Updated on:Feb 02, 2023 | 7:46 AM
ಅಮೆರಿಕಾದಲ್ಲಿ ಮಕರ ಸಂಕ್ರಾಂತಿ ಹಬ್ಬ ಆಚರಣೆ ಮಾಡಲಾಗಿದೆ. ಅಮೆರಿಕಾದ ಕೆಂಟುಕಿಯ ಹಿಂದೂ ದೇವಾಲಯದಲ್ಲಿ ಅಮೆರಿಕಾ ಕನ್ನಡ ಅಭಿಮಾನಿ ಬಳಗದಿಂದ ಮಕರ ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ.
ಅನಿವಾಸಿ ಕನ್ನಡಿಗರು ವರ್ಷದ ಮೊದಲ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಹಬ್ಬದ ಸಂಭ್ರಮ ಹೆಚ್ಚಿಸುವ, ಭಾರತೀಯ ಉಡುಗೆ ತೊಡುಗೆ ತೊಟ್ಟು ಸಂತೋಷ ಸಡಗರದಿಂದ ಹಬ್ಬ ಮಾಡಿದ್ದಾರೆ.
ಸಂಕ್ರಾಂತಿ ಹಿನ್ನೆಲೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಕ್ಕಳು, ಯುವಕರು, ಯುವತಿಯರು, ಹಿರಿಯರು ಭಾಗಿಯಾಗಿದ್ದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಸರ್ವಜ್ಞನ ತ್ರಿಪದಿಗಳ ಅರ್ಥವನ್ನು ಮಕ್ಕಳಿಗೆ ತಿಳಿಸಿ ಅರ್ಥಪೂರ್ಣ ಸಂಕ್ರಾಂತಿ ಹಬ್ಬ ಆಚರಿಸಲಾಗಿದೆ. ವಿವಿಧ ಆಟಗಳನ್ನು ಆಡಿ ಅಮೆರಿಕಾದಲ್ಲಿ ನೆಲೆಸಿರುವ ಕನ್ನಡಿಗರು ಸಂಭ್ರಮಿಸಿದ್ದಾರೆ.
ಸೂರ್ಯನು ಮಕರ ರಾಶಿಗೆ ಪ್ರವೇಶಿಸಿದಾಗ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯೊಂದಿಗೆ ಸೂರ್ಯನು ತನ್ನ ಉತ್ತರಾಯಣ ಸಂಚಾರವನ್ನು ಪ್ರಾರಂಭಿಸುತ್ತಾನೆ.
Published On - 7:46 am, Thu, 2 February 23