ಕರ್ನಾಟಕದ ಪಂಚಾಯತ್ ಸದಸ್ಯ ಶಬರಿಮಲೆಯಲ್ಲಿ ಅನೌನ್ಸರ್ ಆಗಿ ದಿನಕ್ಕೆ 750 ರೂ ಸಂಪಾದಿಸುತ್ತಿದ್ದಾರೆ

ಅದು 2000 ರಲ್ಲಿ ಕುಮಾರ್ ಶಬರಿಮಲೆಯಲ್ಲಿ ಅನೌನ್ಸರ್ ಆಗಿ ಮೊದಲು ಮೈಕ್ ಕೈಗೆತ್ತಿಕೊಂಡಾಗ ಆತ 26 ವರ್ಷದ ಯುವಕನಾಗಿದ್ದ. ಶಬರಿಮಲೆಯಲ್ಲಿ ಅನೌನ್ಸರ್ ಆಗಿ ಇಷ್ಟು ವರ್ಷಗಳ ಸುದೀರ್ಘ ಸೇವೆಯ ಬಳಿಕ ಹೇಳುವುದಾದರೆ ನಾನು ನನ್ನ ಕೊನೆಯ ಉಸಿರು ಇರುವವರೆಗೂ ಶಬರಿಮಲೆಗೆ ಬರುತ್ತೇನೆ ಎಂದು ಕುಮಾರ್ ಹೇಳುತ್ತಾರೆ.

ಕರ್ನಾಟಕದ ಪಂಚಾಯತ್ ಸದಸ್ಯ ಶಬರಿಮಲೆಯಲ್ಲಿ ಅನೌನ್ಸರ್ ಆಗಿ ದಿನಕ್ಕೆ 750 ರೂ ಸಂಪಾದಿಸುತ್ತಿದ್ದಾರೆ
ಕರ್ನಾಟಕದ ಪಂಚಾಯತ್ ಸದಸ್ಯ ಶಬರಿಮಲೆಯಲ್ಲಿ ಅನೌನ್ಸರ್ ಆಗಿ ದಿನಕ್ಕೆ 750 ರೂ ಸಂಪಾದಿಸುತ್ತಿದ್ದಾರೆ
Follow us
|

Updated on: Nov 24, 2023 | 10:46 AM

ಪತ್ತನಂತಿಟ್ಟ (ಕೇರಳ): ಕುಮಾರ್ ಎಂ ಎಂ (Kumar M M) ಕಾಯಕವೇ ಕೆಲಸ ಎಂದು ಜೀವನ ಸಾಗುತ್ತಿರುವ ವ್ಯಕ್ತಿ. ಕರ್ನಾಟಕದ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಬೈರವಳ್ಳಿ ಗ್ರಾಮ ಪಂಚಾಯತ್ (Byaravalli grama panchayat) ಸದಸ್ಯರಾಗಿರುವ 49 ವರ್ಷ ವಯಸ್ಸಿನ ಕುಮಾರ್ ಅವರು ಅಗತ್ಯವಿರುವ ಜನರಿಗೆ ಸೇವೆ ಸಲ್ಲಿಸುವುದಕ್ಕೆ ಸದಾ ಮುಂದಾಗುತ್ತಾರೆ. ಆದಾಗ್ಯೂ, ಕುಮಾರ್​​ ಪ್ರತಿ ವರ್ಷ ಶಬರಿಮಲೆ ಯಾತ್ರೆಯ ಸಮಯದಲ್ಲಿ ಭಕ್ತನಾಗಿ ಮಾತ್ರವಲ್ಲದೆ ಯಾತ್ರಿಕರಿಗೆ (pilgrims) ಮಾರ್ಗಸೂಚಿಗಳು, ನಿಯಮಗಳು ಮತ್ತು ಸೂಚನೆಗಳ ಬಗ್ಗೆ ತಿಳಿಸುವ ಅನೌನ್ಸರ್ (announcer) ಆಗಿ ಬೆಟ್ಟದ ದೇಗುಲಕ್ಕೆ ಬರಲು ಸಮಯ ಮಾಡಿಕೊಳ್ಳುತ್ತಾರೆ.

“ನಾನು ಎರಡು ದಶಕಗಳಿಂದ ಇದನ್ನು ಮಾಡುತ್ತಿದ್ದೇನೆ. ನಾನು ಪಂಪಾದಲ್ಲಿ 19 ವರ್ಷ ಮತ್ತು ನಿಲಕ್ಕಲ್‌ನಲ್ಲಿ ನಾಲ್ಕು ವರ್ಷಗಳ ಕಾಲ ಅನೌನ್ಸರ್ ಆಗಿ ಘೋಷಣೆಗಳನ್ನು ಮಾಡಿದ್ದೇನೆ. ಆದರೆ, ಅಯ್ಯಪ್ಪ ಸನ್ನಿಧಾನದಲ್ಲಿ ಇದೇ ಮೊದಲ ಬಾರಿಗೆ ಕೆಲಸ ಮಾಡುವೆ. ಇದರಿಂದ ನನ್ನ ಸಂತೋಷಕ್ಕೆ ಮಿತಿಯಿಲ್ಲ. ಇದಕ್ಕೆಲ್ಲ ಭಗವಾನ್ ಅಯ್ಯಪ್ಪನ ಆಶೀರ್ವಾದವೇ ಕಾರಣ ಎಂದು ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರಕಟಣೆಗಳನ್ನು ಮಾಡುವ ಕುಮಾರ್.

ಕುಮಾರ್ ಮೊದಲು ಮೈಕ್ ಕೈಗೆತ್ತಿಕೊಂಡಾಗ 26 ವರ್ಷ ವಯಸ್ಸಾಗಿತ್ತು. ಅದು 2000ನೇ ಇಸವಿಯಲ್ಲಿ ಎಂದು ತಮ್ಮ ಅನೌನ್ಸರ್ ವೃತ್ತಿಯ ಪ್ರಯಾಣವನ್ನು ಹಂಚಿಕೊಂಡ ಅವರು, “ನಾನು ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದೆ. 1987ರಲ್ಲಿ ನನ್ನ 13ನೇ ವಯಸ್ಸಿನಲ್ಲಿ ನನ್ನ ತಂದೆ ಮುನಿಸ್ವಾಮಿ ಶಬರಿಮಲೆಗೆ ಹೋಗಿದ್ದರು. ನಾನಂತೂ ಅಯ್ಯಪ್ಪ ದೇವರ ದರ್ಶನ ಮಾಡಬೇಕೆಂಬ ಬಲವಾದ ಆಸೆಯನ್ನು ವ್ಯಕ್ತಪಡಿಸಿದ್ದೆ. ಆದರೆ ನಮ್ಮಿಬ್ಬರ ಖರ್ಚು ಭರಿಸಲು ಸಾಧ್ಯವಾಗದೆ ಅಸಹಾಯಕನಾಗಿರುವೆ ಎಂದು ಅಪ್ಪ ಹೇಳಿದರು.ನಾವು ಅವರ ಪರಿಸ್ಥಿತಿಯನ್ನು ಆಗ ಅರ್ಥಮಾಡಿಕೊಂಡಿದ್ದೆ ಎಂದಿದ್ದಾರೆ.

Also Read: ಶಬರಿಮಲೆ ಮಾರ್ಗದಲ್ಲಿ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಕೇರಳ ಅರಣ್ಯ ಇಲಾಖೆಯಿಂದ ನೈಜ-ಸಮಯದ ಮೇಲ್ವಿಚಾರಣೆ, ಅಯ್ಯನ್ ಮೊಬೈಲ್ ಆಪ್

1993 ರಲ್ಲಿ ಚಿಕ್ಕಮಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಪಾಲಕ್ಕಾಡ್ ಮೂಲದ ಗೋಪಾಲ್ ಅವರು ಕುಮಾರ್ ಅವರ ಆಸೆಯನ್ನು ತಿಳಿದು ಅವರನ್ನು ಶಬರಿಮಲೆಗೆ ಕರೆದೊಯ್ದರು. “ಅಂದು ನಾನು ಅಯ್ಯಪ್ಪನನ್ನು ಮೊದಲ ಬಾರಿಗೆ ನೋಡಿದೆ. ನನ್ನ ಕುಟುಂಬವನ್ನು ಬಡತನದಿಂದ ಮೇಲೆತ್ತಲು ನಾನು ಅಯ್ಯಪ್ಪನನ್ನು ಪ್ರಾರ್ಥಿಸಿದೆ ಎಂದು ಬೈರವಳ್ಳಿಯ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಕುಮಾರ್ ಹೇಳಿದರು.

ರೈಲು ಪ್ರಯಾಣವು ಕುಮಾರ್ ಅವರ ಜೀವನವನ್ನು ಬದಲಾಯಿಸಿತು!

ನಿಧಾನವಾಗಿ, ನಮ್ಮ ಜೀವನವು ಉತ್ತಮವಾದ ತಿರುವು ಪಡೆಯಿತು. 2000ನೇ ಇಸವಿಯಲ್ಲಿ ಪಂಪಾದಿಂದ ಸನ್ನಿಧಾನಂವರೆಗೆ ಸ್ವಚ್ಛತಾ ಕಾರ್ಯ ಕೈಗೊಳ್ಳಲು ನಿರ್ಧರಿಸಿದ್ದೆ. ನಾನು ಕರ್ನಾಟಕದಿಂದ ರೈಲು ಹತ್ತಿದೆ ಎಂದು ಅವರು ತಮ್ಮ ರೈಲು ಜರ್ನಿ ಬಗ್ಗೆ ಹೇಳಿದರು. ಆ ಪ್ರವಾಸವು ಅವರ ಜೀವನಕ್ಕೆ ಮಹತ್ವದ ತಿರುವು ನೀಡಿತು.

ನನ್ನ ಪ್ರಯಾಣದ ಸಮಯದಲ್ಲಿ, ನಾನು ಅಯ್ಯಪ್ಪಸ್ವಾಮಿ ಸನ್ನಿಧಾನದಲ್ಲಿ ಅನೌನ್ಸರ್ ಆಗಿದ್ದ ಮಂಜುನಾಥನ್ ಸ್ವಾಮಿಯನ್ನು ಭೇಟಿಯಾದೆ. ನಾನು ನನ್ನ ಬಾಲ್ಯದ ಅನುಭವಗಳನ್ನು ಮತ್ತು ಶಬರಿಮಲೆಗೆ ನನ್ನ ಮೊದಲ ಆಗಮನದ ನೆನಪುಗಳನ್ನು ಹಂಚಿಕೊಂಡೆ. ಪಂಪಾದಲ್ಲಿರುವ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಅಧಿಕಾರಿ ಬಿಜು ಸ್ವಾಮಿ ಅವರನ್ನು ನನಗೆ ಪರಿಚಯಿಸಿದ್ದು ಅವರೇ. ಅವರ ಬೆಂಬಲದಿಂದ ಪಂಪಾದಲ್ಲಿ ಉದ್ಘೋಷಕನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು ಎಂದು ಕುಮಾರ್ ನೆನಪಿಸಿಕೊಂಡರು.

ಆಗ ನಾನು ಮೊದಲ ಬಾರಿಗೆ ಜನವರಿ 9 ರಿಂದ ಜನವರಿ 19 ರವರೆಗೆ ಕೆಲಸ ಮಾಡಿದೆ. ಮೊದಲ ಮೂರು ದಿನ, ನಾನು ಕಾಣೆಯಾದವರ ಬಗ್ಗೆ ಕನ್ನಡದಲ್ಲಿ ಪ್ರಕಟಣೆಗಳನ್ನು ನೀಡಿದೆ. ನಂತರ ನಾನು ಗಣಪತಿಯ ಮೋದಕ, ಹನುಮಂತನ ಅವಲಕ್ಕಿ ನೈವೇದ್ಯ ಮತ್ತು ಅಯ್ಯಪ್ಪ ಸ್ವಾಮಿ ಬುಕ್‌ಸ್ಟಾಲ್‌ ಬಗ್ಗೆ ಪ್ರಕಟಣೆ ನೀಡಿದೆ. ಅದಾದ ಮೇಲೆ 10 ದಿನಗಳಾದವು, ಟಿಡಿಬಿ ಅಧಿಕಾರಿಗಳು ಮತ್ತೆ ನನಗೆ ಕರೆ ಮಾಡುವುದಿಲ್ಲ ಎಂದು ನಾನು ಭಾವಿಸಿದ್ದೆ. ಆದರೂ ನಾನು ಅಲ್ಲಿ ವಾಪಸ್​ ಬರುವಾಗ ಮೋದಕ, ಅಪ್ಪಂ, ಅರವಣ ಕೊಟ್ಟು ಮುಂದಿನ ವರ್ಷ ಮತ್ತೆ ಬರುವಂತೆ ಹೇಳಿದರು. ನನಗೆ ಆಗ ಅತೀವ ಆನಂದವಾಯಿತು ಎಂದು ಅವರು ಹೇಳಿದರು.

ಇಷ್ಟು ವರ್ಷಗಳ ಸುದೀರ್ಘ ಸೇವೆಯ ಬಳಿಕ ಹೇಳುವುದಾದರೆ ನಾನು ನನ್ನ ಕೊನೆಯ ಉಸಿರು ಇರುವವರೆಗೂ ಶಬರಿಮಲೆಗೆ ಬರುತ್ತೇನೆ ಎಂದು ಕುಮಾರ್ ಹೇಳುತ್ತಾರೆ. ಮೊದಲ ಆರು ವರ್ಷ ನನಗೆ ಸಂಭಾವನೆ ಸಿಗಲಿಲ್ಲ. ಈಗ, ನಾನು ಪ್ರಕಟಣೆಗಳಿಂದ ದಿನಕ್ಕೆ 750 ರೂಪಾಯಿಗಳನ್ನು ಗಳಿಸುತ್ತೇನೆ ಎಂದು 2020 ರಲ್ಲಿ ಬೈರವಳ್ಳಿ ಪಂಚಾಯತ್ ಸದಸ್ಯರಾಗಿ ಚುನಾಯಿತರಾದ ಕುಮಾರ್ ಹೇಳಿದರು.

ಹಣವಿಲ್ಲದ ಯಾತ್ರಾರ್ಥಿಗಳಿಗೆ ತಮ್ಮ ಸ್ವಂತ ಸ್ಥಳಕ್ಕೆ ಮರಳಲು, ಇನ್ನು ನಾನು ವಾಸಿಸುವ ಸ್ಥಳೀಯ ಶಾಲೆಗಳಿಗೆ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡಲು ಈ ಹಣವನ್ನು ಬಳಸುತ್ತೇನೆ. ನನ್ನ ಪತ್ನಿ ಜಯನತಿ ಅವರು 2015 ರಿಂದ 2020 ರವರೆಗೆ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ನಮಗೆ ಕಾವ್ಯಶ್ರೀ ಮತ್ತು ದೀಕ್ಷಿತ್‌ಕುಮಾರ್ ಎಂಬ ಇಬ್ಬರು ಮಕ್ಕಳಿದ್ದಾರೆ ಎಂದು ಅವರು newindianexpress.com ಗೆ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬೆಂಗಳೂರು: ನಿಂತಿದ್ದ ಮಹಿಳೆ ಮೇಲೆ ವಿದ್ಯುತ್ ಲೈನ್ ಬಿದ್ದು ಸಾವು
ಬೆಂಗಳೂರು: ನಿಂತಿದ್ದ ಮಹಿಳೆ ಮೇಲೆ ವಿದ್ಯುತ್ ಲೈನ್ ಬಿದ್ದು ಸಾವು
ರೋಹಿತ್ ಶರ್ಮಾ ಸ್ಟೈಲ್​ನಲ್ಲಿ ಟ್ರೋಫಿ ಎತ್ತಿ ಹಿಡಿದ ಫಾಫ್ ಡುಪ್ಲೆಸಿಸ್
ರೋಹಿತ್ ಶರ್ಮಾ ಸ್ಟೈಲ್​ನಲ್ಲಿ ಟ್ರೋಫಿ ಎತ್ತಿ ಹಿಡಿದ ಫಾಫ್ ಡುಪ್ಲೆಸಿಸ್
ದರ್ಶನ್​ಗೆ ಬೆನ್ನು ನೋವು; ಪತಿಯನ್ನು ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮೀ  
ದರ್ಶನ್​ಗೆ ಬೆನ್ನು ನೋವು; ಪತಿಯನ್ನು ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮೀ  
ಉಡುಪಿ ಹೆಬ್ರಿಯಲ್ಲಿ ಮೇಘ ಸ್ಫೋಟ: ಮನೆ, ಕೃಷಿ ಜಮೀನಿಗೆ ನೀರು ನುಗ್ಗಿ ಅವಾಂತರ
ಉಡುಪಿ ಹೆಬ್ರಿಯಲ್ಲಿ ಮೇಘ ಸ್ಫೋಟ: ಮನೆ, ಕೃಷಿ ಜಮೀನಿಗೆ ನೀರು ನುಗ್ಗಿ ಅವಾಂತರ
ಬಿಗ್ ಬಾಸ್​ನಲ್ಲಿ ಮಸಿ ಬಳಿಯೋ ಟಾಸ್ಕ್; ಮತ್ತದೇ ಕಿರುಚಾಟ, ಕಿತ್ತಾಟ
ಬಿಗ್ ಬಾಸ್​ನಲ್ಲಿ ಮಸಿ ಬಳಿಯೋ ಟಾಸ್ಕ್; ಮತ್ತದೇ ಕಿರುಚಾಟ, ಕಿತ್ತಾಟ
ಚೆನ್ನೈ ಏರ್​ ಶೋ, ಉಸಿರುಗಟ್ಟಿ 5 ಮಂದಿ ಸಾವು
ಚೆನ್ನೈ ಏರ್​ ಶೋ, ಉಸಿರುಗಟ್ಟಿ 5 ಮಂದಿ ಸಾವು
Nithya Bhavishya: ನವರಾತ್ರಿಯ ಐದನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಐದನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ನವರಾತ್ರಿ ಐದನೇ ದಿನ ಸ್ಕಂದ ಮಾತೆಯ ಆರಾಧನೆ ಮಹತ್ವ ತಿಳಿಯಿರಿ
ನವರಾತ್ರಿ ಐದನೇ ದಿನ ಸ್ಕಂದ ಮಾತೆಯ ಆರಾಧನೆ ಮಹತ್ವ ತಿಳಿಯಿರಿ
ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​