ಇಷ್ಟು ದಿನ ಸಾಧಾರಣ ರೈಲುಗಳಲ್ಲಿ ಸಾಮಾನ್ಯ ಟಿಕೆಟ್ ಖರೀದಿಸಿ ಎಸಿ ಕೋಚ್ನಲ್ಲಿ ಕೂರುವುದು ಅಥವಾ ಟಿಕೆಟ್ ಇಲ್ಲದೆ ರೈಲು ಹತ್ತುವ ಘಟನೆಗಳು ನಡೆಯುತ್ತಿದ್ದವು. ಇದೀಗ ಅದೇ ಪರಿಸ್ಥಿತಿ ವಂದೇ ಭಾರತ್ ರೈಲಿಗೂ ಬಂದಿದೆ. ಪ್ರಧಾನಿ ಮೋದಿಯವರ ಕನಸಿನ ಯೋಜನೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಎಂದು ಹೆಸರಿಡಲಾಗಿದೆ. ಈ ರೈಲು ದೇಶದ ಅತಿ ವೇಗದ ರೈಲುಗಳಲ್ಲಿ ಒಂದಾಗಿದೆ. ಸೌಲಭ್ಯಗಳು ಬಹುತೇಕ ವಿಮಾನದಲ್ಲಿ ಇದ್ದಂತೆ. ಅಷ್ಟರಮಟ್ಟಿಗೆ ಎಸಿ, ಸ್ವಯಂಚಾಲಿತ ಬಾಗಿಲುಗಳು, ಬಯೋ ಟಾಯ್ಲೆಟ್, ಪ್ರೀಮಿಯಂ ಸೀಟುಗಳು, ಆಧುನಿಕ ಲೈಟಿಂಗ್, ಜಿಪಿಎಸ್, ಮನರಂಜನಾ ವೈಶಿಷ್ಟ್ಯಗಳು, ದಿನಪತ್ರಿಕೆ, ಆಹಾರ ಪದಾರ್ಥಗಳು ಹೀಗೆ ಎಲ್ಲಾ ಸೌಲಭ್ಯಗಳಿವೆ. ಇಲ್ಲಿಯವರೆಗೆ 51 ವಂದೇ ಭಾರತ್ ರೈಲುಗಳನ್ನು ನಿಯೋಜಿಸಲಾಗಿದೆ.
ಜನರು ಸಾಗರೋಪಾದಿಯಲ್ಲಿ ರೈಲನ್ನು ಹತ್ತುತ್ತಿದ್ದಾರೆ, ಒಮ್ಮೆ ರೈಲಿನ ಬಾಗಿಲು ಹಾಕಿದರೆ ಮುಂದಿನ ನಿಲ್ದಾಣದಲ್ಲೇ ತೆರೆಯುತ್ತದೆ. ಟಿಕೆಟ್ ಪಡೆದಿದ್ದಾರೆಯೋ ಇಲ್ಲವೋ ಎಂದು ಪರಿಶೀಲಿಸಲು ಕೂಡ ಸಾಧ್ಯವಾಗುತ್ತಿಲ್ಲ ಎಂಬುದು ಅಧಿಕಾರಿಗಳ ಅಳಲಾಗಿದೆ.
ಸೆಮಿ ಹೈಸ್ಪೀಡ್ ವಂದೇ ಭಾರತ್ ರೈಲಿನಲ್ಲಿ ಜನರು ಕಕ್ಕಿರಿದು ತುಂಬಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಲಕ್ನೋ ಜಂಕ್ಷನ್ ಹಾಗೂ ಡೆಹ್ರಾಡೂನ್ ನಡುವೆ ಚಲಿಸುವ ರೈಲಿನಲ್ಲಿ ಈ ದೃಶ್ಯ ಕಂಡುಬಂದಿದೆ. ಈ ರೈಲಿನಲ್ಲಿ ಎಲ್ಲೆ ನೋಡಿದರಲ್ಲಿ ಪ್ರಯಾಣಿಕರು, ಕುಳಿತ ಪ್ರಯಾಣಿಕರಿಗೂ ಉಸಿರುಗಟ್ಟಿಸುವಂತಿತ್ತು ಆ ದೃಶ್ಯ.
ಮತ್ತಷ್ಟು ಓದಿ: Vande Bharat Express: ಮೈಸೂರು ಚೆನ್ನೈ ಮಧ್ಯೆ ಇಂದಿನಿಂದ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್
ಬೇರೆ ಪ್ರಯಾಣಿಕರು ಹತ್ತಲು ಜಾಗ ಇರುವುದಿಲ್ಲ, ರೈಲಿನೊಳಗೆ ಇರುವವರಿಗೂ ನಿಂತುಕೊಳ್ಳಲು ಸಾಧ್ಯವಾಗದಂತೆ ಜನರು ಕಿಕ್ಕಿರಿದು ತುಂಬಿರುತ್ತಾರೆ, ಸಾಮಾನ್ಯ ರೈಲಿನಂತೆ ಈ ರೈಲಿನಲ್ಲಿಯೂ ಜನರು ಓಡಾಡುತ್ತಾರೆ. ದೇಶದ ನಾನಾ ಭಾಗಗಳಿಗೆ ಕೆಲಸ ಅರಸಿ ಹೋಗುವ ಉತ್ತರ ಭಾರತೀಯರಿಂದಲೇ ಈ ಸ್ಥಿತಿ ನಿರ್ಮಾಣವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
Now Premium Vande Bharat is also facing the same fate as other trains.
We do not need a puppet Railway Minister, we need a new Railways which is at least accountable. pic.twitter.com/1V5NwiavQI
— Gems of Engineering (@gemsofbabus_) June 9, 2024
ಸಾಮಾನ್ಯ ರೈಲಿಗಾಗಿ ಕಾಯುತ್ತಿರುವ ಜನರು ಈ ರೈಲನ್ನು ಹತ್ತುತ್ತಾರೆ, ಇಲ್ಲಿಯವರೆಗೂ ಅಧಿಕಾರಿಗಳು ಎಷ್ಟೇ ಪ್ರಯತ್ನಪಟ್ಟರೂ ಅದನ್ನು ತಡೆಯಲು ಸಾಧ್ಯವಾಗಿಲ್ಲ.
ಇದು ವಂದೇ ಭಾರತ್ ರೈಲಿನಲ್ಲಿ ಸ್ಥಳಾವಕಾಶವೇ ಇರಲಿಲ್ಲ, ಒಬ್ಬರನ್ನೊಬ್ಬರು ತಳ್ಳುತ್ತಾ ನಿಂತಿದ್ದರು, ಇದು ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿದ್ದರೂ ಸಾಮಾನ್ಯ ಕೋಟಾ ರೈಲಿನಂತೆಯೇ ಅನಿಸುತ್ತಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ