ಪಿಎಲ್‌ಎ ಉಗ್ರರ ದಾಳಿಗೆ ಮೂವರು ಭಾರತೀಯ ಸೈನಿಕರು ಹುತಾತ್ಮ

ಇಂಫಾಲ್‌: ಭಾರತ ಮತ್ತು ಮ್ಯಾನ್ಮಾರ್‌ ಗಡಿಯ ಸಮೀಪವಿರುವ ಮಣಿಪುರದಲ್ಲಿ ನಡೆದ ಆಘಾತಕಾರಿ ಉಗ್ರರ ದಾಳಿಯಲ್ಲಿ ಅಸ್ಸಾಂ ರೈಫಲ್ಸ್‌ಗೆ ಸೇರಿದ ಮೂವರು ಸೈನಿಕರು ಹುತಾತ್ಮಾರಾಗಿದ್ದಾರೆ. ಹೌದು ಬೆಳಗಿನ ಜಾವ ಅಸ್ಸಾಂ ರೈಫಲ್ಸ್‌ನ 4ನೇ ಯುನಿಟ್‌ನ ಯೋಧರು ಕರ್ತವ್ಯದ ಮೇಲಿದ್ದಾಗ ಮಣಿಪುರ ಮೂಲದ ಪೀಪಲ್ಸ್‌ ಲಿಬರೇಶನ್‌ ಆರ್ಮಿ ಎಂಬ ನಿಷೇಧಿತ ಉಗ್ರ ಸಂಘಟನೆ ಮಣಿಪುರದ ಚಾಂಡೆಲ ಜಿಲ್ಲೆಯಲ್ಲಿ ದಾಳಿ ನಡೆಸಿತು. ಘಟನೆಯಲ್ಲಿ ಮೂವರು ಅಸ್ಸಾಂ ರೈಫನ್ಸ್‌ ಯೋಧರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇತರ ಆರು ಜನರು ಗಾಯಗೊಂಡಿದ್ದಾರೆ. 18 ಜನರಿದ್ದ ಯೋಧರ […]

ಪಿಎಲ್‌ಎ ಉಗ್ರರ ದಾಳಿಗೆ ಮೂವರು ಭಾರತೀಯ ಸೈನಿಕರು ಹುತಾತ್ಮ
Edited By:

Updated on: Jul 30, 2020 | 2:52 PM

ಇಂಫಾಲ್‌: ಭಾರತ ಮತ್ತು ಮ್ಯಾನ್ಮಾರ್‌ ಗಡಿಯ ಸಮೀಪವಿರುವ ಮಣಿಪುರದಲ್ಲಿ ನಡೆದ ಆಘಾತಕಾರಿ ಉಗ್ರರ ದಾಳಿಯಲ್ಲಿ ಅಸ್ಸಾಂ ರೈಫಲ್ಸ್‌ಗೆ ಸೇರಿದ ಮೂವರು ಸೈನಿಕರು ಹುತಾತ್ಮಾರಾಗಿದ್ದಾರೆ.

ಹೌದು ಬೆಳಗಿನ ಜಾವ ಅಸ್ಸಾಂ ರೈಫಲ್ಸ್‌ನ 4ನೇ ಯುನಿಟ್‌ನ ಯೋಧರು ಕರ್ತವ್ಯದ ಮೇಲಿದ್ದಾಗ ಮಣಿಪುರ ಮೂಲದ ಪೀಪಲ್ಸ್‌ ಲಿಬರೇಶನ್‌ ಆರ್ಮಿ ಎಂಬ ನಿಷೇಧಿತ ಉಗ್ರ ಸಂಘಟನೆ ಮಣಿಪುರದ ಚಾಂಡೆಲ ಜಿಲ್ಲೆಯಲ್ಲಿ ದಾಳಿ ನಡೆಸಿತು. ಘಟನೆಯಲ್ಲಿ ಮೂವರು ಅಸ್ಸಾಂ ರೈಫನ್ಸ್‌ ಯೋಧರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇತರ ಆರು ಜನರು ಗಾಯಗೊಂಡಿದ್ದಾರೆ.

18 ಜನರಿದ್ದ ಯೋಧರ ಪಡೆ ವಾಹನದಲ್ಲಿ ಸಾಗುತ್ತಿದ್ದಾಗ ಈ ಐಇಡಿ ಬ್ಲಾಸ್ಟ್‌ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ತಕ್ಷಣವೆ ಹೆಚ್ಚಿನ ಭದ್ರತೆಗಾಗಿ ಯೋಧರನ್ನು ಸ್ಥಳಕ್ಕೆ ರವಾನಿಸಲಾಗಿದೆ.

Published On - 1:52 pm, Thu, 30 July 20