’ಫ್ರೆಂಡ್​ ರಿಕ್ವೆಸ್ಟ್​ ಅಕ್ಸೆಪ್ಟೆಡ್​’-ಅಮರಿಂದರ್​ ಸಿಂಗ್​ ಮೈತ್ರಿ ಮಾತಿಗೆ ಅಸ್ತು ಎಂದ ಬಿಜೆಪಿ..ಆದರೆ ಮುಂದೇನು?

ರಾಷ್ಟ್ರೀಯ ಭದ್ರತೆ, ಗಡಿ ಭದ್ರತೆ ವಿಚಾರಕ್ಕೆ ಬಂದಾಗ ನಾವು ಅಮರಿಂದರ್​ ಸಿಂಗ್​​ರನ್ನು ಸದಾ ಶ್ಲಾಘಿಸುತ್ತೇವೆ. ಅವರೊಬ್ಬ ಯೋಧ ಮತ್ತು ದೇಶಭಕ್ತ ಎಂದು ನಾವು ನಂಬಿದ್ದೇವೆ ಎಂದು ದುಷ್ಯಂತ್​ ಗೌತಮ್​ ಹೇಳಿದ್ದಾರೆ.

’ಫ್ರೆಂಡ್​ ರಿಕ್ವೆಸ್ಟ್​ ಅಕ್ಸೆಪ್ಟೆಡ್​’-ಅಮರಿಂದರ್​ ಸಿಂಗ್​ ಮೈತ್ರಿ ಮಾತಿಗೆ ಅಸ್ತು ಎಂದ ಬಿಜೆಪಿ..ಆದರೆ ಮುಂದೇನು?
ಅಮರಿಂದರ್ ಸಿಂಗ್​
Follow us
TV9 Web
| Updated By: Lakshmi Hegde

Updated on: Oct 21, 2021 | 9:06 AM

ಚಂಡಿಗಡ್​: ಕಾಂಗ್ರೆಸ್​​ನಿಂದ ಹೊರಬಿದ್ದಿರುವ ಪಂಜಾಬ್​ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್​ ಸಿಂಗ್ (Amarinder Singh)​ ಹೊಸ ಪಕ್ಷ ಕಟ್ಟುವುದಾಗಿ ಮಂಗಳವಾರ ಘೋಷಣೆ ಮಾಡಿದ್ದಾರೆ. ಹಾಗೇ, ಮೂರು ಕೃಷಿ ಕಾಯ್ದೆ (Farm Laws)ಗಳ ವಿಚಾರದಲ್ಲಿ ಎದ್ದಿರುವ ಸಮಸ್ಯೆಯನ್ನು ಕೇಂದ್ರ ಸರ್ಕಾರ ಬಗೆಹರಿಸಿದರೆ ಮುಂದಿನ ಪಂಜಾಬ್ ಚುನಾವಣೆಯ ಹೊತ್ತಿಗೆ ನಮ್ಮ ಪಕ್ಷ ಬಿಜೆಪಿಗೆ ಜತೆಯಾಗಲಿದೆ ಎಂದೂ ಹೇಳಿದ್ದಾರೆ. ಅಮರಿಂದರ್​ ಸಿಂಗ್ ಮಾತಿಗೆ ಇದೀಗ ಪಂಜಾಬ್​ ಬಿಜೆಪಿ ಉಸ್ತುವಾರಿ ದುಷ್ಯಂತ್​ ಗೌತಮ್​ ಪ್ರತಿಕ್ರಿಯೆ ನೀಡಿ, ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಅವರು ಕಟ್ಟುವ ಹೊಸ ಪಕ್ಷದ ಜತೆ ಮೈತ್ರಿಗೆ ನಾವು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ. ಅಮರಿಂದರ್​ ಜತೆ ಮೈತ್ರಿಗೆ ನಾವು ಬಾಗಿಲು ತೆರೆದಿದ್ದೇವೆ. ಆದರೂ ನಮ್ಮ ಸಂಸದೀಯ ಮಂಡಳಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದೆ.  

ಪಂಜಾಬ್​ ಮುಖ್ಯಮಂತ್ರಿ ಅಮರಿಂದರ್​ ಸಿಂಗ್​​ರನ್ನು ಕಳೆದ ತಿಂಗಳು ಹುದ್ದೆಯಿಂದ ಕೆಳಗೆ ಇಳಿಸಿ ಅವರ ಜಾಗಕ್ಕೆ ಚರಣಜಿತ್​ ಸಿಂಗ್​ ಛನ್ನಿಯವರನ್ನು ಕರೆತರಲಾಗಿದೆ. ಅಲ್ಲಿ ಅಮರಿಂದರ್ ಸಿಂಗ್​ ಸ್ಥಾನ ಕಳೆದುಕೊಳ್ಳಲು ನವಜೋತ್​ ಸಿಂಗ್​ ಸಿಧು ಕಾರಣ. ಸಿಎಂ ಹುದ್ದೆಯಿಂದ ಕೆಳಗೆ ಇಳಿಯುತ್ತದ್ದಂತೆ ಅವರು ಪಕ್ಷವನ್ನೇ ತೊರೆದಿದ್ದಾರೆ. ಬಿಜೆಪಿಗೆ ಸೇರುವುದಿಲ್ಲ, ಬೇರೆ ಪಕ್ಷವನ್ನೇ ಕಟ್ಟುತ್ತೇನೆ ಎಂದು ಅವರು ಹೇಳಿದ್ದಾರೆ. ಇನ್ನು ಪಂಜಾಬ್​ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದರೂ, ಕೃಷಿ ಕಾಯ್ದೆಗಳನ್ನುಕೇಂದ್ರ ಸರ್ಕಾರ ಹಿಂತೆಗೆದುಕೊಳ್ಳಬೇಕು ಎಂದೂ ಹೇಳಿದ್ದಾರೆ.

ಅಮರಿಂದರ್​​ನ್ನು ನಮ್ಮೊಂದಿಗೆ ಮೈತ್ರಿಗೆ ಸ್ವಾಗತಿಸಲು ಸಿದ್ಧರಾಗಿದ್ದೇವೆ ಎಂದು ಹೇಳಿದ ದುಷ್ಯಂತ್​ ಗೌತಮ್​, ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಮುಖ್ಯಮಂತ್ರಿಯಾಗಿದ್ದಾಗ ನಾವು ಅವರನ್ನು ವಿರೋಧಿಸಿದ್ದೇವೆ. ಪಂಜಾಬ್​ ಜನರ ಅಭಿವೃದ್ಧಿಗೆ ವ್ಯತಿರಿಕ್ತವಾಗಿ ಅವರು ನಡೆದುಕೊಂಡಾಗಲೆಲ್ಲ ನಾವೂ ಅವರನ್ನು ವಿರೋಧಿಸಿದ್ದೇವೆ. ಆದರೆ ರಾಷ್ಟ್ರೀಯ ಭದ್ರತೆ, ಗಡಿ ಭದ್ರತೆ ವಿಚಾರಕ್ಕೆ ಬಂದಾಗ ನಾವವರನ್ನು ಸದಾ ಶ್ಲಾಘಿಸುತ್ತೇವೆ. ಅವರೊಬ್ಬ ಯೋಧ ಮತ್ತು ದೇಶಭಕ್ತ ಎಂದು ನಾವು ನಂಬಿದ್ದೇವೆ ಎಂದಿದ್ದಾರೆ.  ಆದರೆ ಅವರು ರೈತರ ಪ್ರತಿಭಟನೆಗೆ ಪರಿಹಾರ ಸಿಗಬೇಕು ಎಂಬ ಬೇಡಿಕೆಯಿಟ್ಟಿದ್ದರಿಂದ ಈ ಮೈತ್ರಿ ಭವಿಷ್ಯದಲ್ಲಿ ನಿಜಕ್ಕೂ ಆಗಬಹುದೇ? ಮುಂದೇನು ಎಂಬ ಪ್ರಶ್ನೆ ಸಹಜವಾಗಿಯೇ ಕಾಡಿದೆ.

ಇದನ್ನೂ ಓದಿ: ರಾಜ್​ಕುಮಾರ್, ಶಂಕರ್​ ನಾಗ್, ವಿಷ್ಣುವರ್ಧನ್ ಸೇರಿ 800ಕ್ಕೂ ಹೆಚ್ಚು ಅನಧಿಕೃತ ಪುತ್ಥಳಿಗಳನ್ನು ತೆರವು ಮಾಡಲು ಬಿಬಿಎಂಪಿ ಸಿದ್ಧತೆ

ಕಾರ್ತಿಕ ಮಾಸ ವಿದ್ಯಾರ್ಥಿಗಳಿಗೆ ಅನುಕೂಲಕರ; ಈ 5 ದುರಭ್ಯಾಸ ಬಿಟ್ಟು, ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಯಶಸ್ಸು ಖಚಿತ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್