ದೆಹಲಿ: ದೇಶದಾಂತ್ಯ ಬೆಲೆ ಏರಿಕೆಯಿಂದ ಟೊಮೆಟೊ ಹುಳಿ ಹೆಚ್ಚಾಗಿದೆ, ಮಾರುಕಟ್ಟೆಯಲ್ಲಿ ಟೊಮೆಟೊ ದರ ಗಗನಕ್ಕೇರಿದೆ ಎಂದು ಜನರು ಬೊಬ್ಬೆ ಹೊಡೆಯುತ್ತಿದ್ದಾರೆ. ಇದೀಗ ಈ ಬೆಲೆ ಏರಿಕೆ ಎಂಬ ಹುಳಿಯನ್ನು ಕಡಿಮೆ ಮಾಡುವುದು ಹೇಗೆ? ಎಂಬುದರ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಬೆಲೆ ಏರಿಕೆ ಸರ್ಕಾರಕ್ಕೆ ದೊಡ್ಡ ತಲೆನೋವವಾಗಿದೆ. ಜನರು ಟೊಮೆಟೊವನ್ನು ಖರೀದಿ ಮಾಡಲು ಜನರು ಹಿಂದೆ -ಮುಂದೆ ನೋಡುತ್ತಿದ್ದಾರೆ. ಅದರೂ ಅನಿವಾರ್ಯ ಎಂದು ಖರೀದಿ ಮಾಡುವ ಪರಿಸ್ಥಿತಿ ಉಂಟಾಗಿದೆ. ಇದೀಗ ಕೇಂದ್ರ ಸರ್ಕಾರ ಟೊಮೆಟೊ ಬೆಲೆ ಕಡಿಮೆ ಮಾಡುವುದು ಹೇಗೆ ಇದಕ್ಕೆ ಪರಿಹಾರ ಏನು ಎಂದು ಜನರ ಮುಂದೆ ಇಟ್ಟಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಟೊಮೆಟೊ ಬೆಲೆ ಏರಿಕೆ ಮತ್ತು ಇಳಿಕೆಯನ್ನು ತಡೆಗಟ್ಟಲು “ಟೊಮೆಟೋ ಗ್ರಾಂಡ್ ಚಾಲೆಂಜ್” ನ್ನು ತಂದಿದೆ. ಇದರಿಂದ ಜನರಿಂದ ಟೊಮೆಟೋ ಉತ್ಪಾದನೆಯ ಹೆಚ್ಚಳ, ಸಂಸ್ಕರಣೆ, ಸಂಗ್ರಹಣೆ ಹೇಗೆ ಎಂಬು ಅಭಿಪ್ರಾಯನ್ನು ಹಂಚಿಕೊಳ್ಳಲು ಈ ಕ್ರಮವನ್ನು ತರಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್
ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿರುವಂತೆ ಈ ವಾರದಿಂದ ನಿಮ್ಮ ಅಭಿಪ್ರಾಯಕ್ಕೆ ಮುಕ್ತ ಅವಕಾಶ ನೀಡಲು ನಾವು ಟೊಮೆಟೋ ಗ್ರಾಂಡ್ ಚಾಲೆಂಜ್ ಎಂಬುದನ್ನು ನಿಮ್ಮ ಮುಂದೆ ಪ್ರಸ್ತುತಿ ಪಡುತ್ತಿದ್ದೇನೆ. ನಿಮ್ಮ ಸಲಹೆ ನಮಗೆ ಬೇಕು. ನಿಮ್ಮ ಅಭಿಪ್ರಾಯದಿಂದ ಇವುಗಳನ್ನು ಕಾರ್ಯರೂಪಕ್ಕೆ ತರುತ್ತೇವೆ. ಈ ಹಿಂದೆ ಈರುಳ್ಳಿ ಬೆಲೆ ಹೆಚ್ಚಾದ ಸಮಯದಲ್ಲೂ ಇಂತಹ ಕಾರ್ಯತಂತ್ರವನ್ನು ಮಾಡಿದ್ದೇವೆ, ಆಗ 600 ಜನರ ಅಭಿಪ್ರಾಯ ಸಂಗ್ರಹ ಮಾಡಿ, ಅದರಲ್ಲಿ 13 ಜನರ ಅಭಿಪ್ರಾಯಕ್ಕೆ ಅನುಗುಣವಾಗಿ ತಜ್ಞರ ಜತೆಗೆ ಚರ್ಚಿಸಿದ್ದೇವೆ ಎಂದು ರೋಹಿತ್ ಕುಮಾರ್ ಸಿಂಗ್ ಹೇಳಿದ್ದಾರೆ.
Chennai | Tomato prices soar to Rs 120 per kilogram in Koyambedu wholesale vegetable market
Today, the price of tomatoes has gone up to Rs 120 per kg. I request the government to intervene and regularise the vegetable prices, says a customer. pic.twitter.com/XGyGXbZXUP
— ANI (@ANI) July 1, 2023
ಇದನ್ನೂ ಓದಿ: Tomato Price: ಕರ್ನಾಟಕದಲ್ಲಿ ದಶಕ ಬಾರಿಸಿದ ಟೊಮ್ಯಾಟೋ ದರ, ಇದಕ್ಕೆ ಕಾರಣ ಏನು?
ಪ್ರಾಥಮಿಕ ಸಂಸ್ಕರಣೆ, ನಂತರದ ಕೊಯ್ಲು, ಸಂಗ್ರಹಣೆ ಮತ್ತು ಟೊಮೆಟೊ ಮೌಲ್ಯೀಕರಣ ಮಾಡಲಾಗುವುದು ಎಂದು ಅವರು ಹೇಳಿದರು. ಟೊಮೆಟೋದ ಮೌಲ್ಯವರ್ಧನೆಯನ್ನು ನೀಡುವಾಗ ನಷ್ಟವನ್ನು ಕಡಿಮೆ ಮಾಡಲು ಸಮಗ್ರ ಕಾರ್ಯತಂತ್ರದ ಪರಿಹಾರವನ್ನು ಹೊರತರುವುದು ಇದರ ಉದ್ದೇಶವಾಗಿದೆ. ಇದನ್ನು ನಾಲ್ಕು ಹಂತಗಳಲ್ಲಿ ಅಭಿಪ್ರಾಯ ಸಂಗ್ರಹ ರೂಪಗಳನ್ನು ಮಾಡಲಾಗುತ್ತದೆ.
1. ಟೊಮೆಟೊ ಪ್ರಭೇದಗಳು, ಉತ್ಪಾದನಾ ತಂತ್ರಜ್ಞಾ, ಹವಾಮಾನ ಪರಿಸ್ಥಿತಿಗಳು, ಸಂಸ್ಕರಣೆ.
2. ಬೆಳೆ ಯೋಜನೆ, ರೈತರಿಗೆ ಮಾರುಕಟ್ಟೆ ಬುದ್ಧಿವಂತಿಕೆ, ರೈತರು/ನರ್ಸರಿಗಳು/ವ್ಯಾಪಾರಿಗಳು/ಗ್ರಾಹಕ ಇಂಟರ್‌ಫೇಸ್.
3. ಕೊಯ್ಲು, ನಿರ್ವಹಣೆ ಮತ್ತು ಸಾರಿಗೆ ಸಮಯ.
4. ನವೀನ ಶೇಖರಣಾ ತಂತ್ರಜ್ಞಾನಗಳು ಮತ್ತು ದೀರ್ಘಾವಧಿಯ ಸಂರಕ್ಷಣೆಗಾಗಿ ಪರಿಹಾರಗಳು ಮತ್ತು ಹಾಳಾಗುವಿಕೆಯಿಂದಾಗಿ ಪ್ಯಾನಿಕ್ ಮಾರಾಟವನ್ನು ಕಡಿಮೆ ಮಾಡುವುದು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:53 am, Sat, 1 July 23