Optical Illusion: ಬೆಡ್ ರೂಮ್‌ನಲ್ಲಿ ಅಡಗಿ ಕುಳಿತಿರುವ ಬೆಕ್ಕನ್ನು ಕಂಡುಹಿಡಿಯುವಿರಾ
ಒಗಟಿನ ಪ್ರಶ್ನೆಗಳನ್ನು ಬಿಡಿಸುವುದು ಖುಷಿಕೊಟ್ಟರೂ ಕೆಲವೊಮ್ಮೆ ಇಂತಹ ಮೋಜಿನ ಆಟಗಳು ತಲೆ ಕೆಡಿಸಿಕೊಳ್ಳುವಂತೆ ಮಾಡುತ್ತವೆ. ತಾಳ್ಮೆ ಹಾಗೂ ಏಕಾಗ್ರತೆಯಿಂದ ಎಷ್ಟು ಪ್ರಯತ್ನ ಪಟ್ಟರೂ ಬಹುತೇಕರಿಗೆ ಈ ಒಗಟು ಬಿಡಿಸಲು ಸಾಧ್ಯವಾಗಲ್ಲ. ಇದೀಗ ಈ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ಕೇವಲ ಹತ್ತು ಸೆಕೆಂಡುಗಳಲ್ಲಿ ಕಂಡುಹಿಡಿಯಬೇಕು.

ಆಪ್ಟಿಕಲ್ ಇಲ್ಯೂಷನ್ (optical illusion) ಅಥವಾ ಒಗಟನ್ನು ಬಿಡಿಸುವಂತಹ ಕೆಲವು ಆಟಗಳು ಎಲ್ಲರ ಗಮನ ಸೆಳೆಯುತ್ತಿರುತ್ತವೆ. ಕೆಲವರು ಇಷ್ಟ ಪಟ್ಟು ಇಂತಹ ಒಗಟನ್ನು ಬಿಡಿಸಲು ಪ್ರಯತ್ನಿಸುತ್ತಾರೆ. ಇನ್ನು ಕೆಲವರು ಈ ಒಗಟಿನತ್ತ ಕಣ್ಣಾಯಿಸಿ ಸಾಧ್ಯವಾಗದೇ ಹೋದಾಗ ಅರ್ಧದಲ್ಲೇ ಕೈ ಚೆಲ್ಲುತ್ತಾರೆ. ಇದೀಗ ಇಂತಹದ್ದೇ ಒಗಟಿನ ಚಿತ್ರವಿದ್ದು, ಇದು ನಿಮ್ಮ ಮೆದುಳಿಗೆ ಕೆಲಸ ನೀಡುತ್ತದೆ. ಮಲಗುವ ಕೋಣೆಯ ಚಿತ್ರದಲ್ಲಿ ಕಳ್ಳ ಬೆಕ್ಕೊಂದು (Cat) ಅಡಗಿ ಕುಳಿತಿದೆ. ಈ ಸಾಕು ಪ್ರಾಣಿಯನ್ನು ಹತ್ತು ಸೆಕೆಂಡುಗಳಲ್ಲಿ ಪತ್ತೆ ಹಚ್ಚಿ ನಿಮ್ಮ ವೀಕ್ಷಣಾ ಸಾಮರ್ಥ್ಯ ಪರೀಕ್ಷಿಸಿಕೊಳ್ಳಿ.
ಈ ಚಿತ್ರದಲ್ಲಿ ಏನಿದೆ?
ರೆಡ್ಡಿಟ್‌ನಲ್ಲಿರುವ ಜನಪ್ರಿಯ ಆರ್/ ಫೈಂಡ್ ದಿ ಸ್ನೈಪರ್ (r/FindTheSniper) ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಚಿತ್ರಕ್ಕೆ ಬೆಕ್ಕನ್ನು ಹುಡುಕಿ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಮಲಗುವ ಕೋಣೆಯ ಚಿತ್ರವಿದೆ. ಬಿಳಿ ಬಣ್ಣದ ಹಾಸಿಗೆ, ನೆಲದ ಮೇಲೆ ಫ್ಯಾನ್, ಗೋಡೆಯ ಮೇಲೆ ಚಿತ್ರಕಲೆ, ಮೂಲೆಯಲ್ಲಿ ಪರದೆಯಿದ್ದು, ಶಾಂತವಾಗಿ ಕಾಣುವ ಈ ಜಾಗದಲ್ಲಿ ಕಳ್ಳ ಬೆಕ್ಕು ಜಾಣತನದಿಂದ ಅಡಗಿ ಕುಳಿತಿದೆ. ಮೊದಲ ನೋಟದಲ್ಲಿ ಸಾಮಾನ್ಯವಾಗಿ ಕಂಡರೂ, ಇಲ್ಲಿ ಟ್ರಿಕ್ಕಿ ಸವಾಲು ಇದಾಗಿದ್ದು, ಈ ಬೆಕ್ಕು ಎಲ್ಲಿದೆ ಎಂದು ಪತ್ತೆ ಹಚ್ಚಬೇಕು. ಈ ಒಗಟು ಬಿಡಿಸಲು ಇರುವ ಸಮಯ ಅವಕಾಶ 10 ಸೆಕೆಂಡುಗಳು ಮಾತ್ರವಾಗಿದ್ದು, ಒಗಟು ಬಿಡಿಸಿ ಜಾಣರೆನಿಸಿಕೊಳ್ಳಿ.
ಈ ಸವಾಲು ಸ್ವೀಕರಿಸಲು ಸಿದ್ಧವಿದ್ದೀರಾ?
ಭ್ರಮೆ ಉಂಟು ಮಾಡುವ ಒಗಟಿನ ಚಿತ್ರಗಳನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಮಲಗುವ ಕೋಣೆಯಲ್ಲಿ ಅಡಗಿ ಕುಳಿತಿರುವ ಬೆಕ್ಕನ್ನು ಕಂಡುಹಿಡಿಯಲು ನೀವು ನಿಮ್ಮ ಏಕಾಗ್ರತೆ ಹಾಗೂ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಿಕೊಳ್ಳಬೇಕು. ಇಲ್ಲಿ ನೀಡಿರುವ ಸಮಯದೊಳಗೆ ಬೆಕ್ಕನ್ನು ಹುಡುಕುವ ಸವಾಲನ್ನು ಸ್ವೀಕರಿಸಲು ಸಿದ್ಧವಿದ್ದೀರಿ ಎಂದಾದರೆ ನಿಮ್ಮ ಸಮಯ ಈಗಲೇ ಆರಂಭವಾಗುತ್ತದೆ.
ಇದನ್ನೂ ಓದಿ:ಈ ಚಿತ್ರದಲ್ಲಿ ಅಡಗಿರುವ ಮೀನನ್ನು ಜಸ್ಟ್ 21 ಸೆಕೆಂಡುಗಳಲ್ಲಿ ಹುಡುಕಿ
ಉತ್ತರ ಇಲ್ಲಿದೆ:
ಎಷ್ಟೇ ತಲೆ ಕೆಡಿಸಿಕೊಂಡರೂ ಈ ಒಗಟಿನ ಉತ್ತರವನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲವೇ. ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಬಹುತೇಕರಿಗೆ ಇಂತಹ ಒಗಟಿನ ಚಿತ್ರವನ್ನು ಹುಡುಕಲು ಕಷ್ಟವಾಗುತ್ತದೆ. ಹೀಗಾಗಿ ನಾವೇ ನಿಮಗೆ ಈ ಮಲಗುವ ಕೋಣೆಯಲ್ಲಿ ಬೆಕ್ಕು ಎಲ್ಲಿದೆ ಎಂದು ಹೇಳುತೇವೆ. ನೀವು ನೆಲದ ಮೇಲೆ ನಿಲ್ಲಿಸಿರುವ ಬಿಳಿ ಫ್ಯಾನ್ ಬಳಿ ನೋಡಿ. ಈ ವಾರ್ಡ್ರೋಬ್ ಬಾಗಿಲಿನ ಕೆಳಗೆ ಬೆಕ್ಕಿನ ಬಾಲ ಹೊರಗೆ ಬಂದಂತೆ ಕಾಣುತ್ತಿದೆ. ಬೆಕ್ಕು ವಾರ್ಡ್ರೋಬ್ ಒಳಗೆ ಇದ್ದು, ನಿಮ್ಮ ಕಣ್ಣಿಗೆ ಬಿಳಿ ಬಣ್ಣದ ಬೆಕ್ಕಿನ ಬಾಲ ಕಾಣಿಸಿತು ಎಂದು ನಾವು ಭಾವಿಸುತ್ತೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




