AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ 3 ಪದವೀಧರರು ಕಾರು ಕದ್ದರು! ಆದರೆ ಕದ್ದ ಮೇಲೆ ಗೊತ್ತಾಯ್ತು ತಮಗೆ ಡ್ರೈವಿಂಗೇ ಬರೋಲ್ಲ ಅಂತಾ! ಆ ಮೇಲೆ ಎನು ಮಾಡಿದರು ಗೊತ್ತಾ?

ಮೂವರು ಕಳ್ಳರು ಹೆಂಗೋ ಕಷ್ಟ ಪಟ್ಟು ವಾನ್​​​​ ಒಂದನ್ನು ಕದ್ದಿದ್ದಾರೆ. ಆದ್ರೆ ಮೂವರಿಗೂ ಡ್ರೈವಿಂಗ್​​​ ಬರಲ್ಲ, ಕದ್ದ ಕಾರನ್ನು 10 ಕಿಲೋ ಮೀಟರ್​​ ದೂರ ತಳ್ಳಿಕೊಂಡು ಹೋಗಿದ್ದಾರೆ. ಮುಂದೇನಾಯಿತು ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್​​ ಸ್ಟೋರಿ.

ಆ 3 ಪದವೀಧರರು ಕಾರು ಕದ್ದರು! ಆದರೆ ಕದ್ದ ಮೇಲೆ ಗೊತ್ತಾಯ್ತು ತಮಗೆ ಡ್ರೈವಿಂಗೇ ಬರೋಲ್ಲ ಅಂತಾ! ಆ ಮೇಲೆ ಎನು ಮಾಡಿದರು ಗೊತ್ತಾ?
ಕಾರು​​ ಹೆಂಗೋ ಕದ್ದಾಯಿತು, ಆದ್ರೆ ಡ್ರೈವಿಂಗೇ ಬರಲ್ಲ, Image Credit source: TheStreet
ಅಕ್ಷತಾ ವರ್ಕಾಡಿ
|

Updated on: May 24, 2023 | 5:15 PM

Share

ಮೂವರು ಯುವಕರು ಹೆಂಗೋ ಕಷ್ಟ ಪಟ್ಟು ಕಾರು​​​​ ಒಂದನ್ನು ಕದ್ದಿದ್ದಾರೆ. ಆದ್ರೆ ಮೂವರಿಗೂ ಡ್ರೈವಿಂಗ್​​​ ಬರಲ್ಲ, ಕದ್ದ ಕಾರನ್ನು 10 ಕಿಲೋ ಮೀಟರ್​​ ದೂರ ತಳ್ಳಿಕೊಂಡು ಹೋಗಿದ್ದಾರೆ. ಮುಂದೇನಾಯಿತು ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್​​ ಸ್ಟೋರಿ. ಕಾನ್ಪುರದ ಮೂವರು ಯುವಕರು ಹಣ ಸಂಪಾದಿಸುವ ಉದ್ದೇಶದಿಂದ ಕಳ್ಳತನದ ಮಾರ್ಗವನ್ನು ಹಿಡಿದಿದ್ದಾರೆ. ಇದಕ್ಕಾಗಿ ಮೂವರು ಒಟ್ಟಾಗಿ ಸೇರಿ ಕಾನ್ಪುರದ ದಬೌಲಿ ಪ್ರದೇಶದಲ್ಲಿ ಮಾರುತಿ ವ್ಯಾನ್ ಕದಿಯಲು ಫುಲ್​​​ ಪ್ಲಾನ್​​ ಮಾಡಿದ್ದಾರೆ. ಅವರ ಪ್ಲಾನ್​​ ಯಶಸ್ವಿಯಾಗಿದೆ. ಆದರೆ ವ್ಯಾನ್​​ ಕದ್ದ ಮೇಲೆ ಈ ಖದೀಮರಿಗೆ ಮೂವರಿಗೂ ಡ್ರೈವಿಂಗ್​​ ಬರುವುದಿಲ್ಲ ಎಂಬುದು ಗೋಚರವಾಗಿದೆ.

ಡ್ರೈವಿಂಗ್​​ ಬರಲ್ಲಾ ಎಂದು ಗಾಡಿಯನ್ನು ಅಲ್ಲೇ ಬಿಟ್ಟಿಲ್ಲ, ಬದಲಾಗಿ ರಾತೋರಾತ್ರಿ ಸುಮಾರು 10 ಕಿಲೋಮೀಟರ್‌ ದೂರದ ವರೆಗೆ ಗಾಡಿಯನ್ನು ತಳ್ಳಿಕೊಂಡು ಹೋಗಿದ್ದಾರೆ. 10 ಕಿಲೋಮೀಟರ್‌ ನಂತರ ಬೇಸತ್ತ ಈ ಯುವಕರು ಕಳ್ಳರು ಕಾರಿನ ನಂಬರ್ ಪ್ಲೇಟ್ ತೆಗೆದು ನಿರ್ಜನ ಸ್ಥಳದಲ್ಲಿ ಬಚ್ಚಿಟ್ಟು ಪರಾರಿಯಾಗಿದ್ದಾರೆ. ಮಂಗಳವಾರ ಪೊಲೀಸರು ಮೂವರು ಕಳ್ಳರನ್ನು ಸತ್ಯಂ ಕುಮಾರ್, ಅಮನ್ ಗೌತಮ್ ಮತ್ತು ಅಮಿತ್ ವರ್ಮಾ ಎಂದು ಗುರುತಿಸಿದ್ದಾರೆ. ಸತ್ಯಂ ಮಹಾರಾಜಪುರದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಟೆಕ್ ಓದುತ್ತಿದ್ದರೆ, ಅಮನ್ ಡಿಬಿಎಸ್ ಕಾಲೇಜಿನಲ್ಲಿ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿ ಹಾಗೂ ಅಮಿತ್ ಉದ್ಯೋಗಿ.

ಮತ್ತಷ್ಟು ಓದಿ: ಚಪ್ಪಲಿ ಖರೀದಿಸಲು ದುಡ್ಡಿಲ್ಲದ ಕಾರಣ ತನ್ನ ಮಕ್ಕಳ ಕಾಲಿಗೆ ಪಾಸ್ಟಿಕ್​​ ಸುತ್ತಿಕೊಂಡ ಮಹಿಳೆ

ಮೂವರು ಆರೋಪಿಗಳು ಮೇ 7 ರಂದು ದಬೌಲಿ ಪ್ರದೇಶದಿಂದ ವಾಹನವನ್ನು ಕದ್ದಿದ್ದರು ಎಂದು ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಭೇಜ್ ನಾರಾಯಣ್ ಸಿಂಗ್ ಹೇಳಿದ್ದಾರೆ. ಇಡೀ ದರೋಡೆಗೆ ಅಮಿತ್ ಯೋಜನೆ ರೂಪಿಸಿದ್ದರು ಎಂದು ಎಸಿಪಿ ತಿಳಿಸಿದ್ದಾರೆ. ಕದ್ದ ವಾಹನಗಳನ್ನು ಸತ್ಯಂ ವೆಬ್‌ಸೈಟ್ ಮೂಲಕ ಮಾರಾಟ ಮಾಡುವ ಯೋಜನೆ ಇತ್ತು, ವಾಹನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡದಿದ್ದರೆ, ವೆಬ್‌ಸೈಟ್ ಮೂಲಕ ಮಾರಾಟ ಮಾಡುವುದಾಗಿ ಖದೀಮರು ನಿರ್ಧರಿಸಿದ್ದರು.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: