ಗುವಾಹಟಿ: ತೃತೀಯಲಿಂಗಿ (Transgender ) ಸಮುದಾಯವನ್ನು ಸಬಲೀಕರಣಗೊಳಿಸಲು ಶುಕ್ರವಾರ ಗುವಾಹಟಿ ರೈಲು ನಿಲ್ದಾಣದಲ್ಲಿ ಟೀ ಸ್ಟಾಲ್ (Tea Stall) ತೆರೆಯಲಾಯಿತು. ಈಶಾನ್ಯ ಫ್ರಾಂಟಿಯರ್ ರೈಲ್ವೇಯ ‘ಟ್ರಾನ್ಸ್ ಟೀ ಸ್ಟಾಲ್’ ದೇಶದಲ್ಲೇ ಮೊದಲ ಟ್ರಾನ್ಸ್ ಟೀ ಸ್ಟಾಲ್ ಇದು ಎಂದು ಹೇಳಲಾಗಿದೆ. ಇದನ್ನು ಆಲ್ ಅಸ್ಸಾಂ ಟ್ರಾನ್ಸ್‌ಜೆಂಡರ್ ಅಸೋಸಿಯೇಷನ್‌ನ ಸಕ್ರಿಯ ಸಹಯೋಗದಿಂದ ಮಾಡಲಾಗಿದೆ ಎಂದು ಉನ್ನತ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಟ್ರಾನ್ಸ್ ಟೀ ಸ್ಟಾಲ್ ಹೆಸರಿನ ಟೀ ಸ್ಟಾಲ್ ಅನ್ನು ಗುವಾಹಟಿಯ ಕಮ್ರೂಪ್ (ಎಂ) ಡೆಪ್ಯುಟಿ ಕಮಿಷನರ್ ಕಛೇರಿ ಆವರಣದಲ್ಲಿ ಪ್ರಾರಂಭಿಸಲಾಯಿತು. ಅಸ್ಸಾಂನ ಟ್ರಾನ್ಸ್‌ಜೆಂಡರ್ ಕಲ್ಯಾಣ ಮಂಡಳಿಯ ಸಹಾಯಕ ಉಪಾಧ್ಯಕ್ಷ ಸ್ವಾತಿ ಬಿಧನ್ ಬರುವಾ ಅವರ ಉಪಸ್ಥಿತಿಯಲ್ಲಿ ಶುಕ್ರವಾರ ಗುವಾಹಟಿ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 1 ರಲ್ಲಿ ಈಶಾನ್ಯ ಗಡಿ ರೈಲ್ವೆಯ ಜನರಲ್ ಮ್ಯಾನೇಜರ್ ಅನ್ಶುಲ್ ಗುಪ್ತಾ ಅವರು “ಟ್ರಾನ್ಸ್ ಟೀ ಸ್ಟಾಲ್” ಅನ್ನು ಉದ್ಘಾಟಿಸಿದರು.
ಇದನ್ನೂ ಓದಿ: Transgender Survey: ರಾಜ್ಯ ಸರ್ಕಾರದಿಂದ ಇದೇ ಮೊದಲ ಬಾರಿಗೆ ತೃತೀಯಲಿಂಗಿಗಳ ಜನಗಣತಿ ನಡೆಸಲು ನಿರ್ಧಾರ
ಭಾರತದ ಮೊದಲ ಟ್ರಾನ್ಸ್ ಟೀ ಸ್ಟಾಲ್ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೂಡ ಟ್ವೀಟ್ ಮಾಡಿದ್ದಾರೆ. ಗುವಾಹಟಿ ರೈಲ್ವೇ ನಿಲ್ದಾಣದಲ್ಲಿ ಭಾರತದ ಮೊದಲ ಟ್ರಾನ್ಸ್ ಟೀ ಸ್ಟಾಲ್ ನಿಮಗಾಗಿ ವಿಶೇಷ ಚಹಾವನ್ನು ತಯಾರಾಗಿದೆ ಎಂದು ಹೇಳಿದ್ದಾರೆ.
Guwahati has special tea for you all
India’s first “Trans Tea Stall” at the Guwahati Railway Station. pic.twitter.com/GTeBOsh5GA
— Pralhad Joshi (@JoshiPralhad) March 14, 2023
ಆನಂದ್ ಮಹೇಂದ್ರಾ ಕೂಡ ಈ ಗುವಾಹಟಿ ರೈಲ್ವೇ ನಿಲ್ದಾಣದಲ್ಲಿ ಭಾರತದ ಮೊದಲ ಟ್ರಾನ್ಸ್ ಟೀ ಸ್ಟಾಲ್ ಬಗ್ಗೆ ಭಾರೀ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇದು ನನ್ನ ದೃಷ್ಟಿ ಒಂದು ಸಣ್ಣ ಆದೋಂಲನ, ಈ ರೀತಿಯಲ್ಲಿಯೇ ನಿಮ್ಮ ಸಮುದಾಯದ ಜನರು ನಿಮ್ಮಿಂದ ಪ್ರೇರಣೆಗೊಂಡು ಇಂತಹ ಅನೇಕ ಪ್ರಗತಿಪರ ಯೋಜನೆಗಳತ್ತ ಗಮನಾರ್ಹ ಮತ್ತು ಪರಿವರ್ತನೆಯಾಗಿದ್ದಾರೆ ಮತ್ತು ಆಗಬೇಕು ಎಂದು ಹೇಳಿದ್ದಾರೆ. ಈ ಮೂಲಕ ಆನಂದ್ ಮಹೇಂದ್ರ ಅವರು ಕೂಡ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಫೋಸ್ಟ್ಗೆ ರೀ ಟ್ವೀಟ್ ಮಾಡಿದ್ದಾರೆ.
?????? This one small, initiative is, in my view, as significant & transformational as your many other progressive projects. Indian railways carries over 8 billion people. And most important, excludes no one. Bravo @AshwiniVaishnaw https://t.co/jraMFkwurA
— anand mahindra (@anandmahindra) March 14, 2023
ಈ ಯೋಜನೆಯು ಟ್ರಾನ್ಸ್ಜೆಂಡರ್ಸ್ಗಾಗಿ ಕೇಂದ್ರದ ಸಮಗ್ರ ಯೋಜನೆಯ ಭಾಗವಾಗಿದೆ ಜೀವನದಲ್ಲಿ ಮತ್ತು ಉದ್ಯಮದಲ್ಲಿ ಹಿಂದಿರುವ ಈ ಸಮುದಾಯದ ಜನರಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಮಾಡಲಾಗಿದೆ. ಇದು ತೃತೀಯಲಿಂಗಿಗಳ ಕಲ್ಯಾಣಕ್ಕಾಗಿ ಈ ರೀತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು. ಈಶಾನ್ಯ ಫ್ರಾಂಟಿಯರ್ ರೈಲ್ವೆಯು ಈ ಪ್ರದೇಶದ ಇತರ ರೈಲ್ವೆ ನಿಲ್ದಾಣಗಳಲ್ಲಿ ಇಂತಹ ಟ್ರಾನ್ಸ್ ಟೀ ಸ್ಟಾಲ್‌ಗಳನ್ನು ನಿರ್ವಹಿಸಲು ಯೋಜಿಸಲಾಗಿದೆ ಎಂದು ಹೇಳಲಾಗಿದೆ.
Published On - 10:14 am, Sat, 11 March 23