Amarnath Yatra: ಇಂದಿನಿಂದ ಅಮರನಾಥ ಯಾತ್ರೆ ಶುರು, ಮೊದಲ ಬ್ಯಾಚ್ನಲ್ಲಿ ಯಾತ್ರೆಗೆ ಹೊರಟ 3,400 ಭಕ್ತರು
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಯಾತ್ರೆಗೆ ಚಾಲನೆ ನೀಡಿದರು. ಸುಮಾರು 3,400 ಭಕ್ತರ ಮೊದಲ ಬ್ಯಾಚ್ ಶುಕ್ರವಾರ ದಕ್ಷಿಣ ಕಾಶ್ಮೀರದ ಭಗವತಿ ನಗರದ ಬೇಸ್ ಕ್ಯಾಂಪ್ನಿಂದ ಯಾತ್ರೆ ಆರಂಭಿಸಿದೆ.
ಇಂದಿನಿಂದ(ಜುಲೈ.01) ಪ್ರಸಕ್ತ ಸಾಲಿನ ಬಹು ನಿರೀಕ್ಷಿತ ಅಮರನಾಥ ಯಾತ್ರೆ(Amarnath Yatra) ಆರಂಭವಾಗಿದೆ. 3.880 ಮೀಟರ್ ಎತ್ತರದಲ್ಲಿರುವ ಅಮರನಾಥ ದೇಗುಲಕ್ಕೆ ಸುಮಾರು 3,400 ಭಕ್ತರ ಮೊದಲ ಬ್ಯಾಚ್ ಶುಕ್ರವಾರ ದಕ್ಷಿಣ ಕಾಶ್ಮೀರದ ಭಗವತಿ ನಗರದ ಬೇಸ್ ಕ್ಯಾಂಪ್ನಿಂದ ಯಾತ್ರೆ ಆರಂಭಿಸಿದೆ. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಯಾತ್ರೆಗೆ ಚಾಲನೆ ನೀಡಿದರು. ಕಳೆದ ವರ್ಷ ಪವಿತ್ರ ದೇಗುಲಕ್ಕೆ ಭೇಟಿ ನೀಡಿದ್ದ 3,65,000 ಯಾತ್ರಾರ್ಥಿಗಳಿಗೆ ಹೋಲಿಸಿದರೆ ಈ ವರ್ಷ 3,00,000 ಕ್ಕೂ ಹೆಚ್ಚು ಭಕ್ತರು ಅಮರನಾಥ ಯಾತ್ರೆಗೆ ನೋಂದಾಯಿಸಿಕೊಂಡಿದ್ದಾರೆ.
ಅಮರನಾಥ ಯಾತ್ರೆ ಜುಲೈ 1 ರಿಂದ ಪ್ರಾರಂಭವಾಗಿ ಆಗಸ್ಟ್ 31 ರಂದು ಕೊನೆಗೊಳ್ಳಲಿದೆ. 62 ದಿನಗಳ ಯಾತ್ರೆಯು ಸಮುದ್ರ ಮಟ್ಟದಿಂದ 13,500 ಅಡಿ ಎತ್ತರದಲ್ಲಿರುವ ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಭಗವಾನ್ ಶಿವನ ಗುಹಾ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಸಾಕ್ಷಿಯಾಗಿದೆ.
#WATCH | J&K: Administration flags off first batch of pilgrims from Baltal to Amarnath Cave for Amarnath Yatra 2023. pic.twitter.com/PfMImGHdco
— ANI (@ANI) July 1, 2023
ಎರಡು ಮಾರ್ಗಗಳಲ್ಲಿ ಈ ಯಾತ್ರೆ ನಡೆಯಲಿದ್ದು ಅನಂತ್‌ನಾಗ್ ಜಿಲ್ಲೆಯ ನನ್ವಾನ್-ಪಹಲ್ಗಾಮ್ 48 ಕಿ.ಮೀ. ಮಾರ್ಗ ಹಾಗೂ ಗಂಡೆರ್‌ಬಾಲ್ ಜಿಲ್ಲೆಯ ಬಲ್ತಾಳ್‌ನ 14 ಕಿ.ಮೀ. ಮಾರ್ಗವಾಗಿ ಯಾತ್ರೆ ನಡೆಯಲಿದೆ. ಐಟಿಬಿಪಿ ಯೋಧರು ಯಾತ್ರೆಯ ಸಂಪೂರ್ಣ ಭದ್ರತೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಹೆದ್ದಾರಿಯಲ್ಲಿ ಭಾರತೀಯ ಸೇನೆ ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇನ್ನು ಉಧಂಪುರದಲ್ಲಿ ಭದ್ರತಾ ಕರ್ತವ್ಯದಲ್ಲಿ ನಿರತವಾಗಿದ್ದ ವಾಹನ ಅಪಘಾತಕ್ಕೀಡಾದಿ ಮೂವರು ಗಾಯಗೊಂಡಿದ್ದಾರೆ.
ಇದನ್ನೂ ಓದಿ: Amarnath Yatra 2023: ಜುಲೈ 1 ರಿಂದ ಅಮರನಾಥ ಯಾತ್ರೆ, ದೇಗುಲದ ಕುರಿತ ಕುತೂಹಲಕಾರಿ ಸಂಗತಿಗಳು ಇಲ್ಲಿದೆ
ಕೇಂದ್ರಾಡಳಿತ ಪ್ರದೇಶ ಸರ್ಕಾರವು ಆಹಾರ, ವಸತಿ, ವಿದ್ಯುತ್, ನೀರು, ಭದ್ರತೆ ಮತ್ತು ತ್ಯಾಜ್ಯ ನಿರ್ವಹಣೆಗೆ ಸರಿಯಾದ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಲು ಅನೇಕ ಇಲಾಖೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ.
ಯಾತ್ರೆಯ ನೋಂದಣಿಯು ಏಪ್ರಿಲ್ 17 ಪ್ರಾರಂಭವಾಯಿತು. ಅಮರನಾಥ ಯಾತ್ರೆಯ ವೇಳಾಪಟ್ಟಿಯನ್ನು ಸಾಮಾನ್ಯವಾಗಿ ಹಿಂದೂ ಕ್ಯಾಲೆಂಡರ್‌ನ ಪ್ರಕಾರ ಸ್ಕಂದಷಷ್ಠಿಯ ಶುಭ ದಿನದೊಂದಿಗೆ ಹೊಂದಿಕೆಯಾಗುವಂತೆ ಯೋಜಿಸಲಾಗಿದೆ ಮತ್ತು ರಕ್ಷಾ ಬಂಧನ ಎಂದೂ ಕರೆಯಲ್ಪಡುವ ಶ್ರಾವಣ ಪೂರ್ಣಿಮೆಯಂದು ಮುಕ್ತಾಯವಾಗುತ್ತದೆ.
ಪವಿತ್ರ ಗುಹಾ ದೇವಾಲಯದ ನಿರ್ವಹಣೆಯನ್ನು ಶ್ರೀ ಅಮರನಾಥಜಿ ಶ್ರೈನ್ ಬೋರ್ಡ್ (SASB) ಗೆ ವಹಿಸಲಾಗಿದೆ, ಇದನ್ನು 2000 ರಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯ ಶಾಸಕಾಂಗದ ಕಾಯಿದೆಯಿಂದ ಸ್ಥಾಪಿಸಲಾಗಿದೆ, ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರು ಅದರ ಪದನಿಮಿತ್ತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ದೇಶದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ