ಮಂಗಳವಾರ ಲಂಡನ್‌ನಲ್ಲಿ ಬೊನ್ಹಾಮ್ಸ್ನಿಂದ (Bonhams)ಹರಾಜು ಮಾಡಿದ ಟಿಪ್ಪು ಸುಲ್ತಾನ್‌ನ ಖಡ್ಗವು (Tipu Sultan’s sword) ಈ ಹಿಂದೆ ಮದ್ಯದ ದೊರೆ ವಿಜಯ್ ಮಲ್ಯ (Vijay Mallya) ಅವರ ಒಡೆತನದಲ್ಲಿತ್ತು. 2018 ರಲ್ಲಿ ಲಂಡನ್ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ, ಮಲ್ಯ ಅವರ ವಕೀಲರು ಈ ಬಗ್ಗೆ ಏನೂ ಗೊತ್ತಿಲ್ಲ ಎಂದು ಹೇಳಿದ್ದರು. 2004 ರಲ್ಲಿ ವಿಜಯ್ ಮಲ್ಯ ಖರೀದಿಸಿದ್ದ ಅದೇ ಖಡ್ಗ ಇದು. ಮಲ್ಯ ಖರೀದಿಸಿದ ಖಡ್ಗದ ಬೆಲೆ 1.5 ಕೋಟಿ, ನಿನ್ನೆ ಅದೇ ಖಡ್ಗ 145 ಕೋಟಿ ರೂ.ಗೆ ಹರಾಜಾಗಿದೆ ಎಂದು ಸಂಶೋಧಕ ಮತ್ತು ಇತಿಹಾಸಕಾರ ನಿಧಿನ್ ಒಲಿಕಾರ ಹೇಳಿರುವುದಾಗಿ ನ್ಯೂಸ್ 9 ಪ್ಲಸ್ ವರದಿ ಮಾಡಿದೆ.
2016 ರಲ್ಲಿ 13 ಭಾರತೀಯ ಬ್ಯಾಂಕ್‌ಗಳ ಒಕ್ಕೂಟವು ಮಲ್ಯ ಅವರ ಜಾಗತಿಕ ಆಸ್ತಿಯ ಫ್ರೀಜ್ ಆದೇಶವನ್ನು ಬಿಡುಗಡೆ ಮಾಡುವುದರ ವಿರುದ್ಧ ಲಂಡನ್ ಹೈಕೋರ್ಟ್‌ಗೆ ಮನವರಿಕೆ ಮಾಡಲು ಪ್ರಯತ್ನಿಸಿತ್ತು. ಇದಾದ ನಂತರ ಮಲ್ಯ ಅವರು ತಮ್ಮ ಕುಟುಂಬಕ್ಕೆ ದುರದೃಷ್ಟ ತಂದೊಡ್ಡಿದೆ ಎಂದು ಹೇಳಿ ಖಡ್ಗವನ್ನು ನೀಡಿದ್ದರು.
ಖಡ್ಗದ ಹಿಂದಿನ ಮಾಲೀಕರ ಬಗ್ಗೆ ತಿಳಿದುಕೊಳ್ಳಲು ನ್ಯೂಸ್ 9 ಯುಕೆ ಮೂಲದ ಹರಾಜು ಸಂಸ್ಥೆ ಬೊನ್ಹಾಮ್ಸ್ ಅನ್ನು ಸಂಪರ್ಕಿಸಿದೆ.ಆದರೆ ಹಿಂದಿನ ಅಥವಾ ಪ್ರಸ್ತುತ ಮಾಲೀಕರ ಬಗ್ಗೆ ಕಾಮೆಂಟ್ ಮಾಡಲು ಗುಂಪು ನಿರಾಕರಿಸಿತು. ನಮ್ಮ ಮಾರಾಟಗಾರರು ಮತ್ತು ಖರೀದಿದಾರರ ಗುರುತನ್ನು ಬಹಿರಂಗಪಡಿಸಲು ನಮಗೆ ಅಧಿಕಾರವಿಲ್ಲ, ಅದು ನಮ್ಮ ಗೌಪ್ಯತೆ ನೀತಿಗೆ ವಿರುದ್ಧವಾಗಿದೆ ಎಂದು ಬೊನ್ಹಾಮ್ಸ್ ನ ಮಾರಾಟ ಸಂಯೋಜಕ ಎನ್ರಿಕಾ ಮೆಡುಗ್ನೊ ಹೇಳಿದ್ದಾರೆ.
ವಿಜಯ್ ಮಲ್ಯ ಖರೀದಿಸಿದ ಟಿಪ್ಪುವಿನ ಖಡ್ಗ ಮತ್ತು ಮಂಗಳವಾರ ಹರಾಜಿಗಿಟ್ಟ ಖಡ್ಗದಲ್ಲಿ ಒಂದೇ ರೀತಿಯ ಶಾಸನಗಳಿವೆ. ಖಡ್ಗವನ್ನು ಮೇಜರ್ ಜನರಲ್ ಬೈರ್ಡ್ ಅವರಿಗೆ ನೀಡಲಾಯಿತು ಮತ್ತು ಅದರ ಮೇಲೆ ಶಂಶೀರ್-ಇ-ಮಲಿಕ್ ಎಂದು ಕೆತ್ತಲಾಗಿದೆ. ಇತ್ತೀಚೆಗೆ ಹರಾಜಾದ ಟಿಪ್ಪು ಖಡ್ಗದಲ್ಲೂ ಇದು ಕಂಡುಬಂದಿದೆ.
ಹರಾಜಾದ ಟಿಪ್ಪುವಿನ ಖಡ್ಗದ ಮೇಲಿನ ಶಾಸನವು 2004 ರಲ್ಲಿ ಮಲ್ಯ ಖರೀದಿಸಿದ ಶಾಸನದಂತೆಯೇ ಇದೆ.
ದಿ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್ (ಮೂಲ: ಬೊನ್ಹಾಮ್ಸ್)
1799 ರ ಮೇ 4 ರಂದು ಸೆರಿಂಗಪಟ್ಟಂ(ಶ್ರೀರಂಗಪಟ್ಟಣ)ದಲ್ಲಿ ಟಿಪ್ಪು ಸುಲ್ತಾನ್ ಹುತಾತ್ಮರಾದ ನಂತರ ಈ ಖಡ್ಗವನ್ನು ತೆಗೆದುಕೊಳ್ಳಲಾಗಿದೆ
ಮತ್ತು ಸೈನ್ಯದಿಂದ ಮೇಜರ್ ಜನರಲ್ ಬೇರ್ಡ್‌ಗೆ ನೀಡಲಾಯಿತು. ಅವರು ಆಜ್ಞಾಪಿಸಿದ ಆಕ್ರಮಣದಲ್ಲಿ ಅವರ ಧೈರ್ಯ ಮತ್ತು ನಡವಳಿಕೆಯ ಬಗ್ಗೆ ಅವರ ಉನ್ನತ ಅಭಿಪ್ರಾಯದ ಸಂಕೇತವಾಗಿ ಅದನ್ನು ನೀಡಲಾಗಿದೆ. ಈ ಅಕ್ರಮಣದಲ್ಲಿ ಟಿಪ್ಪು ಸುಲ್ತಾನ್ ಕೊಲ್ಲಲ್ಪಟ್ಟರು.
ಖಡ್ಗದ ಮೇಲೆ ಶಂಶೀರ್-ಇ ಮಲಿಕ್ ಅಥವಾ ‘ರಾಜನ ಖಡ್ಗ’ ಎಂದು ಬರೆದಿದೆ
ಯಾ ಅಲ್ಲಾ!ಯಾ ನಾಸಿರ್! ಯಾ ಫತ್ತಾ! ಯಾ ನಾಸಿರ್! ಯಾ ಮುಯಿನ್! ಯಾ ಜಹೀರ್!, ‘ಓ ಅಲ್ಲಾ!, ಓ ಸಹಾಯಕ!! ಓ ಸಹಾಯಕ! ಓ ಸಹಾಯಕ! ಎಂದು ಬರೆಯಲಾಗಿದೆ.
ಸೆರಿಂಗಪಟ್ಟದ ಪತನದ ನಂತರ ಈಸ್ಟ್ ಇಂಡಿಯಾ ಕಂಪನಿಯ ಪಡೆಗಳಿಂದ ಟಿಪ್ಪು ಸುಲ್ತಾನನ ಅರಮನೆಯಿಂದ ಖಡ್ಗವನ್ನು ಲೂಟಿ ಮಾಡಲಾಯಿತು. ಇದರಲ್ಲಿ ಮೈಸೂರು ಹುಲಿ ಯುದ್ಧದಲ್ಲಿ ಹುತಾತ್ಮರಾದರು.
ಅಲ್ಲಿಂದೀಚೆಗೆ ಪರಾರಿಯಾಗಿರುವ ಉದ್ಯಮಿ ಮಲ್ಯ ಅವರನ್ನು ತಲುಪುವ ಮುನ್ನ ಈ ಖಡ್ಗ ಹಲವರ ಒಡೆತನದಲ್ಲಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ