AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಹಬ್ಬದ ದಿನವೂ ನೆಮ್ಮದಿ ಇಲ್ಲ; ಪತಿಯ ವರ್ತನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಮಹಿಳೆ

ದಾಂಪತ್ಯ ಜೀವನವೇ ಹಾಗೆ, ಹೊಂದಾಣಿಕೆಯಲ್ಲದೆ ಹೋದರೆ ಪ್ರತಿಯೊಂದು ಕ್ಷಣವು ಹಿಂಸೆ ಎನಿಸುತ್ತದೆ. ಇಲ್ಲೊಬ್ಬ ಮಹಿಳೆಯೂ ಹಬ್ಬದ ಸಂದರ್ಭ ವೈವಾಹಿಕ ಜೀವನದಲ್ಲಿನ ಸಣ್ಣ ಪುಟ್ಟ ಮನಸ್ತಾಪಗಳು ಹೇಗೆ ನಿಯಂತ್ರಣ ತಪ್ಪಿತು ಎಂದು ವಿವರಿಸಿದ್ದಾಳೆ. ಮಾನಸಿಕ ಹಾಗೂ ದೈಹಿಕವಾಗಿ ನನ್ನ ಮೇಲೆ ಹಲ್ಲೆ ನಡೆಯಿತು ಎಂದು ದಾಂಪತ್ಯ ಜೀವನದ ಕರಾಳ ಅನುಭವವನ್ನು ಹಂಚಿಕೊಂಡಿದ್ದಾಳೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಹಬ್ಬದ ದಿನವೂ ನೆಮ್ಮದಿ ಇಲ್ಲ; ಪತಿಯ ವರ್ತನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಮಹಿಳೆ
ಸಾಂದರ್ಭಿಕ ಚಿತ್ರ
ಸಾಯಿನಂದಾ
|

Updated on: Nov 02, 2025 | 6:01 PM

Share

ಮದುವೆ (Marriage) ಎಂದರೇನೇ ವಿಭಿನ್ನ ವ್ಯಕ್ತಿತ್ವದ ಎರಡು ವ್ಯಕ್ತಿಗಳು ಜೊತೆಗೆ ಬದುಕುವುದು, ಕಷ್ಟಸುಖದಲ್ಲೂ ಜೊತೆಯಾಗುವುದು. ಈ ವೇಳೆಯಲ್ಲಿ ಸಣ್ಣ ಪುಟ್ಟ ಮನಸ್ತಾಪಗಳು ಹಾಗೂ ಜಗಳಗಳು ಬರುವುದು ಸರ್ವೇ ಸಾಮಾನ್ಯ. ಸಣ್ಣದ್ದನ್ನು ದೊಡ್ಡದು ಮಾಡದೇ ಅಲ್ಲಲ್ಲಿಗೆ ಬಿಟ್ಟು ಮುಂದೆ ಸಾಗಿದರೆ ಬದುಕು ಸುಂದರ. ಆದರೆ ಇಲ್ಲೊಬ್ಬ ಮಹಿಳೆಗೆ (woman) ಹಾಗೆ ಆಗಿಲ್ಲ. ಹಬ್ಬದ ದಿನದ ಸಂಭ್ರಮದ ನಡುವೆ ಪತಿಯ ಚುಚ್ಚು ಮಾತುಗಳು ನೆಮ್ಮದಿಯನ್ನೇ ಹಾಳು ಮಾಡಿತ್ತಂತೆ. ವಿಚಿತ್ರವಾಗಿ ವರ್ತಿಸಿದ ಪತಿಯ ನಡವಳಿಕೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾಳೆ.

ಮಹಿಳೆಯೊಬ್ಬರು ರೆಡ್ಡಿಟ್‌ನಲ್ಲಿ (Reddit) ತನ್ನ ದಾಂಪತ್ಯದ ಭಯಾನಕ ಅನುಭವವನ್ನು ಹಂಚಿಕೊಂಡು ಸಣ್ಣ ಪುಟ್ಟ ಮನಸ್ತಾಪ ಹಬ್ಬದ ಸಂಭ್ರಮವನ್ನೇ ಕಸಿದು ಕೊಂಡಿತು ಎಂದಿದ್ದಾಳೆ. ಹಬ್ಬದ ತಯಾರಿಯಲ್ಲೇ ನಾನು ಮುಳುಗಿದ್ದೆ, ಈ ವೇಳೆ ನನ್ನ ಹಾಗೂ ಆತನ ನಡುವೆ ಮನಸ್ತಾಪ ಶುರುವಾಯ್ತು. ಆ ಕ್ಷಣಕ್ಕೆ ಶಾಂತವಾಯಿತು ಎಂದು ಅಂದುಕೊಂಡೆ, ಆದರೆ ಮರುದಿನ ತಿರುವು ಪಡೆದುಕೊಂಡಿತು. ಆರಂಭದಲ್ಲಿ, ನನ್ನ ನ್ಯೂನತೆಗಳನ್ನು ಅರ್ಥಮಾಡಿಕೊಂಡು ಒಪ್ಪಿಕೊಂಡೆ. ಮಾತು ಅಸಹ್ಯಕರವಾಗಿದ್ದು, ಅಲ್ಲಿಗೆ ನಿಲ್ಲಲಿಲ್ಲ. ಅದನ್ನೆಲ್ಲವನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ನಾನು ಎದುರು ಮಾತನಾಡಿದೆ . ಒಬ್ಬ ವ್ಯಕ್ತಿಯು ಎಷ್ಟು ತಡೆದುಕೊಳ್ಳಲು ಸಾಧ್ಯ ಎಂದು ಹೇಳಿದ್ದಾಳೆ.

ಆದರೆ ಈ ಜಗಳವು ಅಲ್ಲಿಗೆ ನಿಲ್ಲಲೇ ಇಲ್ಲ, ಪತಿಯ ಚುಚ್ಚು ಮಾತಿನಿಂದ ಕಣ್ಣು ಮುಚ್ಚಿದ್ರು ನಿದ್ದೆ ಬರಲೇ ಇಲ್ಲ. ದೈಹಿಕವಾಗಿ ತನ್ನ ಮೇಲೆ ಹಲ್ಲೆ ಮಾಡಿದ್ದಾನೆ. ತನ್ನನ್ನು ತಳ್ಳಿದ ಆತ, ಗೋಡೆಗೆ ಹಿಡಿದು ಬಡಿದಿದ್ದಾನೆ. ಎಲ್ಲಾ ವಸ್ತುಗಳನ್ನು ನನ್ನ ಮೇಲೆ ಎಸೆದ. ತನ್ನ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿದ ಕೂಡ. ಆಗಿದ್ದೆಲ್ಲ ಆಗಿ ಹೋಯ್ತು ಎಂದು ಕ್ಷಮಿಸಿ ಏನೋ ಬಿಟ್ಟೆ. ಆದರೆ ಈ ಜಗಳ ಹಾಗೂ ಆತನ ವರ್ತನೆಯಿಂದ ಆಘಾತಕ್ಕೆ ಒಳಗಾಗಿದ್ದೇನೆ. ಇದರ ಬಗ್ಗೆ ಯಾರ ಬಳಿ ಹೇಳಿಕೊಳ್ಳಬೇಕೆಂದು ತಿಳಿದಿಲ್ಲ ಆದರೆ ಆ ರಾತ್ರಿ ತುಂಬಾನೇ ಭಯಾನಕವಾಗಿತ್ತು, ಮರೆಯಲು ಅಸಾಧ್ಯ ಎಂದಿದ್ದಾಳೆ.

ಇದನ್ನೂ ಓದಿ
Image
ದಾಂಪತ್ಯ ಜೀವನದ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
Image
ಮದ್ಯ ಇಲ್ಲ, ಮಾಂಸ ಇಲ್ಲ; ವೈರಲ್ ಆಗ್ತಿದೆ ಈ ವಿಚಿತ್ರ ಇನ್ವಿಟೇಶನ್ ಕಾರ್ಡ್‌
Image
ಗಂಡ ಕೆಲ್ಸ ಮುಗಿಸಿ ಮನೆಗೆ ಬರುತ್ತಿದ್ದಂತೆ ಜಗಳಕ್ಕಿಳಿದ ಹೆಂಡ್ತಿ
Image
ಹೆಂಡ್ತಿ ಬಾಯ್ ಫ್ರೆಂಡ್ ಜೊತೆಯಲ್ಲಿರುವಾಗಲೇ ಪ್ರತ್ಯಕ್ಷನಾದ ಗಂಡ

ಇದನ್ನೂ ಓದಿ:ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಮದ್ವೆ, ಈಗ ಕಣ್ಣೀರಲ್ಲೇ ಕೈ ತೊಳೆಯುತ್ತಿರುವೆ; ನೋವಿನ ಕಥೆ ಬಿಚ್ಚಿಟ್ಟ ಮಹಿಳೆ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಒಬ್ಬ ಬಳಕೆದಾರ ಎಲ್ಲವನ್ನು ಸಹಿಸಿಕೊಳ್ಳುವ ಅಗತ್ಯವಿಲ್ಲ, ನಿಮ್ಗೆ ಸಹಿಸಲಾಗದು ಎನಿಸಿದರೆ ತಿರುಗಿ ನಿಲ್ಲಿ ಎಂದಿದ್ದಾರೆ. ಇನ್ನೊಬ್ಬರು ಎಲ್ಲವನ್ನು ಮರೆತು ಮುಂದೇ ಸಾಗಿ, ತೀರಾ ಕಷ್ಟ ಎನಿಸಿದರೆ ಮನೆಯವರ ಜತೆ ಮಾತನಾಡಿ ಎಂದು ಹೇಳಿದ್ದಾರೆ. ಇಂತಹ ವ್ಯಕ್ತಿಗಳ ಜತೆಗೆ ಬದುಕುವುದು ಕಷ್ಟಕರ. ಈ ರೀತಿಯ ವ್ಯಕ್ತಿಗಳು ಒಮ್ಮೆ ಕ್ಷಮೆ ಕೇಳಿ ಮತ್ತೆ ಅದೇ ರೀತಿ ಮಾಡುತ್ತಾರೆ. ಇದು ನಿಮ್ಮ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ