NATO Alert: ಉಕ್ರೇನ್ ಯುದ್ಧದ ಪಾಠ; ಚೀನಾ ಬಗ್ಗೆ ನ್ಯಾಟೋ ಟೆನ್ಷನ್- ಕಾರಣ ಏನು?

Russia Ukraine War Effect: ರಷ್ಯಾ ಗೆಲುವಿನಿಂದ ಚೀನಾ ಮಾತ್ರವಲ್ಲ ಬೇರೆ ಕೆಲ ಸರ್ವಾಧಿಕಾರಿ ಆಡಳಿತದ ದೇಶಗಳಿಗೂ ಪ್ರಚೋದನೆ ಸಿಗಬಹುದು ಎಂದು ನ್ಯಾಟೋ ಮೈತ್ರಿ ಸಂಘಟನೆಯ ಮುಖ್ಯಸ್ಥ ಜೆನ್ಸ್ ಸ್ಟೋಲ್ಟನ್ಬರ್ಗ್ ಭೀತಿ ವ್ಯಕ್ತಪಡಿಸಿದ್ದಾರೆ.

NATO Alert: ಉಕ್ರೇನ್ ಯುದ್ಧದ ಪಾಠ; ಚೀನಾ ಬಗ್ಗೆ ನ್ಯಾಟೋ ಟೆನ್ಷನ್- ಕಾರಣ ಏನು?
ಟೋಕಿಯೋದಲ್ಲಿ ನ್ಯಾಟೋ ಮುಖ್ಯಸ್ಥರ ಜೊತೆ ಜಪಾನ್ ಪ್ರಧಾನಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 02, 2023 | 4:00 PM

ಟೋಕಿಯೋ: ಉಕ್ರೇನ್ ಮೇಲೆ ಆಕ್ರಮಣ ಮಾಡಿರುವ ರಷ್ಯಾ (Russia War on Ukraine) ಒಂದು ವೇಳೆ ಯುದ್ಧದಲ್ಲಿ ಜಯಿಸಿದಲ್ಲಿ ಅದರ ಪರಿಣಾಮ ಚೀನಾ ಮೇಲೂ ಆಗಬಹುದು. ರಷ್ಯಾ ಗೆಲುವಿನಿಂದ ಸ್ಫೂರ್ತಿ ಪಡೆದು ಚೀನಾ ತೈವಾನ್ ಮೇಲೆ ಎರಗಿಹೋಗಬಹುದು ಎಂದು ಅಮೆರಿಕ ಮತ್ತಿತರ ಮಿತ್ರರಾಷ್ಟ್ರಗಳು ಕಳವಳಗೊಂಡಿವೆ. ರಷ್ಯಾ ಗೆಲುವಿನಿಂದ ಚೀನಾ ಮಾತ್ರವಲ್ಲ ಬೇರೆ ಕೆಲ ಸರ್ವಾಧಿಕಾರಿ ಆಡಳಿತದ ದೇಶಗಳಿಗೂ ಪ್ರಚೋದನೆ ಸಿಗಬಹುದು ಎಂದು ನ್ಯಾಟೋ ಮೈತ್ರಿ ಸಂಘಟನೆಯ ಮುಖ್ಯಸ್ಥ ಜೆನ್ಸ್ ಸ್ಟೋಲ್ಟನ್ಬರ್ಗ್ ಭೀತಿ ವ್ಯಕ್ತಪಡಿಸಿದ್ದಾರೆ.

ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟನ್ಬರ್ಗ್ ಮತ್ತು ಜಪಾನ್ ಪ್ರಧಾನಿ ಫುಮಿಯೋ ಕಿಶಿದಾ ಮೊನ್ನೆ ಮಂಗಳವಾರ ಟೋಕಿಯೋದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಮಾತನಾಡಿದ್ದಾರೆ.

ಚೀನಾ ಮತ್ತು ರಷ್ಯಾ ದೇಶಗಳು ಅಂತಾರಾಷ್ಟ್ರೀಯ ನಿಯಮ ಆಧಾರಿತ ವ್ಯವಸ್ಥೆಯ ಹದ್ದುಮೀರಿ ಮುನ್ನಡೆಯುತ್ತಿವೆ. ಚೀನಾದ ದುರ್ನಡತೆಯಿಂದ ಹಿಡಿದು ಉತ್ತರ ಕೊರಿಯಾದ ಚೇಷ್ಟೆಯವರೆಗೂ ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಬಹಳಷ್ಟು ಸವಾಲುಗಳಿವೆ ಎಂದು ಅವರಿಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Queen Elizabeth: ಆಸ್ಟ್ರೇಲಿಯನ್ ಕರೆನ್ಸಿ ನೋಟುಗಳಿಂದ ಎಲಿಜಬೆತ್ ರಾಣಿಯ ಫೋಟೋ ತೆಗೆದುಹಾಕಲು ನಿರ್ಧಾರ

ಉಕ್ರೇನ್ ಯುದ್ಧದಲ್ಲಿ ರಷ್ಯಾ ಒಂದು ವೇಳೆ ಗೆದ್ದರೆ, ಬಲ ಪ್ರಯೋಗದಿಂದ ಕಾರ್ಯಸಾಧಿಸಬಹುದು ಎಂಬ ಸಂದೇಶವು ಸರ್ವಾಧಿಕಾರಿ ಆಡಳಿತದ ದೇಶಗಳಿಗೆ ತಲುಪುತ್ತದೆ. ರಷ್ಯಾ ಉಕ್ರೇನ್ ಯುದ್ಧವನ್ನು ಚೀನಾ ಬಹಳ ಆಸಕ್ತಿಯಿಂದ ಗಮನಿಸುತ್ತಿದೆ. ಅದರಲ್ಲಿ ವ್ಯಕ್ತವಾಗುವ ಅಂಶಗಳು ಚೀನಾ ಪಾಲಿಗೆ ಪಾಠವಾಗಬಹುದು. ಯೂರೋಪ್​ನಲ್ಲಿ ಇವತ್ತು ಏನಾಗುತ್ತಿದೆಯೋ ಅದು ನಾಳೆ ಪೂರ್ವ ಏಷ್ಯಾದಲ್ಲೂ ಜರುಗಬಹುದು. ಹೀಗಾಗಿ ನಾವು ಒಗ್ಗಟ್ಟಿನಿಂದ ಇದ್ದು ಪ್ರಜಾತಂತ್ರ ಮತ್ತು ಸ್ವಾತಂತ್ರ್ಯಕ್ಕಾಗಿ ನಿಲ್ಲಬೇಕು ಎಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು.

ಏನಿದು ನ್ಯಾಟೋ?

ನ್ಯಾಟೋ ಎಂದರೆ ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (NATO- North Atlantic Treaty Organization). ಇದೊಂದು ಅಂತಾರಾಷ್ಟ್ರೀಯ ಮಿಲಿಟರಿ ಮೈತ್ರಿಕೂಟ. 1949ರಲ್ಲಿ ಸ್ಥಾಪನೆಯಾಗಿದೆ. ಯೂರೋಪ್ ಮತ್ತು ಅಮೆರಿಕದ ಕೆಲ ಆಯ್ದ ದೇಶಗಳ ನಡುವಿನ ಒಪ್ಪಂದ ಇದು. ಇದರಲ್ಲಿ ಸದ್ಯ ಯೂರೋಪ್​ನ 28 ಮತ್ತು ಉತ್ತರ ಅಮೆರಿಕದ 2 ಸೇರಿ ಒಟ್ಟು 30 ಸದಸ್ಯ ದೇಶಗಳಿವೆ. ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ, ಗ್ರೀಸ್ ಮೊದಲಾದ ದೇಶಗಳು ಈ ಕೂಟದಲ್ಲಿವೆ.

ಇದನ್ನೂ ಓದಿ: Makar Sankranti: ಅಮೆರಿಕಾದ ಕೆಂಟುಕಿಯ ಹಿಂದೂ ದೇವಾಲಯದಲ್ಲಿ ಮಕರ ಸಂಕ್ರಾಂತಿ ಸಂಭ್ರಮ

ಆಗಲೇ ಹೇಳಿದಂತೆ ಇದೊಂದು ಮಿಲಿಟರಿ ಮೈತ್ರಿಕೂಟ. ನ್ಯಾಟೋದ ಯಾವುದೇ ಸದಸ್ಯ ದೇಶದ ಮೇಲೆ ಯಾವುದೇ ಮಿಲಿಟರಿ ದಾಳಿಯಾದರೂ ಅದು ಇಡೀ ನ್ಯಾಟೋ ಮೈತ್ರಿಕೂಟದ ಮೇಲೆ ಆದ ದಾಳಿಯಂತೆ ಪರಿಗಣಿಸಿ ಅದನ್ನು ಒಟ್ಟಿಗೆ ಎದುರಿಸುವುದು ಪ್ರಮುಖ ಉದ್ದೇಶ.

ಈಗ ರಷ್ಯಾದಿಂದ ಆಕ್ರಮಣವಾಗಿರುವ ಉಕ್ರೇನ್ ದೇಶ ನ್ಯಾಟೋದ ಸದಸ್ಯತ್ವ ಪಡೆಯುವ ಹಾದಿಯಲ್ಲಿತ್ತು. ಒಂದು ವೇಳೆ ಉಕ್ರೇನ್ ನ್ಯಾಟೋ ದೇಶವಾಗಿಬಿಟ್ಟಿದ್ದರೆ ರಷ್ಯಾ ಮೇಲೆ ಎಲ್ಲಾ ನ್ಯಾಟೋ ದೇಶಗಳು ಬಹಿರಂಗವಾಗಿ ಎದುರುಗೊಳ್ಳುವ ಅವಕಾಶ ಇತ್ತು. ಅಥವಾ ಉಕ್ರೇನ್ ಅನ್ನು ನ್ಯಾಟೋ ಪಡೆ ತನ್ನ ಸೇನಾ ನೆಲೆಯಾಗಿ ಬಳಸಿಕೊಂಡು ರಷ್ಯಾ ಪಕ್ಕದಲ್ಲೇ ಬೀಡುಬಿಡುವ ಸಾಧ್ಯತೆ ಇತ್ತು. ಇದನ್ನು ಮನಗಂಡೇ ರಷ್ಯಾ ಉಕ್ರೇನ್ ಮೇಲೆ ಎರಗಿ ಹೋಗಿ ಬಲವಂತವಾಗಿ ಅದನ್ನು ವಶಪಡಿಸಿಕೊಳ್ಳಲು ಯತ್ನಿಸುತ್ತಿದೆ ಎಂಬಂತಹ ಮಾತುಗಳು ಕೇಳಿಬರುತ್ತಿರುವುದು ಹೌದು.

ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ