AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ವಿಮಾನ ಪ್ರಯಾಣದ ವೇಳೆ ವೃದ್ಧ ವ್ಯಕ್ತಿಗೆ ಊಟ ಮಾಡಿಸಿದ ಸೌದಿಯಾ ಏರ್‌ಲೈನ್ಸ್ ಸಿಬ್ಬಂದಿ

ಕಷ್ಟದಲ್ಲಿರುವರಿಗೆ ಸಹಾಯ ಮಾಡುವ, ವೃದ್ಧರನ್ನು ಗೌರವದಿಂದ ಕಾಣುವ ವ್ಯಕ್ತಿಗಳನ್ನು ಕಂಡಾಗ ನಿಜಕ್ಕೂ ಖುಷಿಯಾಗುತ್ತದೆ. ಇದೀಗ ಸೌದಿಯಾ ಏರ್‌ಲೈನ್ಸ್ ಸಿಬ್ಬಂದಿಯೊಬ್ಬರು ತಾವು ಮಾಡಿದ ಕೆಲಸದಿಂದ ಎಲ್ಲರ ಗಮನ ಸೆಳೆದಿದ್ದಾರೆ. ಹೌದು, ವೃದ್ಧ ಪ್ರಯಾಣಿಕರೊಬ್ಬರಿಗೆ ತಮ್ಮ ಕೈಯಾರೆ ಊಟ ಮಾಡಿಸಿದ್ದು, ಈ ಹೃದಯಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ವಿಮಾನ ಪ್ರಯಾಣದ ವೇಳೆ ವೃದ್ಧ ವ್ಯಕ್ತಿಗೆ ಊಟ ಮಾಡಿಸಿದ ಸೌದಿಯಾ ಏರ್‌ಲೈನ್ಸ್ ಸಿಬ್ಬಂದಿ
ವೈರಲ್ ವಿಡಿಯೋImage Credit source: Twitter
ಸಾಯಿನಂದಾ
|

Updated on: Nov 02, 2025 | 2:47 PM

Share

ಇತ್ತೀಚೆಗಿನ ದಿನಗಳಲ್ಲಿ ವಯಸ್ಸಾದ ತಂದೆ ತಾಯಿಯನ್ನು ನೋಡಿಕೊಳ್ಳುವುದೇ ಕೆಲ ಮಕ್ಕಳಿಗೆ ಹೊರೆಯಾಗುತ್ತದೆ. ವೃದ್ಧರ (old man) ಬಗ್ಗೆ ಕಾಳಜಿ ವಹಿಸುವುದು ಹಾಗೂ ಅವರ ಆರೈಕೆ ಮಾಡುವುದೆಂದರೆ ಹೆಚ್ಚುವರಿ ಜವಾಬ್ದಾರಿ ಎನ್ನುವಂತಾಗಿದೆ. ಹೀಗಿರುವಾಗ ಹಿರಿಯರನ್ನು ಗೌರವದಿಂದ ಕಾಣುವ, ಅವರನ್ನು ಕಾಳಜಿ ವಹಿಸುವ ವ್ಯಕ್ತಿಯನ್ನು ಕಂಡಾಗ ಇವತ್ತಿಗೂ ಒಳ್ಳೆಯ ವ್ಯಕ್ತಿಗಳು ಇದ್ದಾರೆ ಎಂದೆನಿಸುತ್ತದೆ. ಇದಕ್ಕೆ ಸಾಕ್ಷಿ ಎನಿಸುವಂತಿದೆ ಈ ದೃಶ್ಯ. ಸೌದಿಯಾ ಏರ್‌ಲೈನ್ಸ್ ನಲ್ಲಿ (Saudi Airlines) ಹೃದಯ ಸ್ಪರ್ಶಿ ಘಟನೆಯೊಂದು ನಡೆದಿದೆ. ಕ್ಯಾಬಿನ್ ಸಿಬ್ಬಂದಿಯೊಬ್ಬರು ಹಿರಿಯ ಪ್ರಯಾಣಿಕರಿಗೆ ಊಟ ಮಾಡಿಸಿದ್ದಾರೆ. ಈ ದೃಶ್ಯವು ನೆಟ್ಟಿಗರ ಹೃದಯ ಗೆದ್ದುಕೊಂಡಿದೆ.

@saudia_aviation ಹೆಸರಿನ ಎಕ್ಸ್ ಖಾತೆಯಲ್ಲಿ ಸೌದಿಯಾ ಏರ್‌ಲೈನ್ಸ್‌ನ ಕ್ಯಾಬಿನ್ ಸಿಬ್ಬಂದಿಯೊಬ್ಬರು ಹಿರಿಯ ಪ್ರಯಾಣಿಕರಿಗೆ ತಮ್ಮ ಕೈಯಾರೆ ಊಟ ಮಾಡಿಸುತ್ತಿರುವುದನ್ನು ಕಾಣಬಹುದು. ಫ್ಲೈಟ್ ಅಟೆಂಡೆಂಟ್ ವೃದ್ಧ ವ್ಯಕ್ತಿಗೆ ಚಮಚದಲ್ಲಿ ಆಹಾರ ತಿನ್ನುತ್ತಿಸುತ್ತಾ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಕ್ಯಾಬಿನ್ ಸಿಬ್ಬಂದಿಯ ಶಾಂತ ಮುಖಭಾವ ಹಾಗೂ ಹಿರಿಯ ವ್ಯಕ್ತಿಗೆ ಊಟ ಮಾಡಿಸುವ ರೀತಿ ನೆಟ್ಟಿಗರ ಹೃದಯಕ್ಕೆ ಹತ್ತಿರವಾಗಿದೆ.

ಇದನ್ನೂ ಓದಿ
Image
ರೈಲು ಹತ್ತಲು ಪರದಾಡುತ್ತಿದ್ದ ವಿಶೇಷ ಚೇತನ ವ್ಯಕ್ತಿಗೆ ಹೆಗಲು ನೀಡಿದ ಪೊಲೀಸ್
Image
ಬೆಂಗಳೂರು ಆಟೋ ಚಾಲಕರ ಪ್ರಾಮಾಣಿಕತೆಗೆ ಈ ಘಟನೆ ಸಾಕ್ಷಿ
Image
ಚರಂಡಿಗೆ ಬಿದ್ದ ಹಸುವನ್ನು ರಕ್ಷಿಸಿ ಮಾನವೀಯತೆ ಮೆರೆದ ವಿದೇಶಿಗ
Image
ರೈಲಿನಲ್ಲಿ ಆಧಾರ್ ಕಾರ್ಡ್ ತೋರಿಸಿ ಟಿಕೆಟ್ ಕೊಡಿ ಎಂದ ಅಜ್ಜಿ

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ರೈಲು ಹತ್ತಲು ಪರದಾಡುತ್ತಿದ್ದ ವಿಶೇಷ ಚೇತನ ವ್ಯಕ್ತಿಗೆ ಹೆಗಲು ನೀಡಿದ ಪೊಲೀಸ್ : ಹೃದಯ ಸ್ಪರ್ಶಿ ವಿಡಿಯೋ

ಅಕ್ಟೋಬರ್ 29 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ನಿಜವಾದ ಮಾನವೀಯತೆ ಹಾಗೂ ಸೇವಾ ಮನೋಭಾವ ಎಂದಿದ್ದಾರೆ. ಇನ್ನೊಬ್ಬರು, ಮಾನವೀಯತೆಗೆ ಸಾಕ್ಷಿ ಈ ದೃಶ್ಯ. ಇದು ನನ್ನ ಮನಸ್ಸನ್ನು ಮುಟ್ಟಿತು. ನನ್ನ ಕಣ್ಣನ್ನು ಒದ್ದೆಯಾಗಿಸಿತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಒಳ್ಳೆಯ ಮನಸ್ಸಿನ ವ್ಯಕ್ತಿಗಳು ಇಂದಿಗೂ ಇದ್ದಾರೆ. ಮತ್ತೆ ಮತ್ತೆ ನೋಡಬೇಕೆನಿಸುವ ದೃಶ್ಯ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ