Viral: ಸತತ ಒಂದು ವರ್ಷಗಳಿಂದ ಚಿಲ್ಲರೆ ಹಣ ಕೂಡಿಟ್ಟು ಹೆಂಡ್ತಿಗೆ ಗೋಲ್ಡ್ ಚೈನ್ ಗಿಫ್ಟ್ ನೀಡಿದ ವ್ಯಕ್ತಿ
ಚಿನ್ನದ ಬೆಲೆ ಗಗನಕ್ಕೆ ಏರುತ್ತಿದ್ದು, ಹೀಗಾಗಿ ಮಧ್ಯಮ ಹಾಗೂ ಬಡವರ್ಗದ ಜನರಿಗೆ ಚಿನ್ನ ಕೈಗೆಟುಕದಂತಾಗಿದೆ. ಹೀಗಾಗಿರುವ ವ್ಯಕ್ತಿಯೊಬ್ಬ ತನ್ನ ಮಡದಿಗೆ ಚಿನ್ನದ ಸರ ಕೊಡಿಸಿ ಆಕೆಯನ್ನು ಖುಷಿ ಪಡಿಸಿದ್ದಾನೆ. ಆದರೆ ಪತ್ನಿಗೆ ಒಡವೆ ಖರೀದಿಸಲು ಈ ವ್ಯಕ್ತಿ ಮಾಡಿದ ಕೆಲಸ ನೋಡಿದ್ರೆ ನೀವು ಶಾಕ್ ಆಗ್ತೀರಾ. ಈ ಪೋಸ್ಟ್ ನೆಟ್ಟಿಗರ ಗಮನ ಸೆಳೆಯುತ್ತಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.

ಉತ್ತರ ಪ್ರದೇಶ, ನವೆಂಬರ್ 05: ಹೆಂಗಳೆಯರು ಆಭರಣ (jewellery) ಪ್ರಿಯರು. ತಮ್ಮ ಬಳಿ ಎಷ್ಟೇ ಚಿನ್ನವಿದ್ದರೂ, ಒಡವೆ ಮೇಲಿನ ವ್ಯಾಮೋಹವಂತೂ ಕಡಿಮೆಯಾಗಲ್ಲ. ಹೀಗಾಗಿ ಬರ್ತ್‌ಡೇಗೆ, ಮದ್ವೆ ಆನಿವರ್ಸರಿಗೆ ಚಿನ್ನ ಉಡುಗೊರೆಯಾಗಿ ನೀಡಿ ಎನ್ನುವ ಬೇಡಿಕೆ ಇಟ್ಟೆ ಇಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿಯೂ ತಾನು ಕಷ್ಟ ಪಟ್ಟು ದುಡಿದು ಪೈಸೆ ಪೈಸೆ ಕೂಡಿಟ್ಟ ದುಡ್ಡಲ್ಲಿ ಮಡದಿಗೆ ಚಿನ್ನದ ಸರ ಕೊಡಿಸಿದ್ದಾನೆ. ನಾಣ್ಯಗಳ ಎರಡು ಚೀಲವನ್ನು ಚಿನ್ನದ ಅಂಗಡಿಗೆ ತೆಗೆದುಕೊಂಡು ಬಂದು ಹೆಂಡ್ತಿ ಆಸೆಯನ್ನು ಪೂರೈಸಿದ್ದಾನೆ. ಈ ಘಟನೆಯೂ ಉತ್ತರ ಪ್ರದೇಶದ ಕಾನ್ಪುರದಲ್ಲಿ (Kanpur of Uttar Pradesh) ನಡೆದಿದೆ. ಈ ಕುರಿತಾದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಚಿನ್ನದ ಕೊಡಿಸಿ ಹೆಂಡ್ತಿಗೆ ಸರ್ಪ್ರೈಸ್ ನೀಡಿದ ವ್ಯಕ್ತಿ
ಕಾನ್ಪುರದ ರಮಾದೇವಿ ಪ್ರದೇಶದ ಹೆಚ್‌ಎಎಲ್ ಕಾಲೋನಿ ಬಳಿಯಲ್ಲಿ ಪಾನ್ ಅಂಗಡಿ ಜೀವನ ನಡೆಸುತ್ತಿರುವವರೇ ಈ ಅಭಿಷೇಕ್ ಯಾದವ್. ತನ್ನ ಪಾನ್ ಅಂಗಡಿಗೆ ಬರುವ ಗ್ರಾಹಕರು ನೀಡುವ ನಾಣ್ಯಗಳನ್ನು ಕಳೆದ ಒಂದು ವರ್ಷದಿಂದ ಕೂಡಿಟ್ಟಿದ್ದಾರೆ. ಕೂಡಿಟ್ಟ ನಾಣ್ಯಗಳಲ್ಲಿ ತನ್ನ ಪತ್ನಿಗೆ ಚಿನ್ನದ ಸರ ಕೊಡಿಸಬೇಕೆಂಬ ಆಸೆ ಇತ್ತಂತೆ. ಪತ್ನಿ ತವರು ಮನೆಗೆ ಹೋದದ್ದೇ ಸರಿಯಾದ ಸಂದರ್ಭ ಅಂದುಕೊಂಡು ಆಕೆಯೂ ಮನೆಗೆ ವಾಪಾಸ್ಸು ಬರುವಾಗ ಚಿನ್ನದ ಸರ ನೀಡಿ ಖುಷಿ ಪಡಿಸಲು ಮುಂದಾಗಿದ್ದಾನೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
View this post on Instagram
ಹೀಗಾಗಿ ನಾಣ್ಯಗಳನ್ನು ಸಂಗ್ರಹಿಸಿದ್ದ ಎರಡು ಚೀಲಗಳ ಸಮೇತ ಚಿನ್ನದ ಅಂಗಡಿಗೆ ತೆರಳಿದ್ದಾನೆ. ಅಭಿಷೇಕ್ ಬಳಿ ಬಳಿ ಇದ್ದ ಹಣ 1.05 ಲಕ್ಷ ರೂ. ಆದರೆ ತಾನು ಖರೀದಿಸಿದ್ದ ಚಿನ್ನದ ಸರದ ಬೆಲೆ 1.25 ಲಕ್ಷ ರೂ ಅಂತೆ. ಹೀಗಾಗಿ ಉಳಿದ ಹಣವನ್ನು ಕಂತುಗಳಾಗಿ ಪಾವತಿಸುತ್ತೇನೆ ಎಂದು ಅಂಗಡಿ ಮಾಲೀಕರಿಗೆ ತಿಳಿಸಿದ್ದಾನೆ ಎನ್ನಲಾಗಿದೆ.
ಆಭರಣ ಮಳಿಗೆಗೆ ಎರಡು ಚೀಲಗಳನ್ನು ಹೊತ್ತುಕೊಂಡು ಅಭಿಷೇಕ್ ಅವರನ್ನು ಕಂಡು ಮಾಲೀಕರಿಗೆ ಶಾಕ್ ಆಗಿತ್ತಂತೆ. ಈ ಬಗ್ಗೆ ಪ್ರತಿಕ್ರಿಯಿಸುವ ಮಾಲಿಕ ಮಹೇಶ್ ವರ್ಮಾ ಮೊದಲಿಗೆ ಇಲ್ಲಿ ಏನು ಆಗುತ್ತಿದೆ ಎಂದು ಅರ್ಥವಾಗಲೇ ಇಲ್ಲ. ಆದರೆ ಈ ಚೀಲದಲ್ಲಿ 1 ಲಕ್ಷ ರೂ.ಗಿಂತ ಹೆಚ್ಚು ಮೌಲ್ಯದ ನಾಣ್ಯಗಳಿವೆ ಎಂದು ವ್ಯಕ್ತಿಯೂ ಹೇಳಿದ್ದು, ನಾವು ಎಣಿಸಿದಾಗ.ಚೀಲದಲ್ಲಿ 20 ರೂಪಾಯಿ ನಾಣ್ಯಗಳೇ ಸುಮಾರು 5290 ಇದ್ದು, ಒಟ್ಟು 1.05 ಲಕ್ಷ ರೂ ಆಗಿತ್ತು. ಎರಡು ಚೀಲದ ಈ ನಾಣ್ಯಗಳನ್ನು ಎಣಿಸಲು ಎರಡು ಗಂಟೆಗೂ ಹೆಚ್ಚು ಸಮಯ ಬೇಕಾಯಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಒಂದಲ್ಲ ಎರಡಲ್ಲ ಹತ್ತು ವಿಚಿತ್ರ ಬೇಡಿಕೆಯಿಟ್ಟ ವರ; ಈ ಲಿಸ್ಟ್ ನೋಡಿ ಹೆಣ್ಮಕ್ಕಳು ಶಾಕ್
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು, ಒಬ್ಬ ಬಳಕೆದಾರ ಹೆಂಡ್ತಿ ಮೇಲಿನ ಪ್ರೀತಿಗೆ ಇದುವೇ ಸಾಕ್ಷಿ ಎಂದಿದ್ದಾರೆ. ಇನ್ನೊಬ್ಬರು ಇಂತಹ ಗಂಡನನ್ನು ಪಡೆದ ಆಕೆಯೇ ನಿಜಕ್ಕೂ ಅದೃಷ್ಟವಂತೆ ಎಂದು ಹೇಳಿದ್ದಾರೆ. ಮತ್ತೊಬ್ಬರು ನಿನ್ನ ಹೆಂಡ್ತಿಗೆ ಕೊಡಿಸು ಅದಕ್ಕೇ ಪ್ರಚಾರ ಯಾಕೆ ಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:27 pm, Wed, 5 November 25




