AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಪರೀಕ್ಷೆ ಕೇಂದ್ರದಲ್ಲಿ ಮೂರ್ಛೆ ಹೋದ ವಿದ್ಯಾರ್ಥಿ, ಕಾರಣ ಕೇಳಿದ್ರೆ ನೀವು ಶಾಕ್ ಆಗುವುದು ಖಂಡಿತ

ಬಿಹಾರದ ನಳಂದಾ ಜಿಲ್ಲೆಯ 12ನೇ ತರಗತಿ ವಿದ್ಯಾರ್ಥಿಯೊಬ್ಬ ಪರೀಕ್ಷಾ ಕೇಂದ್ರದಲ್ಲಿ ಮೂರ್ಛೆ ಹೋಗಿರುವ ಘಟನೆಯೊಂದು ನಡೆದಿದೆ. ಇತನು ಪರೀಕ್ಷೆಯ ಒತ್ತಡದಿಂದ ಮೂರ್ಛೆ ಹೋಗಿಲ್ಲ. 500 ಹುಡುಗಿಯರನ್ನು ಕಂಡು ಹುಡುಗ ಮೂರ್ಛೆ ಹೋಗಿದ್ದಾನೆ.

Viral News: ಪರೀಕ್ಷೆ ಕೇಂದ್ರದಲ್ಲಿ ಮೂರ್ಛೆ ಹೋದ ವಿದ್ಯಾರ್ಥಿ, ಕಾರಣ ಕೇಳಿದ್ರೆ ನೀವು ಶಾಕ್ ಆಗುವುದು ಖಂಡಿತ
ಮೂರ್ಛೆ ಹೋದ ವಿದ್ಯಾರ್ಥಿ ಶಂಕರ್
TV9 Web
| Edited By: |

Updated on:Feb 02, 2023 | 4:18 PM

Share

ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆ ಬಂದಾಗ ಇಲ್ಲಸಲ್ಲದ ನಾಟಕವನ್ನೆಲ್ಲ ಮಾಡುವುದು ಸಹಜ, ಪರೀಕ್ಷೆ ಎಂದರೆ ಭಯ ಎಂದು ಮೂರ್ಛೆ ಹೋಗುವುದನ್ನು ನೋಡಿದ್ದೀರಾ ಆದರೆ ಇಲ್ಲೊಂದು ವಿಚಿತ್ರ ಘಟನೆಯೊಂದು ನಡೆದಿದೆ. ಹುಡುಗಿಯರನ್ನು ನೋಡಿ ಒಬ್ಬ ಹುಡುಗ ಮೂರ್ಛೆ ಹೋಗಿದ್ದಾನೆ. ಹೌದು ಬಿಹಾರದ ನಳಂದಾ ಜಿಲ್ಲೆಯ 12ನೇ ತರಗತಿ ವಿದ್ಯಾರ್ಥಿಯೊಬ್ಬ ಪರೀಕ್ಷಾ ಕೇಂದ್ರದಲ್ಲಿ ಮೂರ್ಛೆ ಹೋಗಿರುವ ಘಟನೆಯೊಂದು ನಡೆದಿದೆ. ಇತನು ಪರೀಕ್ಷೆಯ ಒತ್ತಡದಿಂದ ಮೂರ್ಛೆ ಹೋಗಿಲ್ಲ. ಇತ ಬೇರೆಯೇ ಕಾರಣಕ್ಕೆ ಮೂರ್ಛೆ ಹೋಗಿದ್ದಾನೆ, ಎಎನ್‌ಐ ಪ್ರಕಾರ, ಈ ವಿದ್ಯಾರ್ಥಿ ಪರೀಕ್ಷಾ ಕೇಂದ್ರಕ್ಕೆ ಹೋದಾಗ, ಕೊಠಡಿಯ ಪೂರ್ತಿ ವಿದ್ಯಾರ್ಥಿನಿಯರು ತುಂಬಿದ್ದು, ಆ ಕೋಣೆಯಲ್ಲಿ ಇವನು ಒಬ್ಬನೇ ವಿದ್ಯಾರ್ಥಿ. ಶಂಕರ್ ಎಂಬ ವಿದ್ಯಾರ್ಥಿ ಷರೀಫ್ ಅಲ್ಲಮ ಇಕ್ಬಾಲ್ ಕಾಲೇಜಿನಲ್ಲಿ ಓದುತ್ತಿದ್ದ ಎಂದು ಹೇಳಲಾಗಿದೆ. ಶಂಕರ್ ಬ್ರಿಲಿಯಂಟ್ ಶಾಲೆಯಲ್ಲಿ ಮಧ್ಯಂತರ ಪರೀಕ್ಷೆಗೆ ಹೋಗಿದ್ದ. ಸುದ್ದಿ ಸಂಸ್ಥೆಯೊಂದಿಗಿನ ಸಂವಾದದ ಸಮಯದಲ್ಲಿ, ಶಂಕರ್ ಅವರ ಚಿಕ್ಕಮ್ಮ ಹೇಳಿರುವಂತೆ 500 ಹುಡುಗಿಯರಲ್ಲಿ ಇವನು ಒಬ್ಬನೇ ಹುಡುಗ ಎಂದು ತಿಳಿದಾಗ ಶಂಕರ್ ಭಯದಿಂದ ಮೂರ್ಛೆ ಹೋದನು ಎಂದು ಹೇಳಿದ್ದಾರೆ.

ಪರೀಕ್ಷಾ ಕೇಂದ್ರದಲ್ಲಿ 500 ಬಾಲಕಿಯರ ಮಧ್ಯೆ ಒಬ್ಬನೇ ಹುಡುಗನನ್ನು ಕಂಡು ಪರೀಕ್ಷಾ ಕೇಂದ್ರದಲ್ಲಿ ಮೂರ್ಛೆ ಹೋಗಿದ್ದು. ಆತ ಪರೀಕ್ಷೆಯ ಭಯದಿಂದ ಮೂರ್ಛೆ ಹೋಗಿದ್ದಾನೆ ಎಂದುಕೊಂಡಿದ್ದರು, ಆದರೆ ಆತ 500 ಹುಡುಗಿಯರ ಮಧ್ಯೆ ನಾನು ಒಬ್ಬನೇ ಎಂದು ಪ್ರಜ್ಞೆ ತಪ್ಪಿದ್ದಾನೆ. ಶಂಕರ್ ಪ್ರಜ್ಞೆ ತಪ್ಪಿದ ನಂತರ, ನಲಂದಾದ ಬಿಹಾರ ಷರೀಫ್ ಸದರ್ ಆಸ್ಪತ್ರೆಗೆ ಸಾಗಿಸಲಾಯಿತು. ನನ್ನ ದೇಹದಲ್ಲಿ, ತಲೆಯಲ್ಲಿ ಮತ್ತು ಕಣ್ಣುಗಳಲ್ಲಿ ನೋವಾಗುತ್ತಿತ್ತು ಎಂದು ಹೇಳಿದ್ದಾನೆ. ಶಂಕರ್ ಆಸ್ಪತ್ರೆಯಲ್ಲಿ ಆಘಾತದಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Viral News: ವಿದೇಶದಲ್ಲಿ ಮದುವೆಯಾಗಿ ಮಗು ಪಡೆದ ಭಾರತೀಯ ವ್ಯಕ್ತಿಗೆ 1 ಲಕ್ಷ 28 ಸಾವಿರ ರೂ. ನೀಡಿದ ಬೆಲಾರಸ್ ಸರ್ಕಾರ

ನಂತರ ಶಂಕರ್​ಗೆ ನೀಡಿದ್ದ ಪ್ರವೇಶ ಪತ್ರದಲ್ಲಿ ಸಣ್ಣ ದೋಷವಿರುವುದು ಪತ್ತೆಯಾಗಿದೆ. ವರದಿಯ ಪ್ರಕಾರ, ಪ್ರವೇಶ ಕಾರ್ಡ್‌ನಲ್ಲಿ ಅವರನ್ನು ‘ಹುಡುಗಿ’ ಎಂದು ಕರೆಯಲಾಗಿದೆ, ಆ ಕಾರಣದಿಂದ ಆತ ಈ ಕಾಲೇಜಿಗೆ ಪರೀಕ್ಷೆ ಬರೆಯಲು ಬಂದಿದ್ದಾನೆ. ವಿದ್ಯಾರ್ಥಿನಿಯರ ಮಧ್ಯೆ ಏಕಾಂಗಿಯಾಗಿದ್ದ ಶಂಕರ್ ಆತಂಕಗೊಂಡಿದ್ದಾನೆ. ಒಟ್ಟು 13, 18, 227 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಇದು ಬಿಹಾರದ CBSE 12 ನೇ ಬೋರ್ಡ್ ಪರೀಕ್ಷೆಗಳಿಗೆ ಸಮಾನವಾಗಿದೆ. ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳಲ್ಲಿ 6,36, 432 ಬಾಲಕಿಯರು ಮತ್ತು 6, 81, 795 ಬಾಲಕರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 4:18 pm, Thu, 2 February 23

ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ