100 ಕೋಟಿ ಕೊವಿಡ್ ಲಸಿಕೆ ನೀಡಿಕೆ ಪೂರ್ಣ; ಉದ್ಯಮಶೀಲತೆ, ಭಾರತೀಯ ವಿಜ್ಞಾನದ ಸಾಧನೆಗೆ ಸಾಕ್ಷಿ: ಪ್ರಧಾನಿ ಮೋದಿ ಸಂತಸ

100 Crore Covid Vaccination: ಪ್ರಧಾನಿ ನರೇಂದ್ರ ಮೋದಿ ಭಾರತದ 100 ಕೋಟಿ ಕೊವಿಡ್ ಲಸಿಕೆ ಪೂರ್ಣಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತ ವರದಿ ಇಲ್ಲಿದೆ.

100 ಕೋಟಿ ಕೊವಿಡ್ ಲಸಿಕೆ ನೀಡಿಕೆ ಪೂರ್ಣ; ಉದ್ಯಮಶೀಲತೆ, ಭಾರತೀಯ ವಿಜ್ಞಾನದ ಸಾಧನೆಗೆ ಸಾಕ್ಷಿ: ಪ್ರಧಾನಿ ಮೋದಿ ಸಂತಸ
ನರೇಂದ್ರ ಮೋದಿ (ಸಂಗ್ರಹ ಚಿತ್ರ)

ಭಾರತದಲ್ಲಿ 100 ಕೋಟಿ ಡೋಸ್ ಕೊವಿಡ್ ಲಸಿಕೆ ನೀಡಿಕೆ ಪೂರ್ಣಗೊಂಡಿದ್ದು, ಕೊರೊನಾ ವಿರುದ್ಧದ ಹೋರಾಟದಲ್ಲಿ ಮಹತ್ವದ ಮೈಲಿಗಲ್ಲು ಸೃಷ್ಟಿಯಾಗಿದೆ. ಫೆಬ್ರವರಿ 19ಕ್ಕೆ 1 ಕೋಟಿ ಡೋಸ್ ಲಸಿಕೆ ನೀಡಲಾಗಿತ್ತು. ಏಪ್ರಿಲ್ 10ರ ವೇಳೆಗೆ 10 ಕೋಟಿ ಡೋಸ್ ಲಸಿಕೆ ನೀಡಲಾಗಿತ್ತು. ಇದೀಗ ಇಂದು (ಅ.21) 100 ಕೋಟಿ ಡೋಸ್ ಲಸಿಕೆ ನೀಡಿಕೆ ಪೂರ್ಣಗೊಂಡಿದ್ದು, ಲಸಿಕಾ ಅಭಿಯಾನದಲ್ಲಿ ಭಾರತ ದಾಖಲೆ ಮಾಡಿದೆ. 18- 44 ವಯಸ್ಸಿನವರಿಗೆ 55.44 ಕೋಟಿ ಡೋಸ್ ಲಸಿಕೆ, 45-60 ವಯಸ್ಸಿನವರಿಗೆ 26.95 ಕೋಟಿ ಡೋಸ್ ಲಸಿಕೆ, 60 ವರ್ಷ ಮೇಲ್ಪಟ್ಟವರಿಗೆ 17.03 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಒಟ್ಟು, 51.55 ಕೋಟಿ ಪುರುಷರು ಹಾಗೂ 47.86 ಕೋಟಿ ಮಹಿಳೆಯರು ಲಸಿಕಾ ಅಭಿಯಾನದ ಫಲಾನುಭವಿಗಳಾಗಿದ್ದಾರೆ. ದೇಶದಲ್ಲಿ ಶತಕೋಟಿ ಲಸಿಕೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮುಖಾಂತರ ಶುಭ ಕೋರಿದ್ದಾರೆ. 

ಭಾರತದಲ್ಲಿ 100 ಕೋಟಿ ಡೋಸ್ ಕೊವಿಡ್ ಲಸಿಕೆ ನೀಡಿಕೆ ಪೂರ್ಣಗೊಂಡಿದ್ದು, ಭಾರತ ಇತಿಹಾಸ ರಚಿಸಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ‘ದೇಶದ 130 ಕೋಟಿ ಭಾರತೀಯರ ಸಾಮೂಹಿಕ ಚೈತನ್ಯ, ಉದ್ಯಮಶೀಲತೆ, ಭಾರತೀಯ ವಿಜ್ಞಾನದ ಸಾಧನೆಗೆ ಈ ಮೈಲಿಗಲ್ಲು ಸಾಕ್ಷಿಯಾಗಿದೆ. 100 ಕೋಟಿ ಡೋಸ್ ಲಸಿಕೆ ನೀಡಿದ ಭಾರತಕ್ಕೆ ಅಭಿನಂದನೆ. ಇದಕ್ಕೆ ಕಾರಣರಾದ ವೈದ್ಯರು, ನರ್ಸ್‌ಗಳು, ದಾದಿಯರಿಗೂ ಅಭಿನಂದನೆಗಳು’ ಎಂದು ಟ್ವೀಟ್ ಮೂಲಕ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಧಾನಿ ಮೋದಿ ಟ್ವೀಟ್ ಇಲ್ಲಿದೆ:

ಗುಜರಾತ್‌ನಲ್ಲಿ 6.76 ಕೋಟಿ ಡೋಸ್ ಹಾಗೂ ಮಧ್ಯಪ್ರದೇಶದಲ್ಲಿ 6.72 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಭಾರತದಲ್ಲಿ 100 ಕೋಟಿ ಡೋಸ್ ಕೊವಿಡ್ ಲಸಿಕೆ ನೀಡಿರುವುದು ಪ್ರಧಾನಿ  ನರೇಂದ್ರ ಮೋದಿ ಸಮರ್ಥ ನಾಯಕತ್ವದ ಪ್ರತಿಫಲ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಟ್ವೀಟ್ ಮಾಡಿದ್ದಾರೆ. ಇದೇ ವೇಳೆ ಅವರು ದೆಹಲಿ ಕೊವಿಡ್ ವಾರ್ ರೂಂಗೆ ಭೇಟಿ ನೀಡಿ, ಕೊರೊನಾ ವಾರಿಯರ್ಸ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ:

ಕ್ಯಾನ್ಸರ್​ ಇನ್​ಸ್ಟಿಟ್ಯೂಟ್​​ನಲ್ಲಿ ಇನ್ಫೋಸಿಸ್​​​ ಫೌಂಡೇಶನ್​​ ನಿರ್ಮಿಸಿರುವ 806 ಬೆಡ್​​ಗಳ ವಿಶ್ರಾಮ ಸದನವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

ನಾಯಂಡಹಳ್ಳಿ-ಕೆಂಗೇರಿ ನಡುವೆ ನಮ್ಮ ಮೆಟ್ರೋ ಮಾರ್ಗದಲ್ಲಿ ಕಳಪೆ ರಸ್ತೆಗಳ ನಿರ್ಮಾಣ: ಬಿಬಿಎಂಪಿಗೆ ಆತಂಕ

Shah Rukh Khan: ಕೊನೆಗೂ ‘ಮನ್ನತ್​’ನಿಂದ ಹೊರಬಂದ ಶಾರುಖ್; ಆರ್ಥರ್ ರೋಡ್ ಜೈಲಿನಲ್ಲಿ ಪುತ್ರನನ್ನು ಭೇಟಿಯಾದ ನಟ

Click on your DTH Provider to Add TV9 Kannada