7 ಕೋಟಿ ರೂ.ಮೌಲ್ಯದ ಚಿನ್ನಾಭರಣ ಸಾಗಿಸುತ್ತಿದ್ದ ಮೂವರನ್ನು ಬಂಧಿಸಿದ ರೈಲ್ವೆ ಪೊಲೀಸರು

| Updated By: Lakshmi Hegde

Updated on: Jun 23, 2021 | 9:23 AM

ರೈಲ್ವೆ ಸ್ಟೇಶನ್​​ನ ಮುಖ್ಯ ಗೇಟ್​​ಬಳಿ ಇಳಿದಿದ್ದ ಇವರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಅನುಮಾನಗೊಂಡು ಅವರನ್ನು ತಡೆಯಲಾಯಿತು. ಠಾಣೆಗೆ ಕರೆತಂದು ಅವರ ಲಗೇಜ್​ಗಳನ್ನು ಪರಿಶೀಲಿಸಲಾಯಿತು

7 ಕೋಟಿ ರೂ.ಮೌಲ್ಯದ ಚಿನ್ನಾಭರಣ ಸಾಗಿಸುತ್ತಿದ್ದ ಮೂವರನ್ನು ಬಂಧಿಸಿದ ರೈಲ್ವೆ ಪೊಲೀಸರು
ಸಾಂದರ್ಭಿಕ ಚಿತ್ರ
Follow us on

ಭೋಪಾಲ್​: 7 ಕೋಟಿ ರೂಪಾಯಿ ಮೌಲ್ಯದ 14 ಕೆಜಿ ಚಿನ್ನಾಭರಣಗಳನ್ನು ಗುಜರಾತ್​​ನ ಸೂರತ್​ನಿಂದ ಸಾಗಿಸುತ್ತಿದ್ದ ಮೂವರನ್ನು ಸರ್ಕಾರಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ತಪ್ತಿ ಗಂಗಾ ಎಕ್ಸ್​​ಪ್ರೆಸ್​​ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಇವರನ್ನು ಮಧ್ಯಪ್ರದೇಶದ ಕಟ್ನಿ ಸ್ಟೇಶನ್​​ನಲ್ಲಿ ಬಂಧಿಸಲಾಗಿದೆ. ಇವರು ಚಿನ್ನಾಭರಣಗಳನ್ನು ಬೆನ್ನಿಗೆ ಹಾಕಿದ್ದ ಬ್ಯಾಗ್​​ನಲ್ಲಿ ಪ್ಲಾಸ್ಟಿಕ್​​ನಲ್ಲಿ ಇಟ್ಟಿದ್ದರು.

ರೈಲ್ವೆ ಸ್ಟೇಶನ್​​ನ ಮುಖ್ಯ ಗೇಟ್​​ಬಳಿ ಇಳಿದಿದ್ದ ಇವರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಅನುಮಾನಗೊಂಡು ಅವರನ್ನು ತಡೆಯಲಾಯಿತು. ಠಾಣೆಗೆ ಕರೆತಂದು ಅವರ ಲಗೇಜ್​ಗಳನ್ನು ಪರಿಶೀಲಿಸಲಾಯಿತು. ಆಗ ಅದರಲ್ಲಿ ಬಂಗಾರದ ಚೈನ್​​, ರಿಂಗ್​, ಇಯರ್​ರಿಂಗ್ಸ್​ ಸೇರಿ ಹಲವು ರೀತಿಯ ಚಿನ್ನಾಭರಣಗಳು ಇದ್ದವು. ಎಲ್ಲ ಸೇಇರಿ ಸುಮಾರು 14 ಕೆಜಿ ಚಿನ್ನಾಭರಣಗಳು ಇದ್ದವು. ಇವುಗಳ ಮೌಲ್ಯ 7 ಕೋಟಿ ರೂ. ಆದರೆ ಇವರ ಬಳಿ ಇದ್ದ ಬಿಲ್​​ನಲ್ಲಿ 5.5 ಕೋಟಿ ರೂ. ಎಂದು ಬರೆದುಕೊಂಡಿತ್ತೆಂದು ಪೊಲೀಸರು ಹೇಳಿದ್ದಾರೆ.

ಬಿಲ್​ ನೋಡಿದರೆ ಇದು ಕಳ್ಳತನ ಮಾಡಿದ್ದಲ್ಲ ಎಂದು ಅನ್ನಿಸುತ್ತದೆ. ಆದರೆ ಇಷ್ಟು ಮೌಲ್ಯದ ಚಿನ್ನವನ್ನು ಇವರ್ಯಾಕೆ ಖರೀದಿಸಿದರು? ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದರು ಎಂಬಿತ್ಯಾದಿ ವಿಚಾರವನ್ನು ತನಿಖೆ ನಡೆಸುವುದಾಗಿ ಕಟ್ನಿ ಠಾಣೆಯ ಪೊಲೀಸ್ ಅಧಿಕಾರಿ ಆರ್​.ಕೆ. ಪಟೇಲ್​ ತಿಳಿಸಿದ್ದಾರೆ.

ಇದನ್ನೂ ಓದಿ: Covid Vaccination: ನಿನ್ನೆ ಒಂದೇ ದಿನ 53 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ಲಸಿಕೆ; 59 ಮಂದಿಗೆ ಅಡ್ಡಪರಿಣಾಮ

(Three persons from Surat detained with 14 kg of gold In Madhya Pradesh)