ಜೀವನದ ಜತೆಗಿತ್ತು, ಈಗ ಅದಾನಿ ಜತೆಗಿದೆ; ಎಲ್ಐಸಿಯ ಘೋಷಣೆಯನ್ನು ಬದಲಿಸುವ ಸಮಯ ಬಂದಿದೆ: ಕಾಂಗ್ರೆಸ್

|

Updated on: Feb 02, 2023 | 6:16 PM

ಈ ವಿಷಯದ ಬಗ್ಗೆ ಪ್ರಧಾನ ಮಾರ್ಗದರ್ಶಕರು ಮೌನವಾಗಿದ್ದಾರೆ. ಅವರು ಏನೇನೂ ಮಾತನಾಡಲ್ಲ ಎಂದು ಎಂದು ಪವನ್ ಖೇರಾ ಹೇಳಿದ್ದಾರೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಖೇರಾ ಯಾರ ಸೂಚನೆಯ ಮೇರೆಗೆ ಎಲ್‌ಐಸಿ ಅದಾನಿ ವ್ಯವಹಾರಗಳಲ್ಲಿ ತನ್ನ ಹೂಡಿಕೆಯನ್ನು ಹೆಚ್ಚಿಸಿತು ಎಂದು ಕೇಳಿದ್ದಾರೆ.

ಜೀವನದ ಜತೆಗಿತ್ತು, ಈಗ ಅದಾನಿ ಜತೆಗಿದೆ; ಎಲ್ಐಸಿಯ ಘೋಷಣೆಯನ್ನು ಬದಲಿಸುವ ಸಮಯ ಬಂದಿದೆ: ಕಾಂಗ್ರೆಸ್
ಪವನ್ ಖೇರಾ ಸುದ್ದಿಗೋಷ್ಠಿ
Follow us on

ಜಿಂದಗಿ ಕೆ ಸಾಥ್ ಭಿ, ಜಿಂದಗಿ ಕೆ ಬಾದ್ ಭಿ (ಜೀವನದ ಜತೆಗೂ ಜೀವನದ ನಂತರವೂ) ಎಂಬ ಎಲ್‌ಐಸಿಯ ಘೋಷಣೆಯನ್ನು ಜಿಂದಗಿ ಕೆ ಸಾಥ್ ಥಿ, ಅಬ್ ಅದಾನಿಜಿ ಕೆ ಸಾಥ್ ಹೈ (ಜೀವನದ ಜತೆ ಇತ್ತು, ಈಗ ಅದಾನಿ ಜತೆ ಇದೆ)ಎಂದು ಬದಲಾಯಿಸುವ ಸಮಯ ಬಂದಿದೆ ಎಂದು ಕಾಂಗ್ರೆಸ್ (Congress) ಹೇಳಿದೆ. ಇದು ಎಲ್‌ಐಸಿಯ(LIC) ಪರಿಸ್ಥಿತಿ. ಈ ವಿಷಯದ ಬಗ್ಗೆ ಪ್ರಧಾನ ಮಾರ್ಗದರ್ಶಕರು ಮೌನವಾಗಿದ್ದಾರೆ. ಅವರು ಏನೇನೂ ಮಾತನಾಡಲ್ಲ ಎಂದು ಎಂದು ಪವನ್ ಖೇರಾ ಹೇಳಿದ್ದಾರೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಖೇರಾ ಯಾರ ಸೂಚನೆಯ ಮೇರೆಗೆ ಎಲ್‌ಐಸಿ ಅದಾನಿ (Adani) ವ್ಯವಹಾರಗಳಲ್ಲಿ ತನ್ನ ಹೂಡಿಕೆಯನ್ನು ಹೆಚ್ಚಿಸಿತು ಎಂದು ಕೇಳಿದ್ದಾರೆ.

ನಮ್ಮ ಬಾಲ್ಯದಲ್ಲಿ ‘ಭವ್ರೇ ನೆ ಖಿಲಾಯಾ ಫೂಲ್.. ಫೂಲ್ ಕೋ ಲೇಗಯ ರಾಜ್ ಕುವರ್’ ಎಂಬ ಹಾಡಿತ್ತು. ಈಗ ಫೂಲ್ ಕೋ ಲೇ ಗಯಾ ಹಿಂಡೆನ್‌ಬರ್ಗ್ ಆಗಿದೆ. ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿದ್ದ ಕಾಲದ 20 ವರ್ಷಗಳ ಪ್ರಯತ್ನಕ್ಕೆ ಈಗ ತೆರೆ ಬಿದ್ದಿದೆ. ಇದು ಮೋದಿಜಿ ಮತ್ತು ಅದಾನಿಜಿ ನಡುವಿನ ವಿಷಯವಾಗಿದ್ದರೆ ನಾವೆಲ್ಲರೂ ಮೌನವಾಗಿರುತ್ತಿದ್ದೆವು ಎಂದು ಪವನ್ ಖೇರಾ ಹೇಳಿದರು.
ಜಂಟಿ ಸಂಸದೀಯ ಸಮಿತಿ ಅಥವಾ ಸುಪ್ರೀಂ ಕೋರ್ಟ್‌ನಿಂದ ತನಿಖೆ ನಡೆಸಬೇಕು ಎಂಬ ಬೇಡಿಕೆಯನ್ನು ಕಾಂಗ್ರೆಸ್ ಎತ್ತುತ್ತಿದ್ದಂತೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಅದಾನಿ ವಿಚಾರದಲ್ಲಿ ಸರ್ಕಾರವು “ಸ್ಪಷ್ಟವಾಗಿ ಮೂಲೆಗುಂಪಾಗಿದೆ. ಗುರುವಾರ ಸಂಸತ್ತಿನಲ್ಲಿ ತನ್ನ ಬೇಡಿಕೆಗಳನ್ನು ಮಂಡಿಸಲು ಪ್ರತಿಪಕ್ಷಗಳಿಗೆ ಅವಕಾಶ ನೀಡದೆ ರಾಜ್ಯಸಭೆ ಮತ್ತು ಲೋಕಸಭೆಯನ್ನು ಮುಂದೂಡಲಾಗಿದೆ ಎಂದು ಹೇಳಿದರು.


ಅದಾನಿ ಸಮಸ್ಯೆಯು ಖಂಡಿತವಾಗಿಯೂ ಸೆಬಿ ಮತ್ತು ಆರ್‌ಬಿಐ ತನಿಖೆಯನ್ನು ಸಮರ್ಥಿಸುತ್ತದೆ. ಆಡಳಿತಾರೂಢ ಆಡಳಿತದೊಂದಿಗೆ ಮಿಸ್ಟರ್ ಎ ಅವರು ಹಂಚಿಕೊಂಡಿರುವ ವಿಶೇಷ ಸಂಬಂಧವನ್ನು ಗಮನಿಸಿದರೆ ಅದು ನಿಜವಾಗಿಯೂ ಸ್ವತಂತ್ರವಾಗಿದೆಯೇ ಎಂಬುದು ಪ್ರತ್ಯೇಕ ವಿಷಯವಾಗಿದೆ. ಇದನ್ನು ನರೇಂದ್ರದಾನಿ ಎಂದು ಕರೆಯಬಹುದು ಎಂದು ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

“ಅದಾನಿ ಕುಟುಂಬದ ಸದಸ್ಯರು ಮಾರಿಷಸ್, ಯುಎಇ ಮತ್ತು ಕೆರಿಬಿಯನ್ ದ್ವೀಪಗಳಲ್ಲಿ ತಮ್ಮ ತೆರಿಗೆ ಸ್ವರ್ಗಗಳನ್ನು ಹೊಂದಿದ್ದಾರೆ. ಇದು ಹಿಂಡೆನ್‌ಬರ್ಗ್ ವರದಿಯಲ್ಲಿರುವುದು” ಎಂದು ಪವನ್ ಖೇರಾ ಹೇಳಿದ್ದಾರೆ.

ಇದನ್ನೂ ಓದಿ:Pralhad Joshi: ಸಂಸತ್ತಿನಲ್ಲಿ ರಚನಾತ್ಮಕ ಚರ್ಚೆಗೆ ಸರ್ಕಾರ ಸಿದ್ಧವಿದೆ, ಮೊದಲು ಮಹಿಳಾ ರಾಷ್ಟ್ರಪತಿ ಭಾಷಣದ ಚರ್ಚೆಗೆ ವಿಪಕ್ಷಗಳು ಸಹಕರಿಸಲಿ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಈ ವಿಷಯದೊಂದಿಗೆ ಚೀನಾದ ಸಂಬಂಧವನ್ನು ಪ್ರಸ್ತಾಪಿಸಿದ ಕಾಂಗ್ರೆಸ್, ಚೀನಾದ ಉದ್ಯಮಿ ಚಾಂಗ್ ಚುಂಗ್-ಲಿಂಗ್ ಬಗ್ಗೆ ಕೇಳಿದೆ. “ಅಗಸ್ಟಾ ವೆಸ್ಟ್‌ಲ್ಯಾಂಡ್ ಪ್ರಕರಣದಲ್ಲಿ ಈ ಹೆಸರು ಬಂದಿದೆ. ಮನಮೋಹನ್ ಸಿಂಗ್ ಅವರ ಸರ್ಕಾರ ಇದಕ್ಕೆ ಜೆಪಿಸಿಗೆ ಆದೇಶಿಸಿದೆ. ಅವರು ನಮ್ಮ ಹೆಸರನ್ನು ಎಳೆಯಲು ಬಯಸಿದ್ದರು ಆದರೆ ಅದರಲ್ಲಿ ಭಾಗಿಯಾಗಿರುವ ವ್ಯಕ್ತಿ ಅವರ ಸ್ನೇಹಿತನ ಪಾಲುದಾರ. ನಿಮಗೆ ಎಸ್‌ಜಿ, ಸುಷೇನ್ ಗುಪ್ತಾ ನೆನಪಿರಬಹುದು, ಆದರೆ ಸೋನಿಯಾ ಗಾಂಧಿ ಹೆಸರು ಎಳೆದು ತರಲಾಗುತ್ತದೆ. ಚಾಂಗ್ ಚುಂಗ್-ಲಿಂಗ್ ಮತ್ತು ಗೌತಮ್ ಭಾಯ್ ಪಾಲುದಾರರು. ಅವರು ಸಿಂಗಾಪುರದಲ್ಲಿ ಅದೇ ಕಚೇರಿಯನ್ನು ಹೊಂದಿದ್ದಾರೆ, ಅಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಈ ಸಂಬಂಧ ಬಗ್ಗೆ ಏನು ಹೇಳ್ತೀರಿ ಎಂದು ಪವನ್ ಖೇರಾ ಕೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:12 pm, Thu, 2 February 23