ಬಿಜೆಪಿ ಅಸೆಂಬ್ಲಿ ಟಿಕೆಟ್​ಗಾಗಿ ಪೊಲೀಸ್ ಇಲಾಖೆ ಹುದ್ದೆಗೆ ರಾಜೀನಾಮೆ ನೀಡಿದ ಸಿಪಿಐ ಮಹೇಂದ್ರ ನಾಯಕ್

ಬಿಜೆಪಿ ಟಿಕೆಟ್ ಗಾಗಿ ವಿಜಯಪುರ ಮೂಲದ ಪೊಲೀಸ್ ಅಧಿಕಾರಿ ರಾಜೀನಾಮೆ ನೀಡಿದ್ದಾರೆ. ವೈಯುಕ್ತಿಕ ಕಾರಣಗಳನ್ನು ನೀಡಿ ತಮ್ಮ ರಾಜೀನಾಮೆ ಪತ್ರವನ್ನ ಇಲಾಖೆಗೆ ಸಲ್ಲಿಸಿದ್ದರೂ ಸಹ ಅವರು ರಾಜೀನಾಮೆ ಹಿಂದೆ ಬಿಜೆಪಿ ಟಿಕೆಟ್ ಪಡೆಯೋ ಇರಾದೆ ಇದ್ದದ್ದು ಮಾತ್ರ ಸುಳ್ಳಲ್ಲಾ.

ಬಿಜೆಪಿ ಅಸೆಂಬ್ಲಿ ಟಿಕೆಟ್​ಗಾಗಿ ಪೊಲೀಸ್ ಇಲಾಖೆ ಹುದ್ದೆಗೆ ರಾಜೀನಾಮೆ ನೀಡಿದ ಸಿಪಿಐ ಮಹೇಂದ್ರ ನಾಯಕ್
ಮಹೇಂದ್ರ ನಾಯಕ್
Follow us
TV9 Web
| Updated By: ಆಯೇಷಾ ಬಾನು

Updated on:Feb 02, 2023 | 11:43 AM

ವಿಜಯಪುರ: ಇನ್ನೇನು 2023 ರ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ವಿವಿಧ ರಾಜಕೀಯ ಪಕ್ಷಗಳು ಆಧಿಕಾರ ಗದ್ದುಗೆ ಹಿಡಿಯಲು ರಣತಂತ್ರ ರೂಪಿಸುತ್ತಿವೆ. ಎಲ್ಲಾ ಪಕ್ಷಗಳೂ ಸಹ ಸೋಲು ಗೆಲುವಿನ ಲೆಕ್ಕಾಚಾರ ನಡೆಸುತ್ತಿವೆ. ಆರೋಪ ಪ್ರತ್ಯಾರೋಪ ಚುನಾವಣಾ ರಣಾಂಗಣ ಆರಂಭಕ್ಕೂ ಮುನ್ನವೇ ಎಗ್ಗಿಲ್ಲದೇ ನಡೆದಿವೆ. ಇಷ್ಟರ ಮದ್ಯೆ ರಾಜಕೀಯ ಪಕ್ಷಗಳ ಹಾಲಿ ಮಾಜಿ ಶಾಸಕರು ಸಚಿವರು ಟಿಕೆಟ್​ಗಾಗಿ ಲಾಭಿ ನಡೆಸುತ್ತಿದ್ದಾರೆ. ಅದರಲ್ಲೂ ಬಿಜೆಪಿ ಹಾಗೂ ಕಾಂಗ್ರೆಸ್ ನಲ್ಲಿ ಟಿಕೆಟ್ ಕಸರತ್ತು ಬಿರುಸಿನಿಂದಲೇ ಸಾಗಿದೆ. ಬಿಜೆಪಿಯಲ್ಲಿ ಯಾರಿಗೆ ಟಿಕೆಟ್ ಸಿಗತ್ತೆ, ಸಿಗಲ್ಲಾ ಎಂಬ ಲೆಕ್ಕಾಚಾರ ತಲೆದೋರಿದೆ. ಗುಜರಾತ್ ಮಾದರಿಯಲ್ಲಿ ಟಿಕೆಟ್ ನೀಡಿದರೆ ಹಾಲಿ ಶಾಸಕರ ಸಚಿವರನ್ನೂ ಕೆಲವರಿಗೆ ಕೋಕ್ ಸಿಗೋ ಸಾಧ್ಯತೆಯಿದೆ. ಇತ್ತ ಕಾಂಗ್ರೆಸ್ ಪಾಳಯದಲ್ಲಿ ಎಲ್ಲಾ ಮತಕ್ಷೇತ್ರಗಳಲ್ಲಿ ಟಿಕೆಟ್ ಲಾಭಿ ಜೋರಾಗಿದೆ. ಟಿಕೆಟ್ ಅರ್ಜಿ ಸಲ್ಲಿಸಲು ಶುಲ್ಕವನ್ನು ಭರಿಸಿಕೊಳ್ಳುವುದಷ್ಟೇ ಅಲ್ಲಾ ಬೇಡಿಕೆಯನ್ನೂ ಹೆಚ್ಚಿಸಿದೆ. ಜೆಡಿಎಸ್ ಅದಾಗಲೇ ಅರ್ಧ ಟಿಕೆಟ್ ಹಂಚಿಕೆ ಕೆಲಸ ಮುಗಿಸಿದೆ. ಇತರೆ ಪಕ್ಷಗಳು ಕಾಯ್ದು ನೋಡುವ ತಂತ್ರಕ್ಕೆ ಮೊರೆ ಹೋಗಿವೆ. ಸದ್ಯ ಈಗ ಬಿಜೆಪಿ ಟಿಕೆಟ್​ಗಾಗಿ ಸಿಪಿಐ ಮಹೇಂದ್ರ ನಾಯಕ್ ಪೊಲೀಸ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಬಿಜೆಪಿ ಹಾಗೂ ಕಾಂಗ್ರೆಸ್​ನಲ್ಲಿ ಟಿಕೆಟ್ ಬೇಡಿಕೆ ಹೆಚ್ಚಿದೆ. ಬಿಜೆಪಿಯಂತೂ ಯಾರಿಗೆ ಟಿಕೆಟ್ ನೀಡಲಿದೆ ಎಂಬ ಸುಳಿವನ್ನೂ ಸಹ ಯಾರಿಗೂ ಬಿಟ್ಟು ಕೊಟ್ಟಿಲ್ಲ. ಮೂಲಗಳ ಪ್ರಕಾರ ಗುಜರಾತ್ ಮಾದರಿಯಲ್ಲಿ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ ಎನ್ನಲಾಗಿದೆ. ಆದರೆ ಕೇಸರಿ ಪಡೆಯ ಹೈಕಮಾಂಡ್ ಗುಟ್ಟು ರಟ್ಟು ಮಾಡಿಲ್ಲ. ನಮಗೇ ಟಿಕೆಟ್ ಸಿಗಲಿದೆ ಎಂಬ ಭರವಸೆಯಲ್ಲಿ ಹಾಲಿ ಶಾಸಕರು ಹಾಗೂ ಸಚಿವರು ಇಲ್ಲ. ಕಾರಣ ಹೈಕಮಾಂಡ್ ಈ ವಿಚಾರದಲ್ಲಿ ಗುಪ್ತ್ ಗುಪ್ತ ಎಂಬಂತೆ ತನ್ನದೇ ರಣತಂತ್ರ ಹೂಡುವಲ್ಲಿ ತಲ್ಲೀಣವಾಗಿದೆ. ಇಷ್ಟೆಲ್ಲಾ ಭರಾಟೆ ನಡುವೆ ಬಿಜೆಪಿ ಟಿಕೆಟ್ ಗಾಗಿ ವಿಜಯಪುರ ಮೂಲದ ಪೊಲೀಸ್ ಅಧಿಕಾರಿ ರಾಜೀನಾಮೆ ನೀಡಿದ್ದಾರೆ. ವೈಯುಕ್ತಿಕ ಕಾರಣಗಳನ್ನು ನೀಡಿ ತಮ್ಮ ರಾಜೀನಾಮೆ ಪತ್ರವನ್ನ ಇಲಾಖೆಗೆ ಸಲ್ಲಿಸಿದ್ದರೂ ಸಹ ಅವರು ರಾಜೀನಾಮೆ ಹಿಂದೆ ಬಿಜೆಪಿ ಟಿಕೆಟ್ ಪಡೆಯೋ ಇರಾದೆ ಇದ್ದದ್ದು ಮಾತ್ರ ಸುಳ್ಳಲ್ಲಾ. ಸದ್ಯ ಬಾಗಲಕೋಟೆಯ ಲೋಕಾಯುಕ್ತದಲ್ಲಿ ಇನ್ಸಪೆಕ್ಟರ್ ಆಗಿರೋ ಮಹೇಂದ್ರ ನಾಯಕ್ ರಾಜೀನಾಮೆ ನೀಡಿದ್ದಾರೆ.

ಮಹೇಂದ್ರ ನಾಯಕ್ ಯಾರು?

ಮೂಲತಃ ವಿಜಯಪುರ ತಾಲೂಕಿನ ಐನಾಪೂರ ಗ್ರಾಮದ ರೈತ ಕುಟುಂಬದಿಂದ ಬಂದಿರೋ ಮಹೇಂದ್ರ ನಾಯಕ್ ಅವರು ಬಂಜಾರಾ ಸಮುದಾಯಕ್ಕೆ ಸೇರಿದವರು. ಆರಂಭದಿಂದಲೂ ಬಿಜೆಪಿ ಹಾಗೂ ಆರ್​ಎಸ್​ಎಸ್ ಒಡನಾಟ ಹೊಂದಿದ್ದಾರೆ. ಆರ್​ಎಸ್​ಎಸ್​ನ ಹಿರಿಯ ನಾಯಕರು ಹಾಗೂ ಇತರರೊಂದಿಗೆ ಉತ್ತಮ ಭಾಂದವ್ಯ ಇಟ್ಟುಕೊಂಡಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೂ ಎಬಿವಿಪಿ, ಭಜರಂಗದಳ ಹಾಗೂ ಹಿಂದೂಪರ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು. ವಿದ್ಯಾರ್ಥಿ ದೆಸೆಯಲ್ಲೇ ರಾಜಕೀಯದತ್ತ ಆಸಕ್ತಿ ಹೊಂದಿದ್ದ ಮಹೇಂದ್ರ ನಾಯಕ್ ಯುವ ಪಡೆಯನ್ನು ಬೆಳೆಸಿಕೊಂಡು ಬಂದವರು. 2005 ರಲ್ಲಿ ನಡೆದ ತಾಲೂಕಾ ಪಂಚಾಯತಿ ಚುನಾವಣೆಯಲ್ಲಿ ಅಲಿಯಾಬಾದ್ ಕ್ಷೇತ್ರದಲ್ಲಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ದೆ ಮಾಡಿ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದರು. 2005 ರಿಂದ 2010 ರವರೆಗೆ ತಾಲೂಕು ಪಂಚಾಯತಿಯ ಬಿಜೆಪಿ ಪಕ್ಷದ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ: Ballari: ಹಳೇ ದೋಸ್ತಿಗಳು ಬಿ ಶ್ರೀರಾಮುಲು ಮತ್ತು ಸಂತೋಷ್ ಲಾಡ್ ಸಂಡೂರು ಜಾತ್ರೆಯಲ್ಲಿ ಭೇಟಿಯಾದಾಗ ಹೇಗೆ ವರ್ತಿಸಿದರು ಗೊತ್ತಾ?

ರಾಜಕೀಯದಲ್ಲಿರೋವಾಗಲೇ ಕೈಬೀಸಿ ಕರೆದಿತ್ತು ಪೊಲೀಸ್ ಇಲಾಖೆ

ಅದು 2009 ರಲ್ಲಿ ಪೊಲೀಸ್ ಇಲಾಖೆ ಸಬ್ ಇನ್ಸಪೆಕ್ಟರ್ ಹುದ್ದೆಗಳಿಗೆ ನೇಮಕಾತಿ ಕರೆದಿತ್ತು. ಒಟ್ಟು 384 ಹುದ್ದೆಗಳಿಗೆ ಕರೆ ಮಾಡಿದ್ದ ವೇಳೆ ತಾಲೂಕು ಪಂಚಾಯತಿ ಸದಸ್ಯರಾಗಿದ್ದ ಮಹೇಂದ್ರ ನಾಯಕ ಸಬ್ ಇನ್ಸಪೆಕ್ಟರ್ ಹುದ್ದೆಗೆ ಪರೀಕ್ಷೆ ಬರೆದು ನೇರ ನೇಮಕಾತಿ ಮೂಲಕ ಸಬ್ ಇನ್ಸಪೆಕ್ಟರ್ ಆಗಿ ನೇಮಕವಾದರು. ಸಬ್ ಇನ್ಸಪೆಕ್ಟರ್ ಆದ ಬಳಿಕ ಇನ್ನೂ ಮುರು ತಿಂಗಳೋ ಅವಧಿಯಿದ್ದ ತಾಲೂಕು ಪಂಚಾಯತಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಸಬ್ ಇನ್ಸಪೆಕ್ಟರ್ ಆಗಿ ಸೇವೆಗೆ ಹಾಜರಾದರು. ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸಪೆಕ್ಟರ್ ಆಗಿ ಸೇವೆಗೆ ಅಣಿಯಾದರು. ಅಲ್ಲಿಂದ ಧಾರವಾಡ, ವಿಜಯಪುರ ಬಾಗಲಕೋಟೆ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸೇವಾ ಹಿರಿತನದ ಹಿನ್ನಲೆ ಇನ್ಸಪೆಕ್ಟರ್ ಆಗಿ ಕಳೆದ ಒಂದೂವರೆ ವರ್ಷದ ಹಿಂದೆ ಪದೋನ್ನತಿ ಹೊಂದಿದ ಮಹೇಂದ್ರ ನಾಯಕ ಸದ್ಯ ಬಾಗಲಕೋಟೆ ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಫೆಬ್ರವರಿ 1 ರಂದು ಪೊಲೀಸ್ ಇಲಾಖೆಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಬಿಜೆಪಿ ಹಾಗೂ ಆರ್​ಎಸ್​ಎಸ್ ಸಂಪರ್ಕವೇ ಬಿಜೆಪಿ ಟಿಕೆಟ್ ಭರವಸೆ

ಇನ್ಸಪೆಕ್ಟರ್ ಮಹೇಂದ್ರ ನಾಯಕರ ಮೊದಲಿಂದಲೂ ಎಬಿವಿಪಿ, ಭಜರಂಗ ದಳ ಜೊತೆಗೆ ಹಿಂದೂಪರ ಸಂಘಟನೆಗಳಲ್ಲಿ ಗುರುತಿಸಿಕೊಂಡು ಬಂದವರು. ತಾಲೂಕಾ ಪಂಚಾಯತಿ ಸದಸ್ಯರಾಗಿದ್ದಾಗಲೇ ಪೊಲೀಸ್ ಇಲಾಖೆಗೆ ಸೇರಿದ್ದರು. ಇದೀಗಾ ನಾಗಠಾಣ ಎಸ್ಟಿ ಮೀಸಲು ಕ್ಷೇತ್ರದ ಮೇಲೆ ಕಣ್ಣಿಟ್ಟಿರೋ ನಾಯಕ್ ಶತಾಯ ಗತಾಯವಾದರೂ ಟಿಕೆಟ್ ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ. ಮೊದಲ ಹಂತವಾಗಿ ಸರ್ಕಾರಿ ಸೇವೆಗೆ ಅದರಲ್ಲೂ ಪೊಲೀಸ್ ಇಲಾಖೆಯ ಸೇವೆಗೆ ರಾಜೀನಾಮೆ ಸಲ್ಲಿಸಿ ನಾಗಠಾಣ ಎಸ್ಸಿ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಲು ಮುಂದಾಗಿದ್ದಾರೆ. ಇದೇ ಕ್ಷೇತ್ರದ ಮೇಲೆ ಸಚಿವ ಗೋವಿಂದ ಕಾರಜೋಳ ಪುತ್ರ ಗೋಪಾಲ ಕಾರಜೋಳ ಸಹ ಕಣ್ಣಿದ್ದು ಅವರೂ ಸಹ ಪ್ರಭಲ ಆಕಾಂಕ್ಷಿಯಾಗಿದ್ದಾರೆ. ಟಿಕೆಟ್ ಗಾಗಿ ಲಾಭಿ ನಡೆಸಿದ್ದಾರೆ. ಕಳೆದ 2018 ರಲ್ಲಿಯೂ ಟಿಕೆಟ್ ಗಾಗಿ ಪ್ರಯತ್ನ ಮಾಡಿದ್ದ ಮಹೇಂದ್ರ ನಾಯಕ ಈ ಬಾರಿ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಲೆಕ್ಕಾಚಾರ ಹಾಕಿದ್ಧಾರೆ. ಮೂಲಗಳ ಪ್ರಕಾರ ಬಿಜೆಪಿ ವರಿಷ್ಠರಿಂದ ಹಾಗೂ ಆರ್​ಎಸ್​ಎಸ್ ಸೂಚನೆ ಮೇರೆಗೆ ಇನ್ಸಪೆಕ್ಟರ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Budget 2023: ವಿದೇಶಿ ಮಾರುಕಟ್ಟೆಗಳಲ್ಲಿ ಹೂಡಿಕೆ, ವಿದೇಶ ಪ್ರವಾಸ ಕೈಗೊಳ್ಳುವವರಿಗೂ ತಟ್ಟಲಿದೆ ತೆರಿಗೆ ಬಿಸಿ; ಇಲ್ಲಿದೆ ವಿವರ

ಇನ್ನು ಈ ಬಗ್ಗೆ ಮಾತನಾಡಿದ ಮಹೇಂದ್ರ ನಾಯಕ್ ಅವರು, ವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದೇನೆ. ಎಬಿವಿಪಿ, ಭಜರಂಗ ದಳ ಸೇರಿದಂತೆ ಇತರೆ ಹಿಂದೂಪರ ಸಂಘಟನೆಗಳಲ್ಲಿ ಸಕ್ರೀಯವಾಗಿದ್ದೆ. 2005 ರಿಂದ 2010 ರವರೆಗೆ ಅಲಿಯಾಬಾದ್ ತಾಲೂಕಾ ಪಂಚಾಯತಿ ಕ್ಷೇತ್ರದ ಬಿಜೆಪಿ ಸದಸ್ಯನಾಗಿ ಕೆಲಸ ಮಾಡಿದ ಅನುಭವ ರಾಜಕೀಯದಲ್ಲಿದೆ. ಅವಕಾಶ ಸಿಕ್ಕ ಕಾರಣ 2010 ರಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಕೆಲ ಕಾರಣಗಳಿಂದ ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿದ್ದೇನೆ. ನಾಗಠಾಣ ಎಸ್ಸಿ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಆಕಾಂಕ್ಷಿಯಾಗಿದ್ದೇನೆ. ಬಿಜೆಪಿ ರಾಜ್ಯ ಹಾಗೂ ಕೇಂದ್ರ ನಾಯಕರು ಈ ಬಾರಿ ನನಗೆ ಅವಕಾಶ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.

ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:41 am, Thu, 2 February 23

ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ