Viral News: ಮಗುವಿಗೆ ಟಿಕೆಟ್ ಖರೀದಿಸಿ ಎಂದಿದ್ದಕ್ಕೆ ಕಂದನನ್ನೇ ಬಿಟ್ಟು ವಿಮಾನವೇರಿದ ದಂಪತಿ!

ಇಸ್ರೇಲ್‌ನ ಟೆಲ್ ಅವೀವ್‌ನ ವಿಮಾನ ನಿಲ್ದಾಣದ ಚೆಕ್-ಇನ್ ಕೌಂಟರ್‌ನಲ್ಲಿ ಮಗುವಿಗೆ ಟಿಕೆಟ್ ಇಲ್ಲದ ಕಾರಣ ಆ ಮಗುವಿನ ಅಪ್ಪ-ಅಮ್ಮ ತಮ್ಮ ಶಿಶುವನ್ನು ಅಲ್ಲೇ ಬಿಟ್ಟು ಹೋಗಿರುವ ವಿಚಿತ್ರ ಘಟನೆ ನಡೆದಿದೆ.

Viral News: ಮಗುವಿಗೆ ಟಿಕೆಟ್ ಖರೀದಿಸಿ ಎಂದಿದ್ದಕ್ಕೆ ಕಂದನನ್ನೇ ಬಿಟ್ಟು ವಿಮಾನವೇರಿದ ದಂಪತಿ!
ಸಾಂದರ್ಭಿಕ ಚಿತ್ರ
Follow us
ಸುಷ್ಮಾ ಚಕ್ರೆ
|

Updated on:Feb 02, 2023 | 6:13 PM

ಬಸ್​ನಲ್ಲಿ ಸಣ್ಣ ಮಕ್ಕಳಿಗೆ ಟಿಕೆಟ್ ತೆಗೆದುಕೊಳ್ಳಬೇಕು ಎಂದು ಕಂಡಕ್ಟರ್ ಕ್ಯಾತೆ ತೆಗೆದರೆ ಆ ಮಗುವಿನ ಅಪ್ಪ-ಅಮ್ಮ ಆತನ ಬಳಿ ಜಗಳವಾಡಿ ದೊಡ್ಡ ರಾದ್ಧಾಂತವನ್ನೇ ಮಾಡುತ್ತಾರೆ. ಇನ್ನು ಕೆಲವರು ಏನೋ ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಾರೆ. ಆದರೆ, ವಿಮಾನ ಪ್ರಯಾಣ ಮಾಡುವಾಗ ಸಾಮಾನ್ಯವಾಗಿ ಬಹುತೇಕರು ಮುಂಚಿತವಾಗಿಯೇ ಟಿಕೆಟ್ ಬುಕ್ ಮಾಡಿಸಿಕೊಂಡಿರುತ್ತಾರೆ. ಹೀಗಿರುವಾಗ ಮಗುವಿಗೂ ಟಿಕೆಟ್ ತೆಗೆದುಕೊಳ್ಳಬೇಕೆಂದು ತಗಾದೆ ತೆಗೆದರೆ ಪೋಷಕರು ಏನು ಮಾಡುತ್ತಾರೆ? ಇಸ್ರೇಲ್​ನ ವಿಮಾನ ನಿಲ್ದಾಣದಲ್ಲೂ (Israel Airport) ಇದೇ ರೀತಿಯ ಪರಿಸ್ಥಿತಿ ಎದುರಾಗಿತ್ತು. ಚಿಕ್ಕ ಮಗುವಿಗೂ ಟಿಕೆಟ್ ಖರೀದಿಸಬೇಕೆಂದು ಟಿಕೆಟ್ ಕೌಂಟರ್​ನವರು ಹೇಳಿದ್ದರಿಂದ ಗಂಡ-ಹೆಂಡತಿ ಟಿಕೆಟ್ ಖರೀದಿಸುವ ಬದಲು ತಮ್ಮ ಮಗುವನ್ನೇ ಆ ಕೌಂಟರ್​​ನಲ್ಲಿ ಬಿಟ್ಟು ಹೋಗಿದ್ದಾರೆ!

ಇಸ್ರೇಲ್‌ನ ಟೆಲ್ ಅವೀವ್‌ನ ವಿಮಾನ ನಿಲ್ದಾಣದ ಚೆಕ್-ಇನ್ ಕೌಂಟರ್‌ನಲ್ಲಿ ಮಗುವಿಗೆ ಟಿಕೆಟ್ ಇಲ್ಲದ ಕಾರಣ ಆ ಮಗುವಿನ ಅಪ್ಪ-ಅಮ್ಮ ತಮ್ಮ ಶಿಶುವನ್ನು ಅಲ್ಲೇ ಬಿಟ್ಟು ಹೋಗಿರುವ ವಿಚಿತ್ರ ಘಟನೆ ನಡೆದಿದೆ. ಆ ಪೋಷಕರು ಯಾರೆಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಆದರೆ, ಅವರನ್ನು ಹಿಡಿದು ನಿಲ್ಲಿಸಿ ಮಗುವನ್ನು ಅವರಿಗೆ ಒಪ್ಪಿಸಲಾಗಿದೆ.

ಇದನ್ನೂ ಓದಿ: ಮೊದಲ ವಿಮಾನ ಪ್ರಯಾಣ; ಯುವಕನ ಖುಷಿಯನ್ನು ದುಪ್ಪಟ್ಟುಗೊಳಿಸುತ್ತಿರುವ ನೆಟ್ಟಿಗರು

ದಂಪತಿಗಳು ತಮ್ಮ ಮಗುವನ್ನು ಬಿಟ್ಟು ಹೋಗುವಾಗ ಬೆನ್ ಗುರಿಯನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಲ್ಜಿಯಂನ ಬ್ರಸೆಲ್ಸ್‌ಗೆ ರೈನೈರ್ ಏರ್‌ಲೈನ್ಸ್ ವಿಮಾನದಲ್ಲಿ ಚೆಕ್ ಇನ್ ಆಗಿದ್ದರು ಎಂದು ಸಿಎನ್‌ಎನ್ ವರದಿ ಮಾಡಿದೆ. ಆಗ ಟಿಕೆಟ್ ಇಲ್ಲದ ಕಾರಣ ತಮ್ಮ ಮಗುವನ್ನು ಅಲ್ಲೇ ಬಿಟ್ಟ ಅವರು ತಾವಿಬ್ಬರೇ ವಿಮಾನವೇರಲು ಹೊರಟಿದ್ದಾರೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಚೆಕ್-ಇನ್ ಕೌಂಟರ್‌ನಲ್ಲಿದ್ದ ಅಧಿಕಾರಿ ವಿಮಾನ ನಿಲ್ದಾಣದ ಭದ್ರತೆಯನ್ನು ಎಚ್ಚರಿಸಿದ್ದಾರೆ. ಅವರು ಆ ಪೋಷಕರನ್ನು ಹಿಡಿದು ವಿಮಾನ ಹತ್ತದಂತೆ ತಡೆದಿದ್ದಾರೆ.

ಆನ್‌ಲೈನ್ ಬುಕಿಂಗ್ ಪ್ರಕ್ರಿಯೆಯಲ್ಲಿ ರಿಯಾನೇರ್ ಏರ್‌ಲೈನ್ಸ್ ಶಿಶುಗಳನ್ನು ವಿಮಾನ ಕಾಯ್ದಿರಿಸುವಿಕೆಯಲ್ಲಿ ಸೇರಿಸಲು ಅವಕಾಶ ನೀಡುತ್ತದೆ. ವಯಸ್ಕರ ತೊಡೆಯ ಮೇಲೆ ಕುಳಿತು ಮಗು ತೆಗೆದುಕೊಳ್ಳುವ ಪ್ರತಿ ಒನ್​ ವೇ ಹಾರಾಟಕ್ಕೆ ಏರ್‌ಲೈನ್ಸ್ 27 ಡಾಲರ್ ಶುಲ್ಕ ವಿಧಿಸುತ್ತದೆ. ವಯಸ್ಕರು ಮಗುವನ್ನು ಸೀಟಿನಲ್ಲಿ ಕೂರಿಸಿಕೊಂಡು ಹೋಗಲು ಬಯಸಿದರೆ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಬೇಕು.

ಇದನ್ನೂ ಓದಿ: 58 ವರ್ಷದ ರಾಯಚೂರು ನಿವಾಸಿ 187 ನಾಣ್ಯಗಳನ್ನು ನುಂಗಿದ್ದು ಏಕೆ? ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ವೃದ್ಧ

ವಿಮಾನದ ಚೆಕ್-ಇನ್ ಮುಗಿದ ನಂತರ ದಂಪತಿಗಳು ವಿಮಾನಕ್ಕೆ ತಡವಾಗಿ ಬಂದರು. ದಂಪತಿಗಳು ಮಗುವನ್ನು ಬಿಟ್ಟು ವಿಮಾನಕ್ಕೆ ಬೋರ್ಡಿಂಗ್ ಗೇಟ್ ತಲುಪುವ ಪ್ರಯತ್ನದಲ್ಲಿ ಭದ್ರತಾ ತಪಾಸಣೆಯ ಕಡೆಗೆ ಓಡಿದರು. ಕೊನೆಗೆ ಈ ಸಮಸ್ಯೆಯನ್ನು ಇಸ್ರೇಲ್ ಪೊಲೀಸರು ಪರಿಹರಿಸಿದ್ದಾರೆ. ಹಾಗೇ, ಮಗುವನ್ನು ಪೋಷಕರ ಕೈಗೆ ಒಪ್ಪಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:12 pm, Thu, 2 February 23

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ