ಟ್ರ್ಯಾಕ್ಟರ್​ಗಳ ಗುಡುಗು ಕೇಂದ್ರ ಸರ್ಕಾರಕ್ಕೆ ಕೇಳುವುದೇ? ರೈತ ಚಳುವಳಿಕಾರರ ಪ್ರಶ್ನೆ

| Updated By: ರಾಜೇಶ್ ದುಗ್ಗುಮನೆ

Updated on: Jan 07, 2021 | 8:18 PM

ಪಂಜಾಬ್ ರೈತರ ಸಾವಿರಾರು ಟ್ರ್ಯಾಕ್ಟರ್​ಗಳು ದೆಹಲಿ ಗಡಿ ಭಾಗಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿವೆ. ಕೇಂದ್ರ ಈಗಲಾದರೂ ನಮ್ಮ ಬೇಡಿಕೆ ಒಪ್ಪುವುದೇ ಎಂದು ರೈತ ನಾಯಕರು ಪ್ರಶ್ನಿಸಿದ್ದಾರೆ.

ಟ್ರ್ಯಾಕ್ಟರ್​ಗಳ ಗುಡುಗು ಕೇಂದ್ರ ಸರ್ಕಾರಕ್ಕೆ ಕೇಳುವುದೇ? ರೈತ ಚಳುವಳಿಕಾರರ ಪ್ರಶ್ನೆ
ಪ್ರತಿಭಟನಾ ನಿರತ ರೈತರು
Follow us on

ದೆಹಲಿ: ಸಾವಿರಾರು ಟ್ರ್ಯಾಕ್ಟರ್​ಗಳ ಗಡಗಡ ಗುಡುಗು..ಮುಗಿಲು ಮುಟ್ಟುವ ಕೇಂದ್ರ ಸರ್ಕಾರದ ವಿರುದ್ಧದ ಘೋಷಣೆ..ದೇಶದ ಪಂಜಾಬ್ ರೈತರ ಟ್ರ್ಯಾಕ್ಟರ್ ಆರ್ಭಟಕ್ಕೆ ರಾಜಧಾನಿಯ ಗಡಿ ಭಾಗದ ಹೆದ್ದಾರಿಗಳು ಸಾಕ್ಷಿಯಾದವು. ‘ಈ ಟ್ರ್ಯಾಕ್ಟರ್​ಗಳ ಘೋಷವಾದರೂ ಕೇಂದ್ರ ಸರ್ಕಾರದ ಕಿವಿಗೆ ಬೀಳುತ್ತದೆಯೇ’ ಎಂದು ರೈತ ಚಳುವಳಿಕಾರರು ಟ್ರ್ಯಾಕ್ಟರ್ ಮೆರವಣಿಗೆಯ ವರದಿಗಾಗಿ ಆಗಮಿಸಿದ್ದ ಮಾಧ್ಯಮ ಪ್ರತಿನಿಧಿಗಳನ್ನು ಪ್ರಶ್ನಿಸಿದರು.

ಗಣರಾಜ್ಯೋತ್ಸವದ ಟ್ರ್ಯಾಕ್ಟರ್ ಪರೇಡ್ ತಾಲೀಮು ಯಾವುದೇ ಅಹಿತಕರ ಘಟನೆಗಳಿಲ್ಲದೇ ನಡೆಯಿತು. ಹೆದ್ದಾರಿಯೆಲ್ಲೆಡೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಮೆರವಣಿಗೆಯುದ್ದಕ್ಕೂ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಪಂಜಾಬ್ ರೈತರು ಘೋಷಣೆ ಕೂಗಿದರು.

ಎಲ್ಲೆಲ್ಲಿ ಟ್ರ್ಯಾಕ್ಟರ್ ಮೆರವಣಿಗೆ?
ದೆಹಲಿ ಹರಿಯಾಣ ಗಡಿಯ ನಾಲ್ಕು ಸ್ಥಳಗಳಿಂದ ರೈತರ ಟ್ರ್ಯಾಕ್ಟರ್​ಗಳು ಮೆರವಣಿಗೆ ಹೊರಟವು. ಸಿಂಘುವಿನಿಂದ ಟಿಕ್ರಿ ಗಡಿ ಭಾಗಕ್ಕೆ, ಟಿಕ್ರಿಯಿಂದ ಕುಂಡ್ಲಿ ಗಡಿ ಭಾಗಕ್ಕೆ, ಘಾಜಿಪುರದಿಂದ ಪಲ್ವಾಲ್ ಗಡಿ ಪ್ರದೇಶಕ್ಕೆ, ರೇವಾಸನ್​ನಿಂದ ಪಲ್ವಾಲ್​ ಗಡಿ ಭಾಗಕ್ಕೆ ಟ್ರ್ಯಾಕ್ಟರ್​ಗಳು ಮೆರವಣಿಗೆ ಹೊರಟವು.

ಸುಲ್ತೇಜ್ ಯಮುನಾ ಲಿಂಕ್ ಕುರಿತು ಚರ್ಚೆ
ಹರಿಯಾಣದ ಸ್ವತಂತ್ರ ಶಾಸಕ, ಯುವ ಕಿಸಾನ್ ಸಂಘರ್ಷ ಸಮಿತಿಯ ಅಧ್ಯಕ್ಷ ನರೇಶ್ ಯಾದವ್, ರೈತ ನಾಯಕರೊಂದಿಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್​ರನ್ನು ಭೇಟಿ ಮಾಡಿದ್ದಾರೆ. ಸುಲ್ತೇಜ್ ಯಮುನಾ ಲಿಂಕ್​ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಕ್ಕೆ ತರುವಂತೆ ಅವರು ಕೃಷಿ ಸಚಿವರನ್ನು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಅಲ್ಲದೇ ತೈಲಬೆಲೆ ಏರಿಕೆಯ ಕುರಿತೂ ಕೇಂದ್ರ ಸರ್ಕಾರವನ್ನು ಟೀಕಿಸುರುವ ಅವರು, ಮಧ್ಯಮ ವರ್ಗ, ಬಡವರು ಮತ್ತು ರೈತರ ಮೇಲೆ ಸರ್ಕಾರ ಗಧಾ ಪ್ರಹಾರವೆಸಗುತ್ತಿದೆ ಎಂದಿದ್ದಾರೆ. ಯುಪಿಎ ಸರ್ಕಾರದಲ್ಲಿದ್ದ ತೈಲಬೆಲೆಯನ್ನೇ ಜಾರಿಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ.

ಟ್ರ್ಯಾಕ್ಟರ್​ ಪೆರೇಡ್​ಗೆ​ ಹರಿಯಾಣ ಯುವತಿಯರ ಸಿದ್ಧತೆ; ಗಣರಾಜ್ಯೋತ್ಸವದಂದು ಇವರೂ ದೆಹಲಿಗೆ ಧಾವಿಸಲಿದ್ದಾರೆ