ರಾಜ್​ಕುಮಾರ್, ಶಂಕರ್​ ನಾಗ್, ವಿಷ್ಣುವರ್ಧನ್ ಸೇರಿ 800ಕ್ಕೂ ಹೆಚ್ಚು ಅನಧಿಕೃತ ಪುತ್ಥಳಿಗಳನ್ನು ತೆರವು ಮಾಡಲು ಬಿಬಿಎಂಪಿ ಸಿದ್ಧತೆ

ರಾಜ್​ಕುಮಾರ್, ಶಂಕರ್​ ನಾಗ್, ವಿಷ್ಣುವರ್ಧನ್ ಸೇರಿ 800ಕ್ಕೂ ಹೆಚ್ಚು ಅನಧಿಕೃತ ಪುತ್ಥಳಿಗಳನ್ನು ತೆರವು ಮಾಡಲು ಬಿಬಿಎಂಪಿ ಸಿದ್ಧತೆ
ಡಾ.ವಿಷ್ಣುವರ್ಧನ್, ಡಾ.ರಾಜ್​ಕುಮಾರ್, ಶಂಕರ್​ನಾಗ್

ಡಾ.ರಾಜ್​ಕುಮಾರ್, ಶಂಕರ್​ ನಾಗ್, ಡಾ.ವಿಷ್ಣುವರ್ಧನ್, ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಹಲವು ಗಣ್ಯರ ಪುತ್ಥಳಿಗಳನ್ನು ಬಿಬಿಎಂಪಿಗೆ ಮಾಹಿತಿ ನೀಡದೆ, ಅನುಮತಿ ಪಡೆಯದೇ ನಿರ್ಮಾಣವಾಗಿವೆ.

TV9kannada Web Team

| Edited By: sandhya thejappa

Oct 21, 2021 | 11:51 AM

ಬೆಂಗಳೂರು: ನಗರದಲ್ಲಿ ಅನಧಿಕೃತ ಪುತ್ಥಳಿಗಳನ್ನು (Statue) ತೆರವು ಮಾಡಲು ಬಿಬಿಎಂಪಿ (BBMP) ಸಿದ್ಧತೆ ನಡೆಸಿದೆ. ಹೈಕೋರ್ಟ್ ನಿರ್ದೇಶನದಂತೆ ನಗರದಲ್ಲಿ ಪುತ್ಥಳಿಗಳನ್ನು ತೆರವು ಮಾಡಲಿದೆ. ಬಿಬಿಎಂಪಿ ಅನುಮತಿ ಪಡೆಯದೆ ಹಲವು ಪುತ್ಥಳಿಗಳನ್ನು ನಿರ್ಮಾಣವಾಗಿವೆ. ಈ ಕುರಿತು ಬಿಬಿಎಂಪಿ ಸರ್ವೆ ನಡೆಸಿದೆ. 800ಕ್ಕೂ ಹೆಚ್ಚು ಅನಧಿಕೃತ ಪುತ್ಥಳಿಗಳನ್ನು ಬೆಂಗಳೂರಿನಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ತೆರವು ಮಾಡಲು ಬಿಬಿಎಂಪಿ ತಯಾರಿ ನಡೆಸಿಕೊಳ್ಳುತ್ತಿದೆ.

ಡಾ.ರಾಜ್​ಕುಮಾರ್, ಶಂಕರ್​ ನಾಗ್, ಡಾ.ವಿಷ್ಣುವರ್ಧನ್, ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಹಲವು ಗಣ್ಯರ ಪುತ್ಥಳಿಗಳನ್ನು ಬಿಬಿಎಂಪಿಗೆ ಮಾಹಿತಿ ನೀಡದೆ, ಅನುಮತಿ ಪಡೆಯದೇ ನಿರ್ಮಾಣವಾಗಿವೆ. ಹೀಗಾಗಿ ಮಹಾನ್ ನಾಯಕರ ಪುತ್ಥಳಿಗಳನ್ನು ತೆರವು ಮಾಡಲು ತಯಾರಿ ನಡೆದಿದೆ. ಸದ್ಯ ಗುರುತು ಮಾಡಿರುವ ಪುತ್ಥಳಿಗಳನ್ನ ಬಿಬಿಎಂಪಿ ತೆರವು ಮಾಡಲಿದೆ.

ಇನ್ನು ಈ ಹಿಂದೆ ನಟ ಅನಿರುದ್ಧ್ ಮಾತನಾಡಿದ್ದರು. ‘ಇಷ್ಟು ವರ್ಷ ಬಿಟ್ಟು ಈಗ ಪುತ್ತಳಿ ತೆರವು ಮಾಡುತ್ತಿರುವುದು ಕಷ್ಟಕರ ಸಂಗತಿ. ಅನಧಿಕೃತವಾಗಿ ಪುತ್ತಳಿ ನಿರ್ಮಾಣ ಮಾಡಿದ್ದು ತಪ್ಪಿರಬಹುದು. ಆದರೆ ನಿರ್ಮಾಣ ಸಮಯದಲ್ಲೇ ಈ ಬಗ್ಗೆ ಯೋಚಿಸಬೇಕಿತ್ತು. ಆ ಜವಾಬ್ದಾರಿ ಸರ್ಕಾರದ ಮೇಲಿತ್ತು. ಈಗಲೂ ನಗರದಲ್ಲಿರುವ ಪುತ್ತಳಿಗಳನ್ನು ತೆರವು ಮಾಡದೆ, ಸೂಕ್ತ ಸ್ಥಳದಲ್ಲಿ ಪ್ರತಿಮೆ ಸ್ಥಾಪನೆಗೆ ಅವಕಾಶ ಕೊಡಬಹುದು. ನನಗೆ ಸರ್ಕಾರದ ಮೇಲೆ ಭರವಸೆ ಇದೆ’ ಎಂದು ಅವರು ಹೇಳಿದ್ದರು.

ಶಾಸಕರ ತಾಕೀತು ಇಂದು ಬೆಂಗಳೂರಿನ ಹಲವೆಡೆ ಅನಧಿಕೃತ ಪುತ್ಥಳಿಗಳನ್ನು ತೆರವು ಮಾಡಲು ತೀರ್ಮಾನ ಮಾಡಲಾಗಿತ್ತು. ಆದರೆ ಸ್ಥಳೀಯ ಶಾಸಕರು ಅನಧಿಕೃತ ಪುತ್ಥಳಿಗಳ ರಕ್ಷಣೆಗೆ ನಿಂತಿದ್ದಾರೆ. ಅನಧಿಕೃತ ಪುತ್ಥಳಿಗಳ ತೆರವಿಗೆ ಅಧಿಕಾರಿಗಳು ಮುಂದಾಗಿದ್ದರು. ಆದರೆ ಶಾಸಕರು ಪುತ್ಥಳಿ ತೆರವು ಮಾಡದಂತೆ ಅಧಿಕಾರಿಗಳಿಗೆ ತಾಕೀತು ಮಾಡುತ್ತಿದ್ದಾರೆ.

ಇದನ್ನೂ ಓದಿ

ಸಂಘರ್ಷ ಮರೆತು ಒಂದಾದ ರಾಜ್​-ವಿಷ್ಣು ಫ್ಯಾನ್ಸ್​; ಪುತ್ಥಳಿ ತೆರವು ಕಾರ್ಯಕ್ಕೆ ಮುಂದಾದ ಬಿಬಿಎಂಪಿ ವಿರುದ್ಧ ಆಕ್ರೋಶ

ಈಗ ಸುಮ್ಮನಿದ್ದರೆ ಮುಂದೆಂದೂ ಮಾತಾಡಬೇಡಿ: ಕಾಶ್ಮೀರ ಹಿಂಸಾಚಾರದ ಬಗ್ಗೆ ಸೆಲೆಕ್ಟಿವ್ ಮೌನವನ್ನು ಕಟುದನಿಯಲ್ಲಿ ಪ್ರಶ್ನಿಸಿದ ಸೇನಾಧಿಕಾರಿ

Follow us on

Related Stories

Most Read Stories

Click on your DTH Provider to Add TV9 Kannada