ಅಂತ್ಯ ಸಂಸ್ಕಾರಕ್ಕೆ ಹಣ ಪಡೆಯಲು ಶವವನ್ನೇ ಬ್ಯಾಂಕ್ಗೆ ಹೊತ್ತೊಯ್ದ ಗ್ರಾಮಸ್ಥರು!
ಗ್ರಾಮಸ್ಥರು ಮಹೇಶ್ ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದರು. ಆದರೆ, ಯಾರೊಬ್ಬರೂ ಹಣ ನೀಡಲು ಸಿದ್ಧರಿರಲಿಲ್ಲ. ಹೀಗಾಗಿ ಮನೆಯಲ್ಲಿ ಏನಾದರೂ ಬೆಲೆ ಬಾಳುವ ವಸ್ತು ಇದೆಯೇ ಎನ್ನುವುದನ್ನು ಹುಡುಕಿದ್ದಾರೆ. ಈ ವೇಳೆ ಕಂಡಿದ್ದು ಪಾಸ್ಬುಕ್.
ಪಾಟ್ನಾ: ಅಂತ್ಯಸಂಸ್ಕಾರಕ್ಕೆ ಹಣ ನೀಡಲು ಆಗ್ರಹಿಸಿ ಊರಿನವರು ರೈತನ ಹೆಣವನ್ನು ಬ್ಯಾಂಕ್ಗೆ ತೆಗೆದುಕೊಂಡು ಹೋದ ಘಟನೆ ಪಾಟ್ನಾದಲ್ಲಿ ನಡೆದಿದೆ.
ಮೃತ ರೈತನ ಹೆಸರು ಮಹೇಶ್ ಯಾದವ್. ವಯಸ್ಸು 55. ಮಹೇಶ್ಗೆ ಕುಟುಂಬದವರು ಎಂದು ಯಾರೊಬ್ಬರೂ ಇರಲಿಲ್ಲ. ಅನೇಕ ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಇವರು ಮಂಗಳವಾರ ಮೃತಪಟ್ಟಿದ್ದು, ಊರಿನವರಿಗೆ ತಡವಾಗಿ ವಿಚಾರ ಗೊತ್ತಾಗಿದೆ.
ಗ್ರಾಮಸ್ಥರು ಮಹೇಶ್ ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದರು. ಆದರೆ, ಯಾರೊಬ್ಬರೂ ಹಣ ನೀಡಲು ಸಿದ್ಧರಿರಲಿಲ್ಲ. ಹೀಗಾಗಿ ಈ ರೈತನ ಮನೆಯಲ್ಲಿ ಏನಾದರೂ ಬೆಲೆ ಬಾಳುವ ವಸ್ತು ಇದೆಯೇ ಎನ್ನುವುದನ್ನು ಹುಡುಕಿದ್ದರು. ಆದರೆ, ಏನು ಸಿಕ್ಕಿಲ್ಲ. ಈ ವೇಳೆ ಬ್ಯಾಂಕ್ ಪಾಸ್ಬುಕ್ ನೋಡಿದಾಗ ಮಹೇಶ್ ಖಾತೆಯಲ್ಲಿ 1.17 ಲಕ್ಷ ರೂಪಾಯಿ ಇತ್ತು.
ಬ್ಯಾಂಕ್ಗೆ ತೆರಳಿದಾಗ ಹಣ ನೀಡೋಕೆ ಬ್ಯಾಂಕ್ ಮ್ಯಾನೆಜರ್ ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಾದ ಗ್ರಾಮಸ್ಥರು ಶವವವನ್ನೇ ತೆಗೆದುಕೊಂಡೇ ಬ್ಯಾಂಕ್ಗೆ ತೆರಳಿದ್ದಾರೆ. ಅಂತ್ಯ ಸಂಸ್ಕಾರಕ್ಕೆ ಹಣ ನೀಡುವವರೆಗೆ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ನಂತರ ಸ್ಥಳೀಯ ಪೊಲೀಸರ ಸೂಚನೆ ಮೇರೆಗೆ ಬ್ಯಾಂಕ್ ಮ್ಯಾನೆಜರ್ ಹಣ ನೀಡಿದ್ದಾರೆ ಎನ್ನಲಾಗಿದೆ.
ತಾಯಿಯ ಅಂತ್ಯ ಸಂಸ್ಕಾರಕ್ಕೆ ಕಾದುಕುಳಿತ ಪುತ್ರ.. ತಂದೆ ಕೊಡ್ತಿಲ್ಲ ಜಾಗ!
Published On - 6:36 pm, Thu, 7 January 21