ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಇನ್ಫೋಸಿಸ್ ಫೌಂಡೇಶನ್ ನಿರ್ಮಿಸಿರುವ 806 ಬೆಡ್ಗಳ ವಿಶ್ರಾಮ ಸದನವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ
ಕ್ಯಾನ್ಸರ್ ರೋಗಿಗಳ ಆರೈಕೆಗಾಗಿ ಅವರೊಟ್ಟಿಗೆ ಆಸ್ಪತ್ರೆಗೆ ಬಂದು ಉಳಿಯುವವರ ಅನುಕೂಲಕ್ಕಾಗಿ ಈ 806 ಬೆಡ್ಗಳ ವಿಶ್ರಾಮ ಸದನನ್ನು ಇನ್ಫೋಸಿಸ್ ನಿರ್ಮಿಸಿದೆ. ಇದು ಸಂಪೂರ್ಣ ಹವಾನಿಯಂತ್ರಿತವಾಗಿದೆ.
ದೆಹಲಿಯ ಏಮ್ಸ್ನ ಝಜರ್ ಕ್ಯಾಂಪಸ್ನಲ್ಲಿರುವ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ (National Cancer Institute(NCI)ಯಲ್ಲಿ ಇನ್ಫೋಸಿಸ್ ಫೌಂಡೇಶನ್ನಿಂದ ನಿರ್ಮಾಣವಾಗಿರುವ 806 ಬೆಡ್ಗಳ ವಿಶ್ರಾಮ ಸದನವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಈ 806 ಬೆಡ್ಗಳ ವಿಶ್ರಾಮ ಸದನವನ್ನು ಇನ್ಫೋಸಿಸ್ ಪ್ರತಿಷ್ಠಾನ ಅದರ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (Corporate Social Responsibility (CSR) ಉಪಕ್ರಮದ ಒಂದು ಭಾಗವಾಗಿ ನಿರ್ಮಾಣ ಮಾಡಿದೆ.
ಕ್ಯಾನ್ಸರ್ ರೋಗಿಗಳು ಬಹುಕಾಲದವರೆಗೆ ಆಸ್ಪತ್ರೆಯಲ್ಲಿ ಉಳಿಯಬೇಕಾಗುತ್ತದೆ. ಹಾಗೇ, ಅವರನ್ನು ನೋಡಿಕೊಳ್ಳಲು ಜತೆಗೆ ಬರುವವರೂ ಕೂಡ ಅಷ್ಟೂ ದಿನಗಳ ಕಾಲ ಅಲ್ಲಿಯೇ ಇರಬೇಕಾಗುತ್ತದೆ. ಹೀಗೆ ಕ್ಯಾನ್ಸರ್ ರೋಗಿಗಳ ಆರೈಕೆಗಾಗಿ ಅವರೊಟ್ಟಿಗೆ ಆಸ್ಪತ್ರೆಗೆ ಬಂದು ಉಳಿಯುವವರ ಅನುಕೂಲಕ್ಕಾಗಿ ಈ 806 ಬೆಡ್ಗಳ ವಿಶ್ರಾಮ ಸದನನ್ನು ಇನ್ಫೋಸಿಸ್ ನಿರ್ಮಿಸಿದೆ. ಇದು ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಇನ್ಫೋಸಿಸ್ ಫೌಂಡೇಶನ್ ಇದನ್ನು 93 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದೆ. ಇಂದು ನಡೆದ ಉದ್ಘಾಟನೆ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಇತರರು ಇದ್ದರು. ಪ್ರಾರಂಭದಲ್ಲಿ ಸುಧಾಮೂರ್ತಿ ಸ್ವಾಗತ ಭಾಷಣ ಮಾಡಿದರು. ನಂತರ ಮಾತನಾಡಿದ ಮನ್ಸುಖ್ ಮಾಂಡವಿಯಾ, ಕೊವಿಡ್ 19 ಲಸಿಕೆ ಅಭಿಯಾನದಲ್ಲಿ ಭಾರತ 100 ಕೋಟಿ ಡೋಸ್ ನೀಡಿಕೆ ದಾಖಲೆ ಮಾಡಿದ್ದನ್ನು ಉಲ್ಲೇಖಿಸಿ ಮಾತನಾಡಿದರು.
ಏಮ್ಸ್ನ ಜಝರ್ (ಹರ್ಯಾಣ) ಆವರಣದಲ್ಲಿ ಇರುವ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ ದೆಹಲಿಯಲ್ಲಿರುವ ಏಮ್ಸ್ನ ಒಂದು ಭಾಗವೇ ಆಗಿದೆ. ಇಲ್ಲಿ 710 ಬೆಡ್ಗಳಿದ್ದು ಕ್ಯಾನ್ಸರ್ ರೋಗಿಗಳ ಚಿಕಿತ್ಸೆ, ನಿಯಂತ್ರಣ, ಸಂಶೋಧನೆ ಮತ್ತು ಶಿಕ್ಷಣಕ್ಕಾಗಿ ಮೀಸಲಿಡಲಾಗಿದೆ.
ಇದನ್ನೂ ಓದಿ: ಇವರೇ ಟಿ20 ವಿಶ್ವಕಪ್ ಗೆಲ್ಲುವ ಫೇವರೇಟ್ ತಂಡ: ಪಾಕ್ ಮಾಜಿ ನಾಯಕನ ಅಚ್ಚರಿಯ ಹೇಳಿಕೆ
Shah Rukh Khan: ಕೊನೆಗೂ ‘ಮನ್ನತ್’ನಿಂದ ಹೊರಬಂದ ಶಾರುಖ್; ಆರ್ಥರ್ ರೋಡ್ ಜೈಲಿನಲ್ಲಿ ಪುತ್ರನನ್ನು ಭೇಟಿಯಾದ ನಟ