ಮಧ್ಯಪ್ರದೇಶದ ಭಿಂಡ್​ನಲ್ಲಿ ಭಾರತೀಯ ವಾಯುಪಡೆಯ ವಿಮಾನ ಪತನ, ಪೈಲಟ್ ಸುರಕ್ಷಿತ

Indian Air Force Plane Crash ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಬಳಿ ಪತನಗೊಂಡಿರುವ ಭಾರತೀಯ ವಾಯುಪಡೆಯ ಟ್ರೈನರ್ ಜೆಟ್ ಅವಶೇಷ ಭಿಂಡ್​ನಿಂದ 6 ಕಿಮೀ ದೂರದಲ್ಲಿರುವ ಮಂಕಾಬಾದ್‌ನ ಖಾಲಿ ಮೈದಾನದಲ್ಲಿ ಬಿದ್ದಿವೆ.

ಮಧ್ಯಪ್ರದೇಶದ ಭಿಂಡ್​ನಲ್ಲಿ ಭಾರತೀಯ ವಾಯುಪಡೆಯ ವಿಮಾನ ಪತನ, ಪೈಲಟ್ ಸುರಕ್ಷಿತ
ಪತನಗೊಂಡಿರುವ ವಿಮಾನದ ಬಾಲ
Edited By: ರಶ್ಮಿ ಕಲ್ಲಕಟ್ಟ

Updated on: Oct 21, 2021 | 11:41 AM

ನವದೆಹಲಿ: ಭಾರತೀಯ ವಾಯುಪಡೆಯ (Indian Air Force) ಟ್ರೈನರ್ ಜೆಟ್ ಗುರುವಾರ ಮಧ್ಯಪ್ರದೇಶದ (Madhya Pradesh) ಭಿಂಡ್  (Bhind) ಜಿಲ್ಲೆಯ ಬಳಿ ಪತನಗೊಂಡಿದೆ. ಈ ವೇಳೆ  ಪೈಲಟ್ ಸುರಕ್ಷಿತವಾಗಿ ಹೊರ ಹಾರಿದ್ದು ಅವರಿಗೆ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಎನ್​​ಡಿಟಿವಿ ವರದಿ ಮಾಡಿದೆ. ಭಿಂಡ್‌ನಿಂದ 6 ಕಿಮೀ ದೂರದಲ್ಲಿರುವ ಮಂಕಾಬಾದ್‌ನ ಖಾಲಿ ಮೈದಾನದಲ್ಲಿ ಅವಶೇಷಗಳು ಬಿದ್ದಿರುವುದು ವಿಡಿಯೊದಲ್ಲಿದೆ. ಅಪಘಾತಕ್ಕೀಡಾದ ಸ್ಥಳದ ಸುತ್ತಲೂ ಪೊಲೀಸರ ತಂಡವು ಸುತ್ತುವರಿದಿದೆ. ಟ್ರೈನರ್ ಜೆಟ್‌ನ ಬಾಲ ಅರ್ಧದಷ್ಟು ಹೊಲದಲ್ಲಿ ಹೂತುಹೋಗಿದೆ.


ಐಎಎಫ್ ಮಿರಾಜ್ 2000 ವಿಮಾನದಲ್ಲಿ ಇಂದು ಬೆಳಿಗ್ಗೆ ಕೇಂದ್ರ ವಲಯದಲ್ಲಿ ತರಬೇತಿ ನೀಡುವಾಗ ತಾಂತ್ರಿಕ ದೋಷ  ಕಂಡು ಬಂದಿದೆ. ಪೈಲಟ್ ಸುರಕ್ಷಿತವಾಗಿ ಹೊರಬಂದಿದ್ದಾರೆ. ಅಪಘಾತದ ಕಾರಣವನ್ನು ಕಂಡುಹಿಡಿಯಲು ವಿಚಾರಣೆಗೆ ಆದೇಶಿಸಲಾಗಿದೆ ಎಂದು ಭಾರತೀಯ ವಾಯುಪಡೆ ಟ್ವೀಟ್ ಮಾಡಿದೆ.

ಇದನ್ನೂ ಓದಿ: 100 ಕೋಟಿ ಕೊವಿಡ್ ಲಸಿಕೆ ನೀಡಿಕೆ ಪೂರ್ಣ; ಉದ್ಯಮಶೀಲತೆ, ಭಾರತೀಯ ವಿಜ್ಞಾನದ ಸಾಧನೆಗೆ ಸಾಕ್ಷಿ: ಪ್ರಧಾನಿ ಮೋದಿ ಸಂತಸ

 

Published On - 11:34 am, Thu, 21 October 21

TV9 Web

TV9 Kannada

Read More
Loading...
Unable to load recommendations.
Follow Us