ದೈವಿಕ ಕನಸು ನನಸು; ರಥಯಾತ್ರೆಯಲ್ಲಿ ನಾನು ಕೇವಲ ಸಾರಥಿ: ಬಿಜೆಪಿ ನಾಯಕ ಎಲ್‌ಕೆ ಅಡ್ವಾಣಿ

ಹಿಂದಿ ಸಾಹಿತ್ಯ ಪತ್ರಿಕೆಯಾದ ರಾಷ್ಟ್ರಧರ್ಮ ಪತ್ರಿಕೆಯ ಸಂಪಾದಕರೊಂದಿಗಿನ ಸಂವಾದದಲ್ಲಿ ಹಿರಿಯ ಬಿಜೆಪಿ ನಾಯಕ ಅಡ್ವಾಣಿ ಅವರು ಆ ಸಮಯದಲ್ಲಿ (ಸೆಪ್ಟೆಂಬರ್ 1990 ರಲ್ಲಿ, ರಥ ಯಾತ್ರೆ ಪ್ರಾರಂಭವಾದ ಕೆಲವು ದಿನಗಳ ನಂತರ) ಅಯೋಧ್ಯೆಯಲ್ಲಿ ಒಂದು ದಿನ ಭವ್ಯವಾದ ರಾಮಮಂದಿರವನ್ನು ನಿರ್ಮಿಸಲಾಗುವುದು ಎಂದು ವಿಧಿ ನಿರ್ಧರಿಸಿದೆ ಎಂದು ನಾನು ಭಾವಿಸಿದೆ.

ದೈವಿಕ ಕನಸು ನನಸು; ರಥಯಾತ್ರೆಯಲ್ಲಿ ನಾನು ಕೇವಲ ಸಾರಥಿ: ಬಿಜೆಪಿ ನಾಯಕ ಎಲ್‌ಕೆ ಅಡ್ವಾಣಿ
ಎಲ್ ಕೆ ಅಡ್ವಾಣಿ
Follow us
ರಶ್ಮಿ ಕಲ್ಲಕಟ್ಟ
|

Updated on: Jan 12, 2024 | 8:08 PM

ದೆಹಲಿ ಜನವರಿ 12: ರಾಮಮಂದಿರದಲ್ಲಿ (Ram mandir) ರಾಮಲಲ್ಲಾ ‘ಪ್ರಾಣ ಪ್ರತಿಷ್ಠಾ’ ಕುರಿತು ಮಾತನಾಡಿದ ಮಾಜಿ ಗೃಹ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಎಲ್‌ಕೆ ಅಡ್ವಾಣಿ ( LK Advani), ಅಯೋಧ್ಯೆಯ (Ayodhya) ರಾಮಮಂದಿರದ ಉದ್ಘಾಟನೆಯು “ದೈವಿಕ ಕನಸನ್ನು ನನಸಾಗಿಸಿದೆ” ಎಂದು ಹೇಳಿದರು. ಹಿಂದಿ ಸಾಹಿತ್ಯ ಪತ್ರಿಕೆಯಾದ ರಾಷ್ಟ್ರಧರ್ಮದಲ್ಲಿ ಪ್ರಕಟವಾಗಲಿರುವ ಲೇಖನದಲ್ಲಿ ಎಲ್‌ಕೆ ಅಡ್ವಾಣಿಯವರು ಈ ರೀತಿ ಹೇಳಿದ್ದಾರೆ. ರಾಮ ಮಂದಿರ ನಿರ್ಮಾಣ – ದೈವಿಕ ಕನಸಿನ ಈಡೇರಿಕೆ ‘ ಎಂಬ ಶೀರ್ಷಿಕೆ ಇರುವ ಅಡ್ವಾಣಿಯವರ ಲೇಖನವಿರುವ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಜನವರಿ 16 ರಂದು ಮುದ್ರಿಸಲಾಗುವುದು. ಈ ವಿಶೇಷ ಸಂಚಿಕೆಯನ್ನು ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಸಮಾರಂಭಕ್ಕೆ ಆಹ್ವಾನಿಸಿದ ಅತಿಥಿಗಳಿಗೆ ನೀಡಲಾಗುವುದು.

ಪತ್ರಿಕೆಯ ಸಂಪಾದಕರೊಂದಿಗಿನ ಸಂವಾದದಲ್ಲಿ ಹಿರಿಯ ಬಿಜೆಪಿ ನಾಯಕ ಅಡ್ವಾಣಿ ಅವರು ಆ ಸಮಯದಲ್ಲಿ (ಸೆಪ್ಟೆಂಬರ್ 1990 ರಲ್ಲಿ, ರಥ ಯಾತ್ರೆ ಪ್ರಾರಂಭವಾದ ಕೆಲವು ದಿನಗಳ ನಂತರ) ಅಯೋಧ್ಯೆಯಲ್ಲಿ ಒಂದು ದಿನ ಭವ್ಯವಾದ ರಾಮಮಂದಿರವನ್ನು ನಿರ್ಮಿಸಲಾಗುವುದು ಎಂದು ವಿಧಿ ನಿರ್ಧರಿಸಿದೆ ಎಂದು ನಾನು ಭಾವಿಸಿದೆ. ಎಲ್ಲವನ್ನೂ ಕಾಲ ನಿರ್ಧರಿಸುತ್ತದೆ. ‘ರಥಯಾತ್ರೆ’ ಪ್ರಾರಂಭವಾದ ಕೆಲವು ದಿನಗಳ ನಂತರ, ನಾನು ಕೇವಲ ಸಾರಥಿ ಎಂದು ನಾನು ಅರಿತುಕೊಂಡೆ. ಯಾತ್ರೆಯೇ ಮುಖ್ಯ ಸಂದೇಶವಾಗಿತ್ತು.. ಅದು ರಾಮನ ಜನ್ಮಸ್ಥಳಕ್ಕೆ ಹೋಗುತ್ತಿರುವ ಕಾರಣ ‘ರಥ’ ಪೂಜೆಗೆ ಅರ್ಹವಾಗಿದೆ ಎಂದಿದ್ದಾರೆ.

ಅಡ್ವಾಣಿ ಅವರು ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ನಾಯಕರೊಬ್ಬರು ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದಾರೆ ಎಲ್​ಕೆ ಅಡ್ವಾಣಿ

96ರ ಹರೆಯದ ಎಲ್‌ಕೆ ಅಡ್ವಾಣಿ ಅವರು ರಾಮ ಜನ್ಮಭೂಮಿ ಆಂದೋಲನದ ನೇತೃತ್ವ ವಹಿಸಿದ್ದ ಬಿಜೆಪಿ ನಾಯಕರಲ್ಲಿ ಒಬ್ಬರಾಗಿರುವ ಕಾರಣ ರಾಮಮಂದಿರ ‘ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಅವರ ನಿರ್ಧಾರ ಗಮನಾರ್ಹವಾಗಿದೆ.

ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಶ್ರೀರಾಮನ ಮೂರ್ತಿಯ ಪ್ರತಿಷ್ಠಾಪನೆಯೊಂದಿಗೆ ರಾಮಮಂದಿರವನ್ನು ಉದ್ಘಾಟಿಸಲಾಗುವುದು. ಸಮಾರಂಭಕ್ಕೆ ದೇಶಾದ್ಯಂತದ ಸಾವಿರಾರು ಗಣ್ಯರನ್ನು ಆಹ್ವಾನಿಸಲಾಗಿದೆ. ಆಹ್ವಾನಿತರಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಿದ ಕಾರ್ಮಿಕರ ಕುಟುಂಬಗಳೂ ಸೇರಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ