ಐಐಟಿ ಸೀಟು ವಂಚಿತ ದಲಿತ ವಿದ್ಯಾರ್ಥಿ ನೆರವಿಗೆ ಬಂದ ಸುಪ್ರೀಂಕೋರ್ಟ್

|

Updated on: Sep 30, 2024 | 8:04 PM

ಕಷ್ಟಪಟ್ಟು ಸಂಪಾದಿಸಿದ ಸೀಟನ್ನು ಉಳಿಸಿಕೊಳ್ಳಲು ಅತುಲ್ ಹರಸಾಹಸ ಪಟ್ಟರು. ಅವರು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವನ್ನು ಸಂಪರ್ಕಿಸಿದರು, ಆದರೆ ಸಮಿತಿಯು ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ಅತುಲ್ ಅವರು ಜಾರ್ಖಂಡ್‌ನ ಕೇಂದ್ರದಲ್ಲಿ ಜಂಟಿ ಪ್ರವೇಶ ಪರೀಕ್ಷೆಯನ್ನು (ಜೆಇಇ) ತೆಗೆದುಕೊಂಡ ಕಾರಣ ಜಾರ್ಖಂಡ್ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಹೋಗಿದ್ದಾರೆ

ಐಐಟಿ ಸೀಟು ವಂಚಿತ ದಲಿತ ವಿದ್ಯಾರ್ಥಿ ನೆರವಿಗೆ ಬಂದ ಸುಪ್ರೀಂಕೋರ್ಟ್
ಅತುಲ್ ಕುಮಾರ್
Follow us on

ದೆಹಲಿ ಸೆಪ್ಟೆಂಬರ್ 30: ಸೋಮವಾರ ಮಧ್ಯಾಹ್ನ ಸುಪ್ರೀಂಕೋರ್ಟ್‌ನಿಂದ (Supreme Court) ಹೊರನಡೆಯುತ್ತಿದ್ದಂತೆ ಅತುಲ್ ಕುಮಾರ್ ಮುಖದಲ್ಲಿ  ನೆಮ್ಮದಿಯ ನಗುವಿತ್ತು. ಯಾಕೆಂದರೆ ಸ್ವಲ್ಪ ಸಮಯದ ಹಿಂದೆ, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ತನ್ನ ಅಸಾಧಾರಣ ಅಧಿಕಾರವನ್ನು ಬಳಸಿಕೊಂಡು ಅತುಲ್ ಕುಮಾರ್ ಅವರನ್ನು  ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಕೋರ್ಸ್‌ಗೆ ಸೇರಿಸಲು ಐಐಟಿ ಧನ್‌ಬಾದ್‌ಗೆ ಕೇಳಿತು.

ಉತ್ತರ ಪ್ರದೇಶದ ಮುಜಾಫರ್‌ನಗರದ 18 ವರ್ಷದ ದಲಿತ ಯುವಕ ಈ ವರ್ಷ ದೇಶದ ಅತ್ಯಂತ ಪ್ರತಿಷ್ಠಿತ ಎಂಜಿನಿಯರಿಂಗ್ ಕೋರ್ಸ್‌ಗೆ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾನೆ. ಈತ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರಾಗಿದ್ದು, ದಿನಗೂಲಿ ಕಾರ್ಮಿಕರಾದ ಅವರ ತಂದೆಗೆ ಮಗನ ಸೀಟಿಗಾಗಿ ₹ 17,500 ಪ್ರವೇಶ ಶುಲ್ಕವನ್ನು ಸಕಾಲದಲ್ಲಿ ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ.

ಕಷ್ಟಪಟ್ಟು ಸಂಪಾದಿಸಿದ ಸೀಟನ್ನು ಉಳಿಸಿಕೊಳ್ಳಲು ಅತುಲ್ ಹರಸಾಹಸ ಪಟ್ಟರು. ಅವರು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವನ್ನು ಸಂಪರ್ಕಿಸಿದರು, ಆದರೆ ಸಮಿತಿಯು ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ಅತುಲ್ ಅವರು ಜಾರ್ಖಂಡ್‌ನ ಕೇಂದ್ರದಲ್ಲಿ ಜಂಟಿ ಪ್ರವೇಶ ಪರೀಕ್ಷೆಯನ್ನು (ಜೆಇಇ) ತೆಗೆದುಕೊಂಡ ಕಾರಣ ಜಾರ್ಖಂಡ್ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಹೋಗಿದ್ದಾರೆ. ಐಐಟಿ ಮದ್ರಾಸ್ ಈ ಬಾರಿ ಜೆಇಇ ನಡೆಸಿದ್ದರಿಂದ ಕಾನೂನು ಸೇವಾ ಸಂಸ್ಥೆ ಮದ್ರಾಸ್ ಹೈಕೋರ್ಟ್‌ಗೆ ಮೊರೆ ಹೋಗುವಂತೆ ಸೂಚಿಸಿದೆ. ನಂತರ ಸುಪ್ರೀಂಕೋರ್ಟ್‌ಗೆ ಮೊರೆ ಹೋಗುವಂತೆ ಹೈಕೋರ್ಟ್ ಹೇಳಿತು. ಕೊನೆಗೆ ಸುಪ್ರೀಂ ಅವರಿಗೊಂದು ಪರಿಹಾರ ನೀಡಿತು.

“ನನಗೆ ಸೀಟು ಒದಗಿಸಲಾಗಿದೆ. ನನಗೆ ತುಂಬಾ ಸಂತೋಷವಾಗಿದೆ. ಹಣಕಾಸಿನ ಸಮಸ್ಯೆಯಿಂದ ನನ್ನ ಸೀಟನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಹಳಿತಪ್ಪಿದ ರೈಲು ಈಗ ಹಳಿಗೆ ಬಂದಿದೆ” ಎಂದು ಅತುಲ್ ನಗುತ್ತಾ ಹೇಳಿದರು . ಮುಂದೇನು ಎಂದು ಕೇಳಿದಾಗ, “ನಾನು ಕಷ್ಟಪಟ್ಟು ಓದುತ್ತೇನೆ. ಐಐಟಿ-ಧನ್‌ಬಾದ್‌ನಿಂದ ಎಲೆಕ್ಟ್ರಿಕಲ್ ಇಂಜಿನಿಯರ್ ಆಗುತ್ತೇನೆ” ಎಂಬುದಾಗಿತ್ತು ಅವರ ಉತ್ತರ.

ಈ ಹಿಂದೆ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠವು ಅಂತಹ ಪ್ರತಿಭೆಯನ್ನು ವ್ಯರ್ಥ ಮಾಡಲು ಅನುಮತಿಸುವುದಿಲ್ಲ ಎಂದು ಹೇಳಿದೆ. “ಅವರು ಜಾರ್ಖಂಡ್ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಹೋದರು. ನಂತರ ಅವರನ್ನು ಚೆನ್ನೈ ಕಾನೂನು ಸೇವೆಗಳಿಗೆ  ಮತ್ತು ನಂತರ ಹೈಕೋರ್ಟ್‌ಗೆ ಕಳುಹಿಸಲಾಗಿದೆ. ಅವನು ದಲಿತ ಹುಡುಗ, ಅವನನ್ನು ಒಂದು ಕಡೆಯಿಂದ ಇನ್ನೊಂದೆಡೆಗೆ ಓಡಿಸಲಾಗುತ್ತಿದೆ” ಎಂದು ಪೀಠ ಹೇಳಿದೆ.

ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ 125 ವರ್ಷ ಬದುಕಲಿ; ರಾಜನಾಥ್ ಸಿಂಗ್ ಪ್ರತಿಕ್ರಿಯೆ

ಅರ್ಜಿದಾರರ ಪರ ವಕೀಲರು, ಅತುಲ್ ಅವರ ತಂದೆ ದಿನಕ್ಕೆ ₹ 450 ಗಳಿಸುತ್ತಾರೆ. “17,500 ವ್ಯವಸ್ಥೆ ಮಾಡುವ ಕಾರ್ಯವು ದೊಡ್ಡ ಸಂಗತಿ. ಅವರು ಗ್ರಾಮಸ್ಥರಿಂದ ಹಣವನ್ನು ಸಂಗ್ರಹಿಸಿದರು.” ಅವರು ಪಾವತಿ ಮಾಡಲು ಸಾಧ್ಯವಾಗದ ಕಾರಣ ಪಾವತಿಸುವುದನ್ನು ನಿಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್ ಆಗಿ ನಾವು ಇದನ್ನು ನೋಡಬೇಕಿದೆ” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ಐಐಟಿ ಧನ್‌ಬಾದ್‌ಗೆ ಅದೇ ಬ್ಯಾಚ್‌ನಲ್ಲಿ ಅತುಲ್‌ಗೆ ಪ್ರವೇಶ ನೀಡುವಂತೆ ನ್ಯಾಯಾಲಯವು ಆರ್ಟಿಕಲ್ 142 ರ ಅಡಿಯಲ್ಲಿ ತನ್ನ ಅಸಾಮಾನ್ಯ ಅಧಿಕಾರವನ್ನು ಬಳಸಿತು. ಅಸ್ತಿತ್ವದಲ್ಲಿರುವ ಯಾವುದೇ ವಿದ್ಯಾರ್ಥಿಗೆ ತೊಂದರೆಯಾಗಬಾರದು ಮತ್ತು ಅಭ್ಯರ್ಥಿಗೆ ಸೂಪರ್‌ನ್ಯೂಮರರಿ ಸೀಟು ರಚಿಸಲಿ ಎಂದು ಪೀಠ ಹೇಳಿದೆ. ಮುಖ್ಯ ನ್ಯಾಯಾಧೀಶರು ಅತುಲ್‌ಗೆ “ಆಲ್ ದಿ ಬೆಸ್ಟ್ ಚೆನ್ನಾಗಿ ಓದಿ ಎಂದು ಶುಭ ಹಾರೈಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ