನು ತೆಗೆದುಕೊಂಡಿದ್ದೇನೆ. ಅರ್ಧ-ಸತ್ಯ ಮತ್ತು ಅರ್ಧ-ಸುಳ್ಳನ್ನು ಬೆರೆಸಬಾರದು;.ಎಲ್ಲವೂ ಧರ್ಮಗ್ರಂಥದ ಜ್ಞಾನದೊಂದಿಗೆ ಹೊಂದಿಕೆಯಾಗಬೇಕು” ಎಂದು ನಿಶ್ಚಲಾನಂದ ಹೇಳಿದರು.
ದೇವಾಲಯದ ನಿರ್ಮಾಣ ಪೂರ್ಣಗೊಂಡಿಲ್ಲ ಎಂದು ಉತ್ತರಕನ್ನಡದ ಜ್ಯೋತಿರ್ ಮಠದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಹೇಳಿದ್ದು, ಸಮಾರಂಭದಲ್ಲಿ ಭಾಗಿಯಾಗುತ್ತಿಲ್ಲ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:01 pm, Fri, 12 January 24