ಶ್ರೀನಗರ: ಉತ್ತರ ಕಾಶ್ಮೀರದ ಸೊಪೋರ್ ಗ್ರಾಮದಲ್ಲಿ ಹಿರಿಯ ಲಷ್ಕರ್ ಉಗ್ರ ಮುದಾಸೀರ್ ಪಂಡಿತ್ ಮತ್ತು ಇನ್ನಿಬ್ಬರು ಉಗ್ರರು ಹತ್ಯೆಗೀಡಾಗಿದ್ದಾರೆ. ಭದ್ರತಾ ಪಡೆಗಳೊಂದಿಗಿನ ಮುಖಾಮುಖಿ ಭಾನುವಾರ ಸಂಜೆ ತಂತ್ರಾಯಿಪೊರಾ ಬ್ರಾಥ್ ಗ್ರಾಮದಲ್ಲಿ ಆರಂಭವಾಗಿತ್ತು ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಭಯೋತ್ಪಾದನೆಗೆ ಸಂಬಂಧಿಸಿದ ಹಲವಾರು ಅಪರಾಧಗಳ ಹೊರತಾಗಿ ಇತ್ತೀಚೆಗೆ ಮೂವರು ಪೊಲೀಸರು, ಇಬ್ಬರು ಕೌನ್ಸಿಲರ್‌ಗಳು ಮತ್ತು ಇಬ್ಬರು ನಾಗರಿಕರ ಹತ್ಯೆಯಲ್ಲಿ ಪಂಡಿತ್ ಭಾಗಿಯಾಗಿದ್ದಾನೆ ಎಂದು ಕಾಶ್ಮೀರದ ಪೊಲೀಸ್ ಮುಖ್ಯಸ್ಥ (ಐಜಿ) ವಿಜಯ್ ಕುಮಾರ್ ಹೇಳಿದ್ದಾರೆ.
J&K: Three terrorists, including top LeT terrorist Mudasir Pandit, killed in an encounter with security forces at Gund Brath area of Sopore. Security forces are carrying out the operation.
(Visuals deferred by unspecified time) pic.twitter.com/b3fHTayrwZ
— ANI (@ANI) June 21, 2021
ಈ ದಾಳಿಗೆ ಲಷ್ಕರ್-ಎ-ತೈಬಾ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ವಿಜಯ್ ಕುಮಾರ್ ಅವರು ಸೊಪೋರ್‌ನಲ್ಲಿ ಹಿರಿಯ ಸೇನೆ ಮತ್ತು ಸಿಆರ್‌ಪಿಎಫ್ ಅಧಿಕಾರಿಗಳನ್ನು ಭೇಟಿಯಾದರು .ಜೂನ್ 12 ರಂದು ಪೊಲೀಸರ ಮೇಲಿನ ದಾಳಿಯಲ್ಲಿ ಭಾಗಿಯಾದ ಇಬ್ಬರು ಸ್ಥಳೀಯ ಭಯೋತ್ಪಾದಕರಲ್ಲಿ ಮುದಾಸೀರ್ ಪಂಡಿತ್ ಒಬ್ಬರು ಎಂದು ಅವರು ಹೇಳಿದರು.
All three terrorists belong to Lashkar-e-Taiba. Mudasir Pandit, a hardcore terrorist was involved in many killings and was active here. Abdulla was working as LeT chief of Sopore. It’s a big win for security forces: IGP Kashmir Vijay Kumar pic.twitter.com/BlRwJM7g5z
— ANI (@ANI) June 21, 2021
ಇದನ್ನೂ ಓದಿ: Terror Attack: ಉತ್ತರ ಕಾಶ್ಮೀರದಲ್ಲಿ ಉಗ್ರರ ದಾಳಿ; ಭಯೋತ್ಪಾದಕರ ಗುಂಡಿಗೆ ಇಬ್ಬರು ಪೊಲೀಸರು, ಇಬ್ಬರು ನಾಗರಿಕರು ಸಾವು
(Top Lashkar terrorist Mudasir Pandit and two other terrorists have been killed in Jammu and Kashmir encounter)
Published On - 11:49 am, Mon, 21 June 21