AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಮದ್ವೆಯಲ್ಲಿ ಮದ್ಯ, ನಾನ್ ವೆಜ್ ಇರಲ್ಲ; ವಿಚಿತ್ರ ಮದುವೆ ಆಮಂತ್ರಣ ಪತ್ರಿಕೆ ವೈರಲ್

ಇಂದಿನ ಕಾಲದಲ್ಲಿ ಅದ್ದೂರಿ ಮದುವೆ ಜೊತೆಗೆ ದುಬಾರಿ ಬೆಲೆಯ ವಿಶಿಷ್ಟ ಆಮಂತ್ರಣ ಪತ್ರಿಕೆಗಳನ್ನು ಕೂಡ ಮಾಡಿಸ್ತಾರೆ. ಕೆಲವು ಮದುವೆ ಆಮಂತ್ರಣ ಪತ್ರಿಕೆಗಳು ವಿಶೇಷತೆಯಿಂದಲೇ ಗಮನ ಸೆಳೆಯುತ್ತದೆ. ಆದರೆ ಇದೀಗ ಈ ಆಮಂತ್ರಣ ಪತ್ರಿಕೆಯಲ್ಲಿ ಬರೆಯಲಾದ ಕೆಲ ಸಾಲುಗಳು ಮದ್ಯ ಹಾಗೂ ನಾನ್ ವೆಜ್ ಪ್ರಿಯರನ್ನು ನಿರಾಶೆಗೊಳಿಸಿದೆ. ಈ ಆಮಂತ್ರಣ ಪತ್ರಿಕೆಯಲ್ಲಿ ಏನಿದೆ ಎನ್ನುವುದಕ್ಕೆ ಈ ಸ್ಟೋರಿ ಓದಿ.

Viral: ಮದ್ವೆಯಲ್ಲಿ ಮದ್ಯ, ನಾನ್ ವೆಜ್ ಇರಲ್ಲ; ವಿಚಿತ್ರ  ಮದುವೆ ಆಮಂತ್ರಣ ಪತ್ರಿಕೆ ವೈರಲ್
ಮದುವೆ ಆಮಂತ್ರಣ ಪತ್ರಿಕೆImage Credit source: Pinterest/ Instagram
ಸಾಯಿನಂದಾ
|

Updated on:Oct 23, 2025 | 6:30 PM

Share

ಪ್ರತಿಯೊಬ್ಬರು ಕೂಡ ತಮ್ಮ ಮದುವೆ (marriage) ವಿಶೇಷವಾಗಿರಬೇಕು ಎಂದುಕೊಳ್ತಾರೆ. ಹೀಗಾಗಿ ಮದುವೆ ಕಾರ್ಡ್ ಯಿಂದ ಹಿಡಿದು ಪ್ರತಿಯೊಂದು ವಿಷ್ಯಕ್ಕೂ ಹೆಚ್ಚು ಗಮನ ಕೊಡ್ತಾರೆ. ನೀವು ಮದುವೆ ಆಮಂತ್ರಣ ಪತ್ರಿಕೆಯನ್ನು ವಿಭಿನ್ನ ಹಾಗೂ ಆಕರ್ಷಕವಾಗಿ ಮಾಡಿಸುವುದನ್ನು ನೋಡಿರುತ್ತೀರಿ. ಆದರೆ ಇದೀಗ ವೈರಲ್ ಆಗಿರುವ ಮದುವೆ ಆಮಂತ್ರಣ ಪತ್ರಿಕೆಯಲ್ಲಿ (marriage invitation card) ಉಲ್ಲೇಖಿಸಲಾಗಿರುವ ಕೆಲ ಸಾಲುಗಳು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ. ಅದರಲ್ಲೂ ನಾನ್ ವೆಜ್‌ ಹಾಗೂ ಮದ್ಯ ಪ್ರಿಯರಿಗೆ ಬೇಸರ ತರಸಿದೆ. ಈ ಮದ್ವೆ ಆಮಂತ್ರಣ ಪತ್ರಿಕೆ ಕೈಗೆ ತಲುಪಿದ ವ್ಯಕ್ತಿಗಳು ಮದುವೆಗೆ ಹೋಗ್ಬೇಕ ಬೇಡ್ವಾ ಎಂದು ಯೋಚನೆ ಮಾಡಿದ್ರೂ ತಪ್ಪಿಲ್ಲ. ಅಂದಹಾಗೆ, ಈ ಮದ್ವೆ ಇನ್ವಿಟೇಶನ್ ಕಾರ್ಡ್‌ನಲ್ಲಿ ಮಾಂಸ ಹಾಗೂ ಮದ್ಯ ಇಲ್ಲ ಎಂದು ಉಲ್ಲೇಖಿಸಲಾಗಿದೆ. ಈ ಮದುವೆ ಕಾರ್ಡ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

officialraj sisodiya ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್ ನಲ್ಲಿ ಮದುವೆ ಆಮಂತ್ರಣ ಪತ್ರಿಕೆಯನ್ನು ನೋಡಬಹುದು. ರಾಜಸ್ಥಾನದ ಸಿಕಾರ್‌ನ ಅಜಿತ್‌ ಸಿಂಗ್ ಶೇಖಾವತ್ ಅವರ ಕುಟುಂಬಕ್ಕೆ ಸೇರಿದ ಈ ಮದುವೆ ಕಾರ್ಡ್‌ ಇದಾಗಿದೆ. ಸಂಗ್ರಾಮ್ ಸಿಂಗ್, ಪೂಜಾ ಜೋಡಿಯೂ ನವೆಂಬರ್ 2, 2025 ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದರೆ, ಮತ್ತೊಂದು ಜೋಡಿಯಾದ ಯುವರಾಜ್ ಸಿಂಗ್, ಹರ್ಷಿತಾ ರಾಥೋಡ್ ಅವರು ನವೆಂಬರ್ 7, 2025 ರಂದು ವಿವಾಹವಾಗುತ್ತಿದ್ದಾರೆ. ಈ ಜೋಡಿಯ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವರದಕ್ಷಿಣೆ ರಹಿತ ವಿವಾಹದೊಂದಿಗೆ ಮಾಂಸ ಹಾಗೂ ಮದ್ಯ ನಿಷೇಧ ಎಂದು ಬರೆದಿರುವುದನ್ನು ನೋಡಬಹುದು.

ಇದನ್ನೂ ಓದಿ
Image
ಗಂಡ ಕೆಲ್ಸ ಮುಗಿಸಿ ಮನೆಗೆ ಬರುತ್ತಿದ್ದಂತೆ ಜಗಳಕ್ಕಿಳಿದ ಹೆಂಡ್ತಿ
Image
ಹೆಂಡ್ತಿ ಬಾಯ್ ಫ್ರೆಂಡ್ ಜೊತೆಯಲ್ಲಿರುವಾಗಲೇ ಪ್ರತ್ಯಕ್ಷನಾದ ಗಂಡ
Image
ನಡುರಸ್ತೆಯಲ್ಲೇ ಗಂಡನಿಗೆ ಥಳಿಸಿದ ಹೆಂಡ್ತಿ
Image
ಸಮೋಸ ತರಲು ನಿರಾಕರಿಸಿದ ಪತಿ, ಕೋಪದಲ್ಲಿ ಥಳಿಸಿ ಹಲ್ಲೆಗೆ ಯತ್ನಿಸಿದ ಪತ್ನಿ

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಇದನ್ನೂ ಓದಿ: ಟೈಮ್ ಕೊಡದ ಪತಿರಾಯ; ಗಂಡ ಕೆಲ್ಸ ಮುಗಿಸಿ ಮನೆಗೆ ಬರುತ್ತಿದ್ದಂತೆ ಜಗಳಕ್ಕಿಳಿದ ಹೆಂಡ್ತಿ

ಈ ಪೋಸ್ಟ್‌ನ್ನು ಅಧಿಕ ಜನರು ವೀಕ್ಷಿಸಿದ್ದು, ಈ ಆಮಂತ್ರಣ ಪತ್ರಿಕೆಯಲ್ಲಿ ಬರೆದ ಕೆಲವು ಸಾಲುಗಳನ್ನು ಬಹುತೇಕರು ಮೆಚ್ಚಿಕೊಂಡಿದ್ದಾರೆ. ಒಬ್ಬ ಬಳಕೆದಾರ ಪ್ರತಿ ಕುಟುಂಬವು ಇಂತಹ ದಿಟ್ಟ ಹೆಜ್ಜೆಯನ್ನು ಇಡಬೇಕು, ಮದ್ಯ ಹಾಗೂ ಮಾಂಸ ರಹಿತ ಮದುವೆಯನ್ನು ಏರ್ಪಡಿಸಬೇಕು ಎಂದಿದ್ದಾರೆ. ಇನ್ನೊಬ್ಬರು, ಇದು ಸಮಾಜಕ್ಕೆ ಉತ್ತಮ ಸಂದೇಶ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ರೀತಿ ಮಾಡಿದ್ರೆ ಬೇಕಾಬಿಟ್ಟಿ ಖರ್ಚುಗಳಿಗೆ ಕಡಿವಾಣ ಹಾಕಬಹುದು. ಹೆಣ್ಣು ಹೆತ್ತವರು ಸಾಲದಲ್ಲೇ ಮುಳುಗಿ ಏಳುವುದು ತಪ್ಪುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:24 pm, Thu, 23 October 25

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!