ಶಬರಿಮಲೆ ದೇಗುಲದಲ್ಲಿ ಸಂಚಲನ: ಇತಿಹಾಸದಲ್ಲಿ ಮೊದಲ ಬಾರಿಗೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಮಂಗಳಮುಖಿ ನಿಶಾ

|

Updated on: Jan 02, 2024 | 1:30 PM

Sabarimala Temple: ಅಯ್ಯಪ್ಪನನ್ನು "ಆಜನ್ಮ ಬ್ರಹ್ಮಚಾರಿ" ಎಂದು ಬಣ್ಣಿಸುತ್ತಾ, 10 ರಿಂದ 50 ವರ್ಷದೊಳಗಿನ ಋತುಚಕ್ರದ ಮಹಿಳೆಯರಿಗೆ ದೇವಸ್ಥಾನವನ್ನು ಪ್ರವೇಶಿಸದ ಸಂಪ್ರದಾಯವು ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ಈ ಮಧ್ಯೆ ಮೊನ್ನೆ ಭಾನುವಾರ ಕೇರಳದ ಇತಿಹಾಸದಲ್ಲಿ ಮೊದಲ ಬಾರಿಗೆ ಮಂಗಳಮುಖಿಯೊಬ್ಬರು ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದಿದ್ದಾರೆ.

ಶಬರಿಮಲೆ ದೇಗುಲದಲ್ಲಿ ಸಂಚಲನ: ಇತಿಹಾಸದಲ್ಲಿ ಮೊದಲ ಬಾರಿಗೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಮಂಗಳಮುಖಿ ನಿಶಾ
ಇತಿಹಾಸದಲ್ಲಿ ಮೊದಲ ಬಾರಿಗೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಮಂಗಳಮುಖಿ
Follow us on

ಅಯ್ಯಪ್ಪ ದೀಕ್ಷೆ ತೆಗೆದುಕೊಂಡಿರುವ ಸ್ವಾಮಿಗಳು ಶಬರಿಮಲೆ ದೇವಸ್ಥಾನದಲ್ಲಿ (Sabarimala Temple) ಅಯ್ಯಪ್ಪನ ದರ್ಶನ ಪಡೆಯುವುದು ಸಾಮಾನ್ಯ. ಅಯ್ಯಪ್ಪ ದೇವರ ದರ್ಶನಕ್ಕೆ ದೇಶಾದ್ಯಂತ ಅಪಾರ ಸಂಖ್ಯೆಯ ಭಕ್ತರು ಶಬರಿಮಲೆಗೆ ಆಗಮಿಸುತ್ತಾರೆ. ಇದರಿಂದಾಗಿ ಶಬರಿಮಲೆ ದೇವಸ್ಥಾನದಲ್ಲಿ ಜನಜಂಗುಳಿ ಈ ಬಾರಿಯಂತೂ ಹೆಚ್ಚಿದೆ. ಶತಮಾನಗಳಿಂದಲೂ 10 ರಿಂದ 50 ವರ್ಷದೊಳಗಿನ ಮಹಿಳೆಯರಿಗೆ (Women) ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡದ ಸಂಪ್ರದಾಯ ಮುಂದುವರಿದಿದೆ. ಆದರೆ ಈ ಬಾರಿ ಶಬರಿಮಲೆ ದೇವಸ್ಥಾನದಲ್ಲಿ ಭಾನುವಾರ ಸಂಚಲನಾತ್ಮಕ ನಡೆ ಕಂಡುಬಂದಿದೆ. ಆ ಸಂವೇದನಾಶೀಲ ನಡೆ ಏನೆಂದು ತಿಳಿಯಲು ಈ ಸ್ಟೋರಿ ಓದಿ.

ಶಬರಿಮಲೆಯು ಕೇರಳ ರಾಜ್ಯದ ಶಬರಿಮಲೆ ಬೆಟ್ಟಗಳಲ್ಲಿರುವ ಪ್ರಸಿದ್ಧ ಪುಣ್ಯಕ್ಷೇತ್ರವಾಗಿದೆ. ಹಿಂದೂಗಳು ಅಯ್ಯಪ್ಪನನ್ನು ಹರಿಹರಸುತ ಎಂದು ಪರಿಗಣಿಸುತ್ತಾರೆ. ಬಯಸಿದ ಇಷ್ಟಾರ್ಥಗಳು ಈಡೇರುತ್ತವೆ ಎಂದು ಭಗವಂತನ ಮೇಲೆ ನಂಬಿಕೆಯಿಟ್ಟಿದ್ದಾರೆ ಜನ. ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಅವರು ಅಯ್ಯಪ್ಪ ದೀಕ್ಷಾ ಮಾಲೆಗಳನ್ನು ಧರಿಸುತ್ತಾರೆ ಮತ್ತು ಸಂಕ್ರಾಂತಿಯ ಸಮಯದಲ್ಲಿ ಶಬರಿಮಲೆಯಲ್ಲಿ ಅಯ್ಯಪ್ಪ ಜ್ಯೋತಿ, ಶಬರಿಮಲೆ ಜ್ಯೋತಿ ಕಾಣುತ್ತಾರೆ.

ಅಯ್ಯಪ್ಪನನ್ನು “ಆಜನ್ಮ ಬ್ರಹ್ಮಚಾರಿ” ಎಂದು ಬಣ್ಣಿಸುತ್ತಾ, 10 ರಿಂದ 50 ವರ್ಷದೊಳಗಿನ ಋತುಚಕ್ರದ ಮಹಿಳೆಯರಿಗೆ ದೇವಸ್ಥಾನವನ್ನು ಪ್ರವೇಶಿಸದ ಸಂಪ್ರದಾಯವು ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. 2019ರಲ್ಲಿ ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶದ ಕುರಿತು ದೊಡ್ಡ ಗಲಾಟೆ ನಡೆದಿತ್ತು. ಈ ವಿವಾದವನ್ನು ಬದಿಗಿಟ್ಟು ನೋಡುವುದಾದರೆ, ಇತ್ತೀಚೆಗೆ ಶಬರಿಮಲೆ ದೇವಸ್ಥಾನದಲ್ಲಿ ಸಂಚಲನಾತ್ಮಕ ನಡೆ ಕಂಡುಬಂದಿದೆ. ಕೇರಳದ ಇತಿಹಾಸದಲ್ಲಿ ಮಂಗಳಮುಖಿಯೊಬ್ಬರು (Transgender) ಮೊದಲ ಬಾರಿಗೆ ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದಿದ್ದಾರೆ.

ತೆಲಂಗಾಣದ (Telangana) ನಲ್ಗೊಂಡ ಜಿಲ್ಲೆಯ ನರ್ಕಟ್‌ಪಲ್ಲಿ ಮಂಡಲದಲ್ಲಿರುವ ಚೆರ್ವುಗಟ್ಟು ಶ್ರೀ ಪಾರ್ವತಿ ಜಡಲ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮೋತ್ಸವಗಳು ವೈಭವದಿಂದ ನಡೆಯುತ್ತಿವೆ. ಪ್ರತಿ ಅಮವಾಸ್ಯೆಯ ದಿನವೂ ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಇಲ್ಲಿನ ಸ್ವಾಮಿಯ ದರ್ಶನ ಪಡೆಯುತ್ತಾರೆ. ಚೆರ್ವುಗಟ್ಟು ಶ್ರೀ ಪಾರ್ವತಿ ಜಡಲ ರಾಮಲಿಂಗೇಶ್ವರಸ್ವಾಮಿ ದೇವಸ್ಥಾನದ ಪೂಜೆಗಳಲ್ಲಿ ಮಂಗಳಮುಖಿ ನಿಶಾ ಕ್ರಾಂತಿ ಅವರು ವಾರ್ಷಿಕ ಬ್ರಹ್ಮೋತ್ಸವಗಳಲ್ಲಿ ಮತ್ತು ಪ್ರತಿ ಅಮವಾಸ್ಯೆಯಲ್ಲಿ ಜೋಗಿಣಿಯಾಗಿ ಭಾಗವಹಿಸುತ್ತಾರೆ.

Also Read:  ಕರ್ನಾಟಕದ ಪಂಚಾಯತ್ ಸದಸ್ಯ ಶಬರಿಮಲೆಯಲ್ಲಿ ಅನೌನ್ಸರ್ ಆಗಿ ದಿನಕ್ಕೆ 750 ರೂ ಸಂಪಾದಿಸುತ್ತಿದ್ದಾರೆ

ತೃತೀಯಲಿಂಗಿ ಜೋಗಿನಿ ನಿಶಾ ಕ್ರಾಂತಿ ಅವರು ಭಾನುವಾರ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಸ್ವಾಮಿಯ ದರ್ಶನ ಪಡೆದರು. ಆಕೆಯ ಟ್ರಾನ್ಸ್‌ಜೆಂಡರ್ ಗುರುತಿನ ಪತ್ರದ ಆಧಾರದ ಮೇಲೆ ಕೇರಳ ಸರ್ಕಾರ ಆಕೆಗೆ ಭೇಟಿ ನೀಡಲು ಅವಕಾಶ ನೀಡಿತ್ತು. ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ತೃತೀಯಲಿಂಗಿಯೊಬ್ಬರು ಭೇಟಿ ನೀಡಿರುವುದು ಇದೇ ಮೊದಲು.

ಕೇರಳ ಸರ್ಕಾರಕ್ಕೆ ಧನ್ಯವಾದ ತಿಳಿಸಿದ  ಮಂಗಳಮುಖಿ ಯೋಗಿನಿ ನಿಶಾ ಕ್ರಾಂತಿ

ಶಬರಿಮಲೆ ಬೆಟ್ಟದಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಅವಕಾಶ ನೀಡಿದ ಕೇರಳ ಸರ್ಕಾರಕ್ಕೆ ಮಂಗಳಮುಖಿ ಯೋಗಿನಿ ನಿಶಾ ಕ್ರಾಂತಿ ಧನ್ಯವಾದ ತಿಳಿಸಿದ್ದಾರೆ. ಅನೇಕ ತೃತೀಯಲಿಂಗಿಗಳು ಅಯ್ಯಪ್ಪ ಮಾಲೆ ಧರಿಸಿ ಭಗವಂತನ ದರ್ಶನ ಪಡೆಯಲು ಬಯಸುತ್ತಾರೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು. ಅವರಿಗೆ ತೃತೀಯಲಿಂಗಿಯಾಗಿ ದರ್ಶನ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಆಶಾಭಾವ ವ್ಯಕ್ತಪಡಿಸಿದರು. ಅಯ್ಯಪ್ಪನ ದರ್ಶನಕ್ಕೆಂದು ಶಬರಿಮಲೆ ಬೆಟ್ಟವನ್ನು ಹತ್ತಿದ ನಂತರ ಎಲ್ಲರಂತೆ ತಾನೂ ಹುಟ್ಟಿದ್ದು ಧನ್ಯಳಾಗಿದ್ದೇನೆ ಎಂದು ನಿಶಾ ಕ್ರಾಂತಿ ಸಂತಸಪಟ್ಟಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:30 pm, Tue, 2 January 24