ಕೊರೊನಾ ಸಡಿಲಿಕೆ ಬಳಿಕ ತಿಮ್ಮಪ್ಪನ ಆದಾಯ ಎಷ್ಟು ಗೊತ್ತಾ?

ತಿರುಪತಿ: ಕೊರೊನಾ ನಡುವೆಯೇ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ, ವಿಶ್ವದ ಶ್ರೀಮಂತ ದೇವರು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡಲಾಗಿದೆ. ಕೊರೊನಾ ಇದ್ದರೂ ಕೋಟ್ಯಂತರ ಭಕ್ತರನ್ನು ಹೊಂದಿರುವ ಬಾಲಾಜಿಯ ನೋಡಲು ಭಕ್ತ ಸಾಗರವೇ ಹರಿದು ಬರುತ್ತಿದೆ. ಇಂತಹ ಕೊರೊನಾ ಸಮಯದಲ್ಲೂ ಕಳೆದ 24ಗಂಟೆಗಳಲ್ಲಿ ಹುಂಡಿಯ ಆದಾಯ 40ಲಕ್ಷ ಬಂದಿದೆ. ಕೊರೊನಾದಿಂದಾಗಿ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಆಡಳಿತ ಮಂಡಳಿ ತಿಮ್ಮಪ್ಪನ ದೇವಾಲಯದ ದರ್ಶನದಲ್ಲಿ ಕಟ್ಟು ನಿಟ್ಟಿನ ನಿಯಮಗಳನ್ನು ಪಾಲಿಸುತ್ತಿದೆ. ಪ್ರತಿ ದಿನಕ್ಕೆ ಭಕ್ತರಿಗೆ ದರ್ಶನ ನೀಡುವ […]

ಕೊರೊನಾ ಸಡಿಲಿಕೆ ಬಳಿಕ ತಿಮ್ಮಪ್ಪನ ಆದಾಯ ಎಷ್ಟು ಗೊತ್ತಾ?

Updated on: Aug 03, 2020 | 8:01 AM

ತಿರುಪತಿ: ಕೊರೊನಾ ನಡುವೆಯೇ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ, ವಿಶ್ವದ ಶ್ರೀಮಂತ ದೇವರು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡಲಾಗಿದೆ. ಕೊರೊನಾ ಇದ್ದರೂ ಕೋಟ್ಯಂತರ ಭಕ್ತರನ್ನು ಹೊಂದಿರುವ ಬಾಲಾಜಿಯ ನೋಡಲು ಭಕ್ತ ಸಾಗರವೇ ಹರಿದು ಬರುತ್ತಿದೆ. ಇಂತಹ ಕೊರೊನಾ ಸಮಯದಲ್ಲೂ ಕಳೆದ 24ಗಂಟೆಗಳಲ್ಲಿ ಹುಂಡಿಯ ಆದಾಯ 40ಲಕ್ಷ ಬಂದಿದೆ.

ಕೊರೊನಾದಿಂದಾಗಿ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಆಡಳಿತ ಮಂಡಳಿ ತಿಮ್ಮಪ್ಪನ ದೇವಾಲಯದ ದರ್ಶನದಲ್ಲಿ ಕಟ್ಟು ನಿಟ್ಟಿನ ನಿಯಮಗಳನ್ನು ಪಾಲಿಸುತ್ತಿದೆ. ಪ್ರತಿ ದಿನಕ್ಕೆ ಭಕ್ತರಿಗೆ ದರ್ಶನ ನೀಡುವ ಸಂಖ್ಯೆಯಲ್ಲೂ ಇಷ್ಟೇ ಭಕ್ತರಿಗೆ ಅವಕಾಶ ಕೊಡಬೇಕೆಂದು ನಿಗದಿ ಮಾಡಿಕೊಂಡಿದೆ. ಕಳೆದ 24ಗಂಟೆಗಳಲ್ಲಿ 40ಲಕ್ಷ ಹುಂಡಿ ಆದಾಯ ಬಂದಿದೆ. 8230 ಭಕ್ತರು ಶ್ರೀವಾರಿ ದರ್ಶನ ಪಡೆದಿದ್ದಾರೆ. 2601ಭಕ್ತರು ತಲೆ ಮಂಡಿ‌ ಸಲ್ಲಿಸಿದ್ದಾರೆ.