ಹೈದರಾಬಾದ್‌ಗೆ 3 ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಭಾಗ್ಯ, ಇದು ಬೆಂಗಳೂರಿಗೂ ವರದಾನ

|

Updated on: Aug 26, 2023 | 5:10 PM

ಹೈದರಾಬಾದ್​​ಗೆ ಮತ್ತೆ ಮೂರು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಯೋಜನೆಯನ್ನು ನೀಡುವ ಸಾಧ್ಯತೆ ಇದೆ. ಈ ಮೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಕಾಚೆಗುಡ-ಯಶವಂತಪುರ (ಬೆಂಗಳೂರು) ಸಿಕಂದರಾಬಾದ್-ಪುಣೆ, ಸಿಕಂದರಾಬಾದ್-ನಾಗ್ಪುರದಂತಹ ಮಾರ್ಗಗಳನ್ನು ಒಳಗೊಂಡಿವೆ ಎಂದು ಹೇಳಲಾಗಿದೆ.

ಹೈದರಾಬಾದ್‌ಗೆ 3 ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಭಾಗ್ಯ, ಇದು ಬೆಂಗಳೂರಿಗೂ ವರದಾನ
ಸಾಂದರ್ಭಿಕ ಚಿತ್ರ
Follow us on

ಹೈದರಾಬಾದ್, ಆ.26 : ತೆಲಂಗಾಣಕ್ಕೆ ಕೇಂದ್ರ ಸರ್ಕಾರ ಬಂಪರ್​​ ಕೂಡುಗೆ ನೀಡಲಿದೆ. ಹೈದರಾಬಾದ್​​ಗೆ ಮತ್ತೆ ಮೂರು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande bharat express) ಯೋಜನೆಯನ್ನು ನೀಡುವ ಸಾಧ್ಯತೆ ಇದೆ. ಈ ಮೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಕಾಚೆಗುಡ-ಯಶವಂತಪುರ (ಬೆಂಗಳೂರು) ಸಿಕಂದರಾಬಾದ್-ಪುಣೆ, ಸಿಕಂದರಾಬಾದ್-ನಾಗ್ಪುರದಂತಹ ಮಾರ್ಗಗಳನ್ನು ಒಳಗೊಂಡಿವೆ ಎಂದು ಹೇಳಲಾಗಿದೆ. ಯಶವಂತಪುರ ಮತ್ತು ನಾಗ್ಪುರ ಮಾರ್ಗಗಳ ಪ್ರಯೋಗಗಳು ಈಗಾಗಲೇ ಪೂರ್ಣಗೊಂಡಿದ್ದು, ಪುಣೆ ಮಾರ್ಗದಲ್ಲಿ ಶತಾಬ್ದಿ ಎಕ್ಸ್‌ಪ್ರೆಸ್​​ ಬದಲಿಸಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನೀಡುವ ಸಾಧ್ಯತೆಯಿದೆ. ಈಗಾಗಲೇ ತಿರುಪತಿ, ವೈಜಾಗ್ ಮಾರ್ಗಗಳಲ್ಲಿ ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಾರಂಭಿಸಿದೆ. ಇನ್ನು ಈ ಮೂರು ರೈಲು ಬಂದರೆ ತೆಲಂಗಾಣದಲ್ಲಿ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸಂಖ್ಯೆ ಐದಕ್ಕೆ ಏರಲಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಗರಿಷ್ಠ 130 ಕಿಮೀ ವೇಗದಲ್ಲಿ ಓಡುವ ಕಾರಣ, ದಕ್ಷಿಣ ಮಧ್ಯ ರೈಲ್ವೆ ಈಗಾಗಲೇ ತನ್ನ ರೈಲು ಜಾಲವನ್ನು ನವೀಕರಿಸಿದೆ. ಪ್ರಸ್ತುತ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಹೈದರಾಬಾದ್‌ನಿಂದ ಬೆಂಗಳೂರಿಗೆ 10-12 ಗಂಟೆ ಪ್ರಯಾಣ ಸಮಯವನ್ನು ತೆಗೆದುಕೊಳ್ಳುತ್ತದೆ. ಆದರೆ ವಂದೇ ಭಾರತ್ ರೈಲು ಈ ಪ್ರಯಾಣದ ಸಮಯವನ್ನು ಅದಕ್ಕಿಂತ 8.3 ಗಂಟೆಗಳವರೆಗೆ ಕಡಿತಗೊಳಿಸುವ ನಿರೀಕ್ಷೆಯಿದೆ. ರೈಲು ಕಾಚೇಗೌಡ ರೈಲು ನಿಲ್ದಾಣದಲ್ಲಿ ಬೆಳಗ್ಗೆ 6 ಗಂಟೆಗೆ ಆರಂಭವಾಗಲಿದ್ದು, ಮಧ್ಯಾಹ್ನ 2.30ಕ್ಕೆ ಯಶವಂತಪುರಕ್ಕೆ ತಲುಪಲಿದೆ. ಮತ್ತೆ ಯಶವಂತಪುರದಿಂದ ಮಧ್ಯಾಹ್ನ 3 ಗಂಟೆಗೆ ರೈಲು ಆರಂಭಗೊಂಡು ರಾತ್ರಿ 11.30ಕ್ಕೆ ಕಾಚೇಗೌಡ ತಲುಪಲಿದೆ.

ಇದನ್ನೂ ಓದಿ:ಬೆಂಗಳೂರು ಹೈದರಾಬಾದ್ ವಂದೇ ಭಾರತ್ ಎಕ್ಸ್​​ಪ್ರೆಸ್ ರೈಲಿಗೆ ಶೀಘ್ರ ಚಾಲನೆ

ಇನ್ನು ಸಿಕಂದರಾಬಾದ್-ಪುಣೆ 8.25 ಗಂಟೆಗಳನ್ನು ತೆಗೆದುಕೊಳ್ಳುವ ಶತಾಬ್ದಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಬದಲಾಯಿಸಿ ವಂದೇ ಭಾರತ್ ರೈಲುಗಳನ್ನು ನೀಡಿದರೆ, ಪ್ರಯಾಣದ ಸಮಯವನ್ನು ಮತ್ತಷ್ಟು ಕಡಿತಗೊಳಿಸುತ್ತದೆ. ಸಿಕಂದರಾಬಾದ್-ನಾಗ್ಪುರ ಮಾರ್ಗವು ಕಾಜಿಪೇಟ್, ರಾಮಗುಂಡಂ, ಮಂಚೇರಿಯಲ್, ಸಿರ್ಪುರ್ ಕಾಗಜ್‌ನಗರ ಮತ್ತು ಬಲ್ಹರ್ಷಾದಲ್ಲಿ ನಿಲುಗಡೆಗಳನ್ನು ಹೊಂದಿರುತ್ತದೆ. ಈಗಾಗಲೇ ಇಲ್ಲಿದೆ ಪ್ರಯಾಣದ ಸಮಯ 7 ಗಂಟೆ 30 ನಿಮಿಷಗಳು ಇದ್ದರೆ. ವಂದೇ ಭಾರತ್ ರೈಲು ಎರಡು ಗಂಟೆ ಪ್ರಯಾಣವನ್ನು ಕಡಿತಗೊಳಿಸುವ ನಿರೀಕ್ಷೆಯಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ