ಕಾರ್ತಿಕ ಮಾಸ ವಿದ್ಯಾರ್ಥಿಗಳಿಗೆ ಅನುಕೂಲಕರ; ಈ 5 ದುರಭ್ಯಾಸ ಬಿಟ್ಟು, ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಯಶಸ್ಸು ಖಚಿತ

kartik month: ಕಾರ್ತಿಕ ಮಾಸದಲ್ಲಿ ವಿಲಾಸಿ ಬದುಕನ್ನು ತ್ಯಜಿಸಿ, ವ್ಯಾಸಂಗದಲ್ಲಿ ತಡೊಗಬೇಕು. ಈ ಮಾಸದಲ್ಲಿ ವಿಷ್ಣು ಪರಮಾತ್ಮ ಭೂಲೋಕದಲ್ಲಿ ಸಂಚರಿಸುವ ತಿಂಗಳು ಎಂದು ನಂಬಲಾಗಿದೆ. ಹಾಗಾಗಿ ಹೆಚ್ಚು ಶ್ರದ್ಧೆಯಿಂದ ಸಾತ್ವಿಕ ಜೀವನ ನಡೆಸಬೇಕಾಗುತ್ತದೆ.

ಕಾರ್ತಿಕ ಮಾಸ ವಿದ್ಯಾರ್ಥಿಗಳಿಗೆ ಅನುಕೂಲಕರ; ಈ 5 ದುರಭ್ಯಾಸ ಬಿಟ್ಟು, ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಯಶಸ್ಸು ಖಚಿತ
ಕಾರ್ತಿಕ ಮಾಸ ವಿದ್ಯಾರ್ಥಿಗಳಿಗೆ ಅತ್ಯಂತ ಅನುಕೂಲಕರ; ಈ 5 ದುರಭ್ಯಾಸ ಬಿಟ್ಟು ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಯಶಸ್ಸು ಖಚಿತ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Oct 21, 2021 | 7:43 AM

ಕಾರ್ತಿಕ ಮಾಸವು ಪೂಜಾ ಮಾಸ. ಪೂಜೆ ಪುನಸ್ಕಾರಗಳಿಗೆ ಕಾರ್ತಿಕ ಮಾಸ ಅತ್ಯುತ್ತಮ ಎಂದು ಪರಿಗಣಿಸಬಹುದು. ಇನ್ನು ವಿದ್ಯಾರ್ಥಿಗಳಿಗೂ ಕಾರ್ತಿಕ ಮಾಸ ಅನುಕೂಲಕರ. ಹಾಗಾಗಿ ಈ ತಿಂಗಳಲ್ಲಿ ಕೆಲ ಅಭ್ಯಾಸಗಳನ್ನು ಬಿಟ್ಟು, ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಯಶಸ್ಸು ಕಟ್ಟಿಟ್ಟಬುತ್ತಿ. ಭಗವಾನ್​ ವಿಷ್ಣುವಿಗೆ ಸಮರ್ಪಿತವಾದ ಕಾರ್ತಿಕ ಮಾಸವು ಈ ಬಾರಿ ಅಕ್ಟೋಬರ್ 21 ರಿಂದ ಆರಂಭವಾಗುತ್ತಿದೆ. ಈ ತಿಂಗಳಲ್ಲಿಯೇ ದೇವೋತ್ಥಾನ ಏಕಾದಶಿಯಂದು ವಿಷ್ಣು ಪರಮಾತ್ಮ ನಾಲ್ಕು ತಿಂಗಳ ಕಾಲದ ನಿದ್ರಾವಸ್ಥೆಯಿಂದ ಏಳುವ ದಿನ. ಇದರೊಂದಿಗೆ ಚಾತುರ್ಮಾಸ ಕೊನೆಗೊಳ್ಳುತ್ತದೆ. ಶುಭ ಕಾರ್ಯಗಳು ಈ ದಿನದಿಂದ ಆರಂಭವಾಗುತ್ತದೆ. ಹವಾಮಾನ ಪರಿಗಣಿಸಿದರೆ ಈ ತಿಂಗಳು ತುಂಬಾ ಆಹ್ಲಾದಕರ ಮಾಸವಾಗಿದೆ. ಈ ತಿಂಗಳಲ್ಲಿ ಹೆಚ್ಚು ಬಿಸಿಲೂ ಇರುವುದಿಲ್ಲ. ಹೆಚ್ಚು ಶೀತ ಇರದು; ಎರಡೂ ಸಮತೋಲನವಾಗಿ ಇರುತ್ತದೆ.

ಇನ್ನು ಕಾರ್ತಿಕ ಮಾಸದಲ್ಲಿ ಕರ್ವಾ ಚೌತ್, ಅಷ್ಟಮಿ, ದೀಪಾವಳಿ ಮುಂತಾದ ಪ್ರಮುಖ ಹಬ್ಬಗಳೂ ಬರುತ್ತವೆ. ಹಾಗಾಗಿ ಕಾರ್ತಿಕ ಮಾಸವು ವಿಶೇಷವೆನಿಸುತ್ತದೆ. ಇದರ ಹೊರತಾಗಿ ಅಧ್ಯಯನ ಮಾಡಲು ವಿದ್ಯಾರ್ಥಿಗಳಿಗೆ ಇದು ಸೂಕ್ತ ಕಾಲ. ಜ್ಯೋತಿಷ್ಯ ಶಾಸ್ತ್ರಗಳ ಪ್ರಕಾರ ಕಾರ್ತಿಕ ಮಾಸದಲ್ಲಿ ವಿದ್ಯಾರ್ಥಿಗಳು ಕೆಲವು ಚಟಗಳನ್ನು ತ್ಯಜಿಸಿ, ಶ್ರದ್ಧೆಯಿಂದ ಅಧ್ಯಯನದಲ್ಲಿ ತೊಡಗಿದರೆ ಏಕಾಗ್ರತೆ ಹೆಚ್ಚಿ, ಶೀಘ್ರವಾಗಿ ಸಾಫಲ್ಯದತ್ತ ಮುನ್ನುಗ್ಗಬಹುದು.

ಸದ್ಬುದ್ಧಿ, ಲಕ್ಷ್ಮಿ ಮತ್ತು ಮುಕ್ತಿ ಪ್ರಾಪ್ತಿಯಾಗುವ ತಿಂಗಳೂ ಇದಾಗಿದೆ. ಈ ತಿಂಗಳಲ್ಲಿ ಆರೋಗ್ಯವು ಅತ್ಯುತ್ತಮವಾಗಿ ಇರುವ ಕಾಲ. ಅನಾರೋಗ್ಯಕ್ಕೆ ಇದು ಕಾಲವಲ್ಲ. ವಿದ್ಯಾರ್ಥಿಗಳು ಇದರ ಲಾಭವನ್ನು ಪಡೆಯಬೇಕು. ಪರೀಕ್ಷೆಗಾಗಿ ಶ್ರದ್ಧಾ ಭಕ್ತಿಯಿಂದ ತಯಾರಿ ನಡೆಸಬೇಕು. ಹೀಗೆ ಮಾಡುವಾಗ ವಿಷ್ಣು ಪರಮಾತ್ಮನ ಜೊತೆಗೆ ಲಕ್ಷ್ಮಿಯ ಆಶೀರ್ವಾದವೂ ಲಭಿಸುತ್ತದೆ. ಜೊತೆಗೆ ಸರಸ್ವತಿ ಸಹ ಪ್ರಸನ್ನಗೊಂಡು ವಿದ್ಯಾರ್ಥಿಗಳು ರೋಗ ರುಜಿನಳು, ತೊಂದರೆಗಳು ಮತ್ತು ಎಲ್ಲ ವಿಘ್ನಗಳಿಂದ ದೂರವಾಗಿ, ಸಮರ್ಪಣಾ ಮನೋಭಾವದಿಂದ ಓದಿನತ್ತ ಗಮನ ಹರಿಸಿದರೆ ಯಶಸ್ಸು ಖಚಿತ.

ಈ ಐದು ಅಭ್ಯಾಸಗಳನ್ನು ಬಿಟ್ಟುಬಿಡಬೇಕು:

1. ಈ ತಿಂಗಳಲ್ಲಿ ಮಾಂಸವನ್ನು ತ್ಯಜಿಸಬೇಕು. ಧೂಮಪಾನ, ಶರಾಬು ಸೇವನೆ ಬಿಡಬೇಕು. ಹಾಗೆ ನೋಡಿದರೆ ಯಾವುದೇ ಮಾನದಂಡದಿಂದಲೂ ಈ ಸೇವನೆಗಳು ವಿದ್ಯಾರ್ಥಿಗಳಿಗೆ ಸಮಂಜಸವಲ್ಲ. ವಿದ್ಯಾರ್ಥಿಗಳು ಇಂತಹ ದುರಭ್ಯಾಸಗಳಿಂದ ದೂರವಿರಬೇಕು.

2. ಮಾಲೀಶ್​ ಮಾಡಿಕೊಳ್ಳುವುದರಿಂದ ದೇಹವನ್ನು ಹುರಿಗೊಳ್ಳಿಸಬಹುದು. ನರಕ ಚತುರ್ದಶಿ ದಿನದಂದು ಎಣ್ಣೆ ಹಚ್ಚಿಕೊಂಡು ಮಾಲೀಶ್ ಮಾಡಿಸಿ. ಅಭ್ಯಂಜನ ಸ್ನಾನ ಮಾಡುವುದು ಶುಭವೆನಿಸುತ್ತದೆ.

3. ನಿಮಗೆ ಬೇಳೆ ಕಾಳುಗಳು ಇಷ್ಟವಿದ್ದಲ್ಲಿ ಅವುಗಳನ್ನುತ್ಯಜಿಸುವುದು ಒಳಿತು. ಕಾರ್ತಿಕ ಮಾಸದಲ್ಲಿ ಉದ್ದು, ಹೆಸರು, ಕೆಂಪು ಬೇಳೆ, ಕಡಲೆ ಕಾಳು, ಬಟಾಣಿ ಸೇವನೆಯನ್ನು ಬಿಡಬೇಕು. ತೊಗರಿ ಬೇಳೆಯನ್ನು ಸೇವಿಸಬಹುದು. ಸಾಸಿವೆಯನ್ನು ಸಹ ತಿನ್ನಬಾರದು.

4. ಬ್ರಹ್ಮಚರ್ಯೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮನಸ್ಸು ಚಂಚಲಗೊಳ್ಳದೆ, ಪೂರಾ ನಿಷ್ಠೆಯಿಂದ ಓದಿನತ್ತ ಗಮನ ಕೇಂದ್ರೀಕರಿಸಿದರೆ ಯಶಸ್ಸು ಕಟ್ಟಿಟ್ಟಬುತ್ತಿ

5. ಈ ಕಾರ್ತಿಕ ಮಾಸದಲ್ಲಿ ವಿಲಾಸಿ ಬದುಕನ್ನು ತ್ಯಜಿಸಿ, ವ್ಯಾಸಂಗದಲ್ಲಿ ತಡೊಗಬೇಕು. ಈ ಮಾಸದಲ್ಲಿ ವಿಷ್ಣು ಪರಮಾತ್ಮ ಭೂಲೋಕದಲ್ಲಿ ಸಂಚರಿಸುವ ತಿಂಗಳು ಎಂದು ನಂಬಲಾಗಿದೆ. ಹಾಗಾಗಿ ಹೆಚ್ಚು ಶ್ರದ್ಧೆಯಿಂದ ಸಾತ್ವಿಕ ಜೀವನ ನಡೆಸಬೇಕಾಗುತ್ತದೆ.

(kartik month best for students success preparing for examination but should take care of these 5 things)