ಆಂಧ್ರದ ಕಾಲೇಜಿನಲ್ಲಿ 4 ದಿನಗಳಲ್ಲಿ ಇಬ್ಬರು ವಿದ್ಯಾರ್ಥಿಗಳಿಂದ ಆತ್ಮಹತ್ಯೆಗೆ ಯತ್ನ

ಕಳೆದ 4 ದಿನಗಳಲ್ಲಿ ಒಂದೇ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕಾಲೇಜಿನಲ್ಲಿ ನಡೆದಿದೆ. ಶ್ರೀನಿವಾಸ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಸ್ಟಡೀಸ್ (SITAMS) ನಲ್ಲಿ ಓದುತ್ತಿರುವ ರುದ್ರ ಮೂರ್ತಿ ಎಂಬ ವಿದ್ಯಾರ್ಥಿಯು ಕಾಲೇಜು ಕಟ್ಟಡದ ಮೂರನೇ ಮಹಡಿಯಿಂದ ಹಾರಿದ್ದಾನೆ. ಅದೇ ಕಾಲೇಜಿನ ಮತ್ತೊಬ್ಬ ಎಂಜಿನಿಯರಿಂಗ್ ವಿದ್ಯಾರ್ಥಿನಿ ನಂದಿನಿ ರೆಡ್ಡಿ ಮೂರನೇ ಮಹಡಿಯಿಂದ ಹಾರಿದ ನಾಲ್ಕು ದಿನಗಳ ನಂತರ ಈ ಘಟನೆ ನಡೆದಿದೆ.

ಆಂಧ್ರದ ಕಾಲೇಜಿನಲ್ಲಿ 4 ದಿನಗಳಲ್ಲಿ ಇಬ್ಬರು ವಿದ್ಯಾರ್ಥಿಗಳಿಂದ ಆತ್ಮಹತ್ಯೆಗೆ ಯತ್ನ
ಪ್ರಾತಿನಿಧಿಕ ಚಿತ್ರ

Updated on: Nov 05, 2025 | 2:53 PM

ಚಿತ್ತೂರು, ನವೆಂಬರ್ 05: ಕಳೆದ 4 ದಿನಗಳಲ್ಲಿ ಒಂದೇ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕಾಲೇಜಿನಲ್ಲಿ ನಡೆದಿದೆ. ಶ್ರೀನಿವಾಸ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಸ್ಟಡೀಸ್ (SITAMS) ನಲ್ಲಿ ಓದುತ್ತಿರುವ ರುದ್ರ ಮೂರ್ತಿ ಎಂಬ ವಿದ್ಯಾರ್ಥಿಯು ಕಾಲೇಜು ಕಟ್ಟಡದ ಮೂರನೇ ಮಹಡಿಯಿಂದ ಹಾರಿದ್ದಾನೆ.

ಅದೇ ಕಾಲೇಜಿನ ಮತ್ತೊಬ್ಬ ಎಂಜಿನಿಯರಿಂಗ್ ವಿದ್ಯಾರ್ಥಿನಿ ನಂದಿನಿ ರೆಡ್ಡಿ ಮೂರನೇ ಮಹಡಿಯಿಂದ ಹಾರಿದ ನಾಲ್ಕು ದಿನಗಳ ನಂತರ ಈ ಘಟನೆ ನಡೆದಿದೆ. ಪ್ರಸ್ತುತ ಅವರು ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಗಂಭೀರವಾಗಿದೆ.

ಸೋಮವಾರ ಮಧ್ಯಾಹ್ನ ಸುಮಾರು 2.10 ರ ಸುಮಾರಿಗೆ ರುದ್ರ ಕಾಲೇಜು ಕಟ್ಟಡದ ಗೋಡೆ ಹತ್ತುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸುತ್ತವೆ. ಆತ ಸಮತೋಲನ ಕಾಯ್ದುಕೊಂಡು, ಬಲಕ್ಕೆ ನಡೆದು ನಂತರ ಕಾರಿಡಾರ್‌ನತ್ತ ಇಣುಕುತ್ತಾನೆ. ಅವನು ಯಾರೊಂದಿಗಾದರೂ ಮಾತನಾಡಲು ಪ್ರಯತ್ನಿಸುತ್ತಿದ್ದಾನೋ ಅಥವಾ ಯಾರಾದರೂ ನೋಡುತ್ತಿದ್ದಾರಾ ಎಂದು ಪರಿಶೀಲಿಸಲು ಪ್ರಯತ್ನಿಸುತ್ತಿದ್ದಾನೋ ಎಂಬುದು ಸ್ಪಷ್ಟವಾಗಿಲ್ಲ.

ಮತ್ತಷ್ಟು ಓದಿ:  ಮಂಡ್ಯ ಡಿಸಿ ಕಚೇರಿ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಚಿಕಿತ್ಸೆ ಫಲಿಸದೆ ಸಾವು

ಮೂರನೇ ಮಹಡಿಯಿಂದ ಜಿಗಿಯುವ ಮೊದಲು ಅವನು ಕೆಲವು ಸೆಕೆಂಡುಗಳ ಕಾಲ ಅಲ್ಲೇ ನಿಂತಿದ್ದ. ಆತನನ್ನು ತಮಿಳುನಾಡಿನ ವೆಲ್ಲೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಆತ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದ. ಪೊಲೀಸ್ ಅಧಿಕಾರಿ ಸಾಯಿನಾಥ್ ಅವರ ಪ್ರಕಾರ, ಒಬ್ಬ ಹುಡುಗಿ ತನ್ನ ಪ್ರೀತಿಯ ಪ್ರಸ್ತಾಪವನ್ನು ತಿರಸ್ಕರಿಸಿದ ನಂತರ ರುದ್ರ ನಿರಾಶೆಗೊಂಡಿದ್ದ.

ರುದ್ರ ಮೂರ್ತಿ ಮತ್ತೊಬ್ಬ ಎರಡನೇ ವರ್ಷದ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ್ದ, ಅವಳು, ನಾವು ಮೊದು ಪದವಿ ಪಡೆದು ಉದ್ಯೋಗ ಪಡೆಯೋಣ. ಈಗ ಪ್ರೀತಿಯನ್ನು ನನಗೆ ಒಪ್ಪಿಕೊಳ್ಳುವ ಶಕ್ತಿ ಇಲ್ಲ, ಇನ್ನು ಪೋಷಕರನ್ನು ಒಪ್ಪಿಸಲು ಕೂಡ ಸಾಧ್ಯವಿಲ್ಲ ಎಂದಿದ್ದಳು.

ಮೂರನೇ ವರ್ಷದ ಬಿ.ಟೆಕ್ ಇಸಿಇ ಅಥವಾ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಆಫ್ ಟೆಕ್ನಾಲಜಿ ವಿದ್ಯಾರ್ಥಿನಿ ನಂದಿನಿ ರೆಡ್ಡಿ, ಪರೀಕ್ಷೆಗೆ ಹಾಜರಾಗಲು ಅನುಮತಿ ನಿರಾಕರಿಸಿರುವ ಕಾರಣ ಮೂರನೇ ಮಹಡಿಯಿಂದ ಹಾರಿದ್ದಾರೆ ಎಂದು ವರದಿಯಾಗಿದೆ.

ರೆಡ್ಡಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅವರನ್ನು ಚಿತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ನಂತರ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ