Video: ಹೆಂಡ್ತಿ ಬಾಯ್ ಫ್ರೆಂಡ್ ಜೊತೆಯಲ್ಲಿರುವಾಗಲೇ ಪ್ರತ್ಯಕ್ಷನಾದ ಗಂಡ, ಮುಂದೇನಾಯ್ತು ನೋಡಿ
ಇತ್ತೀಚೆಗಿನ ದಿನಗಳಲ್ಲಿ ಮದುವೆ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತಿದ್ದು, ವಿವಾಹೇತರ ಸಂಬಂಧಗಳು ಹೆಚ್ಚಾಗುತ್ತಿವೆ. ಇಲ್ಲೊಂದು ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಆದರೆ ಮಹಿಳೆಯೂ ತನ್ನ ಬಾಯ್ ಫ್ರೆಂಡ್ ಜೊತೆಗೆ ಇದ್ದು, ಒಂದೇ ಒಂದು ಸೆಕೆಂಡುಗಳ ಅಂತರದಲ್ಲಿ ಗಂಡನ ಕೈಯಲ್ಲಿ ಸಿಕ್ಕಿ ಬೀಳದೇ ಬಚಾವ್ ಆಗಿದ್ದಾಳೆ. ಈ ವಿಡಿಯೋ ಸದ್ಯ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಈಕೆಯ ಟೈಮ್ ಚೆನ್ನಾಗಿದೆ ಎಂದು ತಮಾಷೆ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವಿವಾಹೇತರ ಹಾಗೂ ಅಕ್ರಮ ಸಂಬಂಧಗಳ ಪ್ರಕರಣಗಳು ಹೆಚ್ಚಾಗಿವೆ. ಮನೆಯಲ್ಲಿ ಹೆಂಡ್ತಿ ಇದ್ದರೂ ಬೇರೊಬ್ಬ ಮಹಿಳೆಯ (women) ಜೊತೆ ಸಂಬಂಧ ಇಟ್ಟುಕೊಳ್ಳುವ ಗಂಡ, ಪರ ಪುರುಷನೊಂದಿಗೆ ಸಂಬಂಧ ಬೆಳೆಸಿ ಗಂಡನ ಕೈಯಲ್ಲಿ ಮಹಿಳೆಯರು ಸಿಕ್ಕಿಬಿದ್ದ ಘಟನೆಗಳ ಬಗ್ಗೆ ನೀವು ಕೇಳಿರುತ್ತೀರಿ. ಆದರೆ, ಈ ದೃಶ್ಯ ನೋಡಿದ ಮೇಲೆ ನಿಮ್ಗೂ ಕೂಡ ಈಕೆಯ ಟೈಮ್ ಚೆನ್ನಾಗಿತ್ತು ಎಂದು ಅನಿಸದೇ ಇರದು. ಹೌದು, ಮಹಿಳೆಯೊಬ್ಬಳು ವಿಮಾನ ನಿಲ್ದಾಣದಲ್ಲಿ (airport) ಬಾಯ್ ಫ್ರೆಂಡ್‌ಗೆ ವಿದಾಯ ಹೇಳಿದ್ದು, ಒಂದೇ ಒಂದು ಸೆಕೆಂಡುಗಳಲ್ಲೇ ಪತಿಯೂ ಹಿಂದೆಯಿಂದ ಬಂದು ಪತ್ನಿಯನ್ನು ಅಪ್ಪಿಕೊಂಡಿದ್ದಾನೆ. ಆದರೆ ಈಕೆ ಮಾತ್ರ ಏನು ಆಗಿಲ್ಲ ಎನ್ನುವಂತೆ ನಟನೆ ಮಾಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
moneytips.uk ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ದೃಶ್ಯದಲ್ಲಿ ಮಹಿಳೆಯೊಬ್ಬಳು ವಿಮಾನ ನಿಲ್ದಾಣದಲ್ಲಿ ತನ್ನ ಗೆಳೆಯನಿಗೆ ವಿದಾಯ ಹೇಳುವುದನ್ನು ಕಾಣಬಹುದು. ಇದಾದ ಕೆಲವೇ ಕೆಲವು ಸೆಕೆಂಡುಗಳ ಅಂತರದಲ್ಲೇ ಹೂವುಗಳನ್ನು ಹಿಡಿದುಕೊಂಡು ಬಂದ ಪತಿಯೂ ಈ ಮಹಿಳೆಯನ್ನು ಅಪ್ಪಿಕೊಂಡಿದ್ದಾನೆ. ಆದರೆ ಮಹಿಳೆಯ ಮಾತ್ರ ಶಾಕ್ ಆಗದೇ ಪತಿಯನ್ನು ಕಂಡು ಜೋರಾಗಿ ನಕ್ಕಿದ್ದು, ನನಗೆ ಆಶ್ಚರ್ಯವಾಯಿತು ಎಂದು ಹೇಳಿ ತನ್ನ ಸಂತೋಷವನ್ನು ಹೊರಹಾಕಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ:Video: ನಡುರಸ್ತೆಯಲ್ಲೇ ಗಂಡನಿಗೆ ಥಳಿಸಿದ ಹೆಂಡ್ತಿ, ವೈರಲ್ ಆಯ್ತು ದೃಶ್ಯ
ಈ ವಿಡಿಯೋ 11 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಈಕೆಯ ನಟನೆಗೆ ಆಸ್ಕರ್ ಪ್ರಶಸ್ತಿ ನೀಡಬೇಕು ಎಂದಿದ್ದಾರೆ. ಈ ದೃಶ್ಯವು ಸಿನಿಮಾದಲ್ಲಿರುವಂತೆ ಇದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಪತಿ ಬಂದೊಡನೆ ಆಕೆಯ ರಿಯಾಕ್ಷನ್ ಹೇಗಿತ್ತು ನೋಡಿ, ಸ್ವಲ್ಪ ಯಾಮಾರಿದ್ರೂ ದೊಡ್ಡ ಯುದ್ಧನೇ ಆಗ್ತಿತ್ತು ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








