Viral: ಒಂದಲ್ಲ ಎರಡಲ್ಲ ಹತ್ತು ವಿಚಿತ್ರ ಬೇಡಿಕೆಯಿಟ್ಟ ವರ; ಈ ಲಿಸ್ಟ್ ನೋಡಿ ಹೆಣ್ಮಕ್ಕಳು ಶಾಕ್
ಮದುವೆಯಾಗುವ ಪ್ರತಿಯೊಬ್ಬ ಹೆಣ್ಣು ಗಂಡಿಗೂ ಒಂದಷ್ಟು ಆಸೆ ಆಕಾಂಕ್ಷೆಯಿರುವುದು ಸಹಜ. ಹೀಗಾಗಿ ಹುಡುಗ ಅಥವಾ ಹುಡ್ಗಿಯ ಮುಂದೆ ಒಂದಷ್ಟು ಬೇಡಿಕೆಯಿಡುವುದನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೊಬ್ಬ ಯುವಕನ ಬೇಡಿಕೆ ನೋಡಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ. ವರನ ಬೇಡಿಕೆಯ ಪಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಶಾಕ್ ಆಗಿದ್ದಾರೆ.

ಮದುವೆ (Marriage) ಸೀಸನ್‌ಗಳು ಆರಂಭವಾಗಿದೆ. ಹೀಗಾಗಿ ತಮ್ಮ ಮಕ್ಕಳ ಮದ್ವೆಯನ್ನು ಅದ್ದೂರಿಯಿಂದ ಮಾಡ್ತಾರೆ. ಇದೆಲ್ಲರ ನಡುವೆ ಡಿಮ್ಯಾಂಡ್‌ಗಳ ಪಟ್ಟಿ ಮಾತ್ರ ಹೆಚ್ಚುತ್ತಲೇ ಹೋಗುತ್ತದೆ. ಇಲ್ಲೊಬ್ಬ ವರನು ಇದೇ ರೀತಿ ವಿಭಿನ್ನ ಹಾಗೂ ವಿಚಿತ್ರವಾಗಿ ಬೇಡಿಕೆಯಿಟ್ಟಿದ್ದಾನೆ. ಹೌದು, ವರದಕ್ಷಿಣೆಯನ್ನು (dowry) ನಿರಾಕರಿಸಿದ್ರೂ ಈತನದ್ದು ಒಂದಲ್ಲ ಎರಡಲ್ಲ ಹತ್ತು ಬೇಡಿಕೆಗಳು. ಈ ವರನ ಡಿಮ್ಯಾಂಡ್ ಆನ್ಲೈನ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದು, ಮದ್ವೆ ಆಗೋದು ಗ್ಯಾರಂಟಿನಾ ಎಂದು ಪ್ರಶ್ನೆ ಮಾಡಿದ್ದಾರೆ.
ತನ್ನನ್ನು ಮದುವೆಯಾಗಬೇಕಂದ್ರೆ ಈ ಹತ್ತು ಬೇಡಿಕೆಗಳನ್ನು ಈಡೇರಿಸಲೇ ಬೇಕು ಎಂದಿದ್ದಾನೆ. ಈ ವರನ ಬೇಡಿಕೆಯ ಲಿಸ್ಟ್ ಹೀಗಿವೆ.
- ವಿವಾಹ ಪೂರ್ವ ಫೋಟೋ ಶೂಟ್ ಹಾಗೂ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಇರಬಾರದು.
- ವಧು ಲೆಹೆಂಗಾ ಅಲ್ಲ, ಸೀರೆಯನ್ನು ಉಡಬೇಕು,
- ಮದುವೆಯ ಸಮಯದಲ್ಲಿ ಜೋರಾದ ಸಂಗೀತ ಇರಬಾರದು. ಮೃದುವಾದ ವಾದ್ಯ ಸಂಗೀತವನ್ನು ಮಾತ್ರ ನುಡಿಸಬೇಕು.
- ಹೂವಿನ ಹಾರ ಬದಲಾವಣೆಯ ಸಮಯದಲ್ಲಿ ವಧುವರರು ಮಾತ್ರ ಇರಬೇಕು.
- ಹಾರ ಬದಲಾವಣೆಯ ವೇಳೆ ವಧು ವರರನ್ನು ಮೇಲೆತ್ತುವಂತಿಲ್ಲ. ಒಂದು ವೇಳೆ ಇಂತಹ ಆಸೆ ಇರುವವರು ಈ ಸಮಾರಂಭದಿಂದ ಹೊರಗೆ ಹೋಗಬಹುದು.
- ನವವಿವಾಹಿತರನ್ನು ಸಾರ್ವಜನಿಕವಾಗಿ ತಬ್ಬಿಕೊಳ್ಳಲು ಇಲ್ಲವಾದರೆ ಚುಂಬಿಸಲು ಕೇಳುವ ಯಾರನ್ನಾದರೂ ತಕ್ಷಣವೇ ಸ್ಥಳದಿಂದ ಕಳುಹಿಸಲಾಗುತ್ತದೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ

- ಪುರೋಹಿತರು ವಿವಾಹ ವಿಧಿಗಳನ್ನು ಪ್ರಾರಂಭಿಸಿದ ನಂತರ ಅವರಿಗೆ ಯಾರೂ ಅಡ್ಡಿಪಡಿಸುವಂತಿಲ್ಲ.
- ಛಾಯಾಗ್ರಾಹಕರು, ವಿಡಿಯೋಗ್ರಾಫರ್ ಫೋಟೋ ವೀಡಿಯೋಗಾಗಿ ಮದ್ವೆ ಆಚರಣೆಗಳನ್ನು ಅಡ್ಡಿಪಡಿಸುವಂತಿಲ್ಲ ಅಥವಾ ನಿಲ್ಲಿಸುವಂತಿಲ್ಲ, ದೂರವೇ ನಿಂತು ಫೋಟೋ ಅಥವಾ ವಿಡಿಯೋ ತೆಗಿಯಿರಿ.
- ಛಾಯಾಗ್ರಾಹಕರ ಮುಂದೆ ವಧು ವರರು ಕ್ಯಾಮೆರಾಗೆ ಅಸ್ವಾಭಾವಿಕವಾಗಿ ಪೋಸ್ ನೀಡುವುದಿಲ್ಲ.
- ವಿವಾಹ ಸಮಾರಂಭ ಹಗಲಿನಲ್ಲಿ ನಡೆಯಬೇಕು ಹಾಗೂ ಸಂಜೆಯೊಳಗೆ ಪೂರ್ಣಗೊಳ್ಳಬೇಕು. ಅತಿಥಿಗಳಿಗೆ ಯಾವುದೇ ತೊಂದರೆಗೊಳಗಾಗುವುದಿಲ್ಲ. ಸಮಯಕ್ಕೆ ಸರಿಯಾಗಿ ಮನೆಗೆ ಮರಳಬಹುದು ಎಂದು ಉಲ್ಲೇಖಿಸಿದ್ದಾನೆ.
ಇದನ್ನೂ ಓದಿ:ಹಬ್ಬದ ದಿನವೂ ನೆಮ್ಮದಿ ಇಲ್ಲ; ಪತಿಯ ವರ್ತನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಮಹಿಳೆ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಕೆಲವರು ಬೇಡಿಕೆಗಳ ಪಟ್ಟಿ ಸಮಂಜಸವಾಗಿದೆ ಎಂದು ಹೇಳಿದ್ದಾರೆ. ಒಬ್ಬ ಬಳಕೆದಾರ ಈ ರೀತಿ ಡಿಮ್ಯಾಂಡ್ ಇಟ್ಟರೆ ಮದ್ವೆಯಾದಂತೆ ಎಂದಿದ್ದಾರೆ. ಇನ್ನೊಬ್ಬರು ಈ ವ್ಯಕ್ತಿ ಸ್ನೇಹಿತರಿಲ್ಲದ ಮದುವೆಯಲ್ಲಿ ಮೋಜು ಮಾಡುವುದನ್ನು ಬಯಸದ ವ್ಯಕ್ತಿಯಂತೆ ಕಾಣುತ್ತಾನೆ ಎಂದು ಕಾಮೆಂಟ್ ಮಾಡಿದ್ದಾನೆ. ಮತ್ತೊಬ್ಬ ಬಳಕೆದಾರ ಈ ರೀತಿ ಬೇಡಿಕೆಯಿಟ್ಟರೆ ಇವನನ್ನು ಯಾರು ಮದ್ವೆ ಆಗ್ತಾರೆ ಎಂದು ಕೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




