AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಂಚಿ: ರೂಮಿನಲ್ಲಿ ಏನೋ ಶಬ್ದವಾಗ್ತಿದೆ ಎಂದು ನೋಡಿದ್ರೆ ಇದ್ದಿದ್ದು ನರಭಕ್ಷಕ ಹುಲಿ

ರಾಂಚಿ ಜಿಲ್ಲೆಯ ಮರ್ದು ಗ್ರಾಮದಲ್ಲಿ ಮನೆಯೊಂದಕ್ಕೆ ನುಗ್ಗಿದ ಹುಲಿಯನ್ನು 14 ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ನಂತರ ಸುರಕ್ಷಿತವಾಗಿ ಸೆರೆ ಹಿಡಿಯಲಾಯಿತು.ಜಾರ್ಖಂಡ್‌ನಲ್ಲಿ ಹುಲಿಯನ್ನು ಜೀವಂತವಾಗಿ ಸೆರೆಹಿಡಿಯಲಾದ ಮೊದಲ ಕಾರ್ಯಾಚರಣೆ ಇದಾಗಿದೆ. ಪಲಮು ಹುಲಿ ಮೀಸಲು ಮತ್ತು ರಾಂಚಿ ಅರಣ್ಯ ವಿಭಾಗದ ಜಂಟಿ ತಂಡವು ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.ಬುಧವಾರ ಬೆಳಗಿನ ಜಾವ 4.30 ರ ಸುಮಾರಿಗೆ, ಮುರಿಯಲ್ಲಿರುವ ಹಿಂಡಾಲ್ಕೊ ಕಾರ್ಖಾನೆಯಲ್ಲಿ ರಾತ್ರಿ ಪಾಳಿಯಿಂದ ಪೂರ್ಣ ಚಂದ್ ಹಿಂತಿರುಗಿದ್ದರು. ಕೂಡಲೇ ಹುಲಿ ಮನೆಯೊಳಗೆ ನುಗ್ಗಿತ್ತು.

ರಾಂಚಿ: ರೂಮಿನಲ್ಲಿ ಏನೋ ಶಬ್ದವಾಗ್ತಿದೆ ಎಂದು ನೋಡಿದ್ರೆ ಇದ್ದಿದ್ದು ನರಭಕ್ಷಕ ಹುಲಿ
ಹುಲಿ
ನಯನಾ ರಾಜೀವ್
|

Updated on: Jun 26, 2025 | 12:45 PM

Share

ರಾಂಚಿ, ಜೂನ್ 26: ಸಾಮಾನ್ಯವಾಗಿ ಮನೆಯೊಳಗೆ ನಾಯಿಯೋ, ಬೆಕ್ಕೋ ಬಂದು ಸೇರಿಕೊಳ್ಳುವುದು ಸಾಮಾನ್ಯ. ಆದರೆ ಜಾರ್ಖಂಡ್​ನ ರಾಂಚಿಯಲ್ಲಿ ಹುಲಿ(Tiger)ಯೊಂದು ಮನೆಯ ಬೆಡ್​ರೂಮ್​​ಗೆ ಬಂದು ಅಡಗಿದ್ದ ಘಟನೆ ವರದಿಯಾಗಿದೆ. ಇಡೀ ಊರಿಗೆ ಆತಂಕ ಎದುರಾಗಿತ್ತು. ಹುಲಿ ಇದ್ದ ಮನೆಯ ಹೊರಗೆ ನೂರಾರು ಮಂದಿ ನೆರೆದಿದ್ದರು. ಮಾಹಿತಿ ಬಂದ ತಕ್ಷಣ ಅರಣ್ಯ ಇಲಾಖೆ ತಂಡ ಹುಲಿಯನ್ನು ರಕ್ಷಿಸಲು ಸ್ಥಳಕ್ಕೆ ತಲುಪಿತ್ತು.

ರಾಂಚಿಯ ಸಿಲ್ಲಿ ವಿಧಾನಸಭಾ ಕ್ಷೇತ್ರದ ಮರ್ದು ಗ್ರಾಮದಲ್ಲಿ ವಾಸಿಸುವ ಪುರಂದರ್ ಮಹತೋ ಎಂಬುವವರು ತಮ್ಮ ಕೋಣೆಯಿಂದ ವಿಚಿತ್ರ ಶಬ್ದ ಕೇಳಿಸುತ್ತಿದೆ ಎಂದು ಕೋಣೆಯೊಳಗೆ ಇಣುಕಿ ನೋಡಿದಾಗ ದೈತ್ಯ ಹುಲಿ ಕಣ್ಣಿಗೆ ಬಿದ್ದಿದೆ. ಹುಲಿಯನ್ನು ಕೆರಳಿಸದೆ ಮತ್ತು ಯಾವುದೇ ಶಬ್ದ ಮಾಡದೆ ಹೊರಗಿನಿಂದ ಕೋಣೆಯ ಬಾಗಿಲನ್ನು ಮುಚ್ಚಿ ಬಹಳ ಎಚ್ಚರಿಕೆಯಿಂದ ಹೊರಗೆ ಬಂದಿದ್ದರು.

ಮತ್ತೊಂದು ಕೋಣೆಯಲ್ಲಿ ಮಲಗಿದ್ದ ಮಕ್ಕಳನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬರಲಾಗಿತ್ತು. ನಂತರ ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಷಯವನ್ನು ತಲುಪಿಸಿದರು, ಹುಲಿ ಗ್ರಾಮದಲ್ಲಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಇಡೀ ಗ್ರಾಮದಲ್ಲಿ ಕೋಲಾಹಲ ಉಂಟಾಗಿತ್ತು. ಗ್ರಾಮಸ್ಥರು ಭಯಭೀತರಾಗಿ ತಮ್ಮ ಮನೆಗಳಿಂದ ಹೊರಬಂದು ಹುಲಿಯನ್ನು ಬಂಧಿಸಿದ್ದ ಮನೆಯ ಹೊರಗೆ ಜಮಾಯಿಸಿದರು.

ಮಾಹಿತಿ ಬಂದ ತಕ್ಷಣ ಅರಣ್ಯ ಇಲಾಖೆ ತಂಡ ಸ್ಥಳಕ್ಕೆ ತಲುಪಿ ಅರಿವಳಿಕೆ ಇಂಜೆಕ್ಷನ್ ನೀಡುವ ಮೂಲಕ ಹುಲಿಯನ್ನು ರಕ್ಷಿಸಿತು. ಹುಲಿಯನ್ನು ರಕ್ಷಿಸಲು ಪಲಮು ಹುಲಿ ಅಭಯಾರಣ್ಯದಿಂದ ಅರಣ್ಯ ಇಲಾಖೆಯ ವಿಶೇಷ ತಂಡವನ್ನು ಕರೆಸಲಾಗಿದೆ. ಈ ಘಟನೆಯ ನಂತರ, ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಜಾರ್ಖಂಡ್‌ನ ಗರ್ವಾ ಮತ್ತು ಲತೇಹಾರ್ ಜಿಲ್ಲೆಗಳಲ್ಲಿ ಚಿರತೆಯಿಂದ ಜನರು ಹಿಂದೆ ತುಂಬಾ ತೊಂದರೆಗೊಳಗಾಗಿದ್ದರು. ಆರೇಳು ಮಂದಿಯನ್ನು ಹತ್ಯೆ ಮಾಡಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ