Video: ಪೌರಕಾರ್ಮಿಕರ ಜತೆ ಸೇರಿ ಬೆಂಗಳೂರಿನ ಬೀದಿಗಳನ್ನು ಸ್ವಚ್ಛಗೊಳಿಸಿದ ವಿದೇಶಿಗ
ಬೆಂಗಳೂರಿನ ರಸ್ತೆಗುಂಡಿಗಳು ಹಾಗೂ ಕಸದ ಸಮಸ್ಯೆಗಳ ಬಗ್ಗೆ ನಿವಾಸಿಗಳು ಪದೇ ಪದೇ ಕಳವಳ ವ್ಯಕ್ತಪಡಿಸಿದ್ದಾರೆ. ಇದೀಗ ವಿದೇಶಿಗರು ಬೆಂಗಳೂರಿನ ರಸ್ತೆ ಗುಂಡಿಗಳು ಹಾಗೂ ಕಸದ ಸಮಸ್ಯೆಗಳನ್ನು ಎತ್ತಿ ತೋರಿಸುವ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಬೆಂಗಳೂರಿನ ಬೀದಿಗಳನ್ನು ಸ್ವಚ್ಛಗೊಳಿಸಲು ಪೌರಕಾರ್ಮಿಕರ ಜತೆಗೆ ವಿದೇಶಿ ವ್ಯಕ್ತಿಯೊಬ್ಬರು ಕೈಜೋಡಿಸಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ಈ ವ್ಯಕ್ತಿಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿವೆ.

ಬೆಂಗಳೂರು, ನವೆಂಬರ್ 03: ಮಾಯಾನಗರಿ ಬೆಂಗಳೂರಿನಲ್ಲಿ (Bengaluru) ದಿನದಿಂದ ದಿನಕ್ಕೆ ರಸ್ತೆಗುಂಡಿಗಳು ಕಸದ ಸಮಸ್ಯೆ ಹೆಚ್ಚುತ್ತಲೇ ಇದೆ. ಎಷ್ಟೇ ಜಾಗೃತಿ ಮೂಡಿಸಿದ್ರೂ ಕಸ ಎಸೆದು ನಗರ ನೈರ್ಮಲ್ಯ ಹಾಳು ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೆಲ್ಲದರ ನಡುವೆ ವಿದೇಶಿ ವ್ಯಕ್ತಿಯೂ ಪೌರಕಾರ್ಮಿಕರ (Pourakarmikas) ಜೊತೆಗೆ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಐದು ವರ್ಷಗಳ ಭಾರತೀಯ ವೀಸಾವನ್ನು ಪಡೆದು ಬೆಂಗಳೂರಿನಲ್ಲಿ ನೆಲೆಸಿರುವ ಅಮೆರಿಕದ ವ್ಯಕ್ತಿಯೊಬ್ಬರು ಬೆಂಗಳೂರಿನ ಬೀದಿಗಳನ್ನು ಸ್ವಚ್ಛಗೊಳಿಸಿದ್ದು, ಇವರ ಈ ಕೆಲಸವನ್ನು ಎಲ್ಲರೂ ಶ್ಲಾಘಿಸಿದ್ದಾರೆ.
ಟೋನಿ ಕ್ಲೋರ್ (TonyCatoff) ಎಂಬ ಅಮೆರಿಕನ್ ವ್ಯಕ್ತಿ ಎಕ್ಸ್ ಖಾತೆಯಲ್ಲಿ ಪೌರಕಾರ್ಮಿಕರ ಜೊತೆಗೆ ಬೆಂಗಳೂರಿನ ಪಾದಚಾರಿ ಮಾರ್ಗಗಳನ್ನು ಸ್ವಚ್ಛಗೊಳಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಬೆಂಗಳೂರಿನ ಪಾದಚಾರಿ ಮಾರ್ಗಗಳು ಕೊಳಕಾಗಿವೆ ಎಂದು ಕ್ಯಾಲೆಬ್ ಹೇಳಿದರು. ನಾನು ಬಿಬಿಎಂಪಿಯ ಹೀರೋಗಳ ಜೊತೆ ಶ್ವೇತ ಪೌರಕಾರ್ಮಿಕರಾಗಿ ಸೇರುತ್ತಿದ್ದೇನೆ ಎಂದು ಹೇಳಿದೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಈ ವಿಡಿಯೋ ವಿದೇಶಿ ವ್ಯಕ್ತಿಯೊಬ್ಬರು ಲುಂಗಿ ಧರಿಸಿ ಪೌರ ಕಾರ್ಮಿಕರ ಜೊತೆ ಸೇರಿ ಬೆಂಗಳೂರಿನ ಪಾದಚಾರಿ ಮಾರ್ಗಗಳನ್ನು ಸ್ವಚ್ಛಗೊಳಿಸುತ್ತಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
Caleb said Bengaluru’s footpaths are grimey…I said I’m joining the heroes of BBMP as the White Pourakarmika 🧹🇮🇳 https://t.co/eja5nLCjId pic.twitter.com/JnrZli8JhG
— Tony Klor (@TonyCatoff) October 31, 2025
ಇದನ್ನೂ ಓದಿ:ಬೆಂಗಳೂರಿನಲ್ಲಿ ಉಳಿಯಲು 5 ವರ್ಷ ಅವಕಾಶ: ಮೋದಿಗೆ ಧನ್ಯವಾದ ತಿಳಿಸಿದ ಅಮೆರಿಕದ ಉದ್ಯಮಿ
ಈ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಒಬ್ಬ ಬಳಕೆದಾರ ವಿದೇಶಿಗರು ಇಷ್ಟೊಂದು ಜಾಗೃತಿ ಮೂಡಿಸುತ್ತಿರುವುದು ಎಷ್ಟು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ. ಇನ್ನೊಬ್ಬರು, ಸ್ವಚ್ಛ ಭಾರತದ ಮುಂದಿನ ಅಲೆಯನ್ನು ಮುನ್ನಡೆಸುತ್ತಿರುವುದು ಖುಷಿಯ ಸಂಗತಿ , ನಿಮ್ಮ ಮೇಲಿನ ಗೌರವ ಹೆಚ್ಚಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಎಲ್ಲರಿಗೂ ಮಾದರಿಯುತವಾದ ಕೆಲಸ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:20 am, Mon, 3 November 25




