ತ್ರಿಪುರಾ ಸಚಿವ ನರೇಂದ್ರ ಚಂದ್ರ ದೆಬ್ಬರ್ಮಾ ವಿಧಿವಶ

| Updated By: ರಶ್ಮಿ ಕಲ್ಲಕಟ್ಟ

Updated on: Jan 01, 2023 | 7:50 PM

Narendra Chandra Debbarma ನರೇಂದ್ರ ಚಂದ್ರ ದೆಬ್ಬರ್ಮಾ ಅವರಿಗೆ 80 ವರ್ಷ ವಯಸ್ಸಾಗಿತ್ತು. ಹಿರಿಯ ಬುಡಕಟ್ಟು ನಾಯಕ ಡಿಸೆಂಬರ್ 30 ರಂದು ತೀವ್ರ ಬ್ರೈನ್ ಸ್ಟ್ರೋಕ್ಗೆ ಒಳಗಾಗಿದ್ದರು. ಇವರು ಸರ್ಕಾರಿ ಗೋವಿಂದ್ ಬಲ್ಲಭ್ ಪಂತ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದರು.

ತ್ರಿಪುರಾ ಸಚಿವ ನರೇಂದ್ರ ಚಂದ್ರ ದೆಬ್ಬರ್ಮಾ ವಿಧಿವಶ
ನರೇಂದ್ರ ಚಂದ್ರ ದೆಬ್ಬರ್ಮಾ
Follow us on

ತ್ರಿಪುರಾದ ಹಿರಿಯ ಸಚಿವ ಮತ್ತು ಬಿಜೆಪಿಯ ಮಿತ್ರಪಕ್ಷ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ (IPFT) ಅಧ್ಯಕ್ಷ ನರೇಂದ್ರ ಚಂದ್ರ ದೆಬ್ಬರ್ಮಾ (Narendra Chandra Debbarma) ಅವರು ದೀರ್ಘಕಾಲದ ಅನಾರೋಗ್ಯದ ನಂತರ ಭಾನುವಾರ ನಿಧನರಾದರು ಎಂದು ಕುಟುಂಬ ಮತ್ತು ಆಸ್ಪತ್ರೆ ಮೂಲಗಳು ತಿಳಿಸಿವೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಹಿರಿಯ ಬುಡಕಟ್ಟು ನಾಯಕ ಡಿಸೆಂಬರ್ 30 ರಂದು ತೀವ್ರ ಬ್ರೈನ್ ಸ್ಟ್ರೋಕ್ಗೆ ಒಳಗಾಗಿದ್ದರು. ಇವರು ಸರ್ಕಾರಿ ಗೋವಿಂದ್ ಬಲ್ಲಭ್ ಪಂತ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದರು. ಮಾರ್ಚ್ 2018 ರಲ್ಲಿ ಸಿಪಿಐ-ಎಂ ನೇತೃತ್ವದ ಎಡರಂಗವನ್ನು ಸೋಲಿಸಿ ಬಿಜೆಪಿ-ಐಪಿಎಫ್‌ಟಿ ಮೈತ್ರಿ ಸರ್ಕಾರವನ್ನು ಸ್ಥಾಪಿಸುವಲ್ಲಿ ಅವರು ಬಹಳ ಮಹತ್ವದ ಪಾತ್ರವನ್ನು ವಹಿಸಿದರು

ಕಂದಾಯ ಮತ್ತು ಅರಣ್ಯ ಇಲಾಖೆಗಳನ್ನು ನಿರ್ವಹಿಸಿರುವ ದೆಬ್ಬರ್ಮಾ ಅವರು ನಾಲ್ವರು ಪುತ್ರರು, ಮೂವರು ಪುತ್ರಿಯರು ಹಾಗೂ ಪತ್ನಿಯನ್ನು ಅಗಲಿದ್ದಾರೆ.
“ರಾಜ್ಯ ಸಚಿವ ಸಂಪುಟದ ಹಿರಿಯ ಸದಸ್ಯರಾದ ಶ ಎನ್.ಸಿ. ದೆಬ್ಬರ್ಮ ಅವರು ಇಂದು ನಿಧನರಾಗಿದ್ದುದರಿಂದ ತೀವ್ರ ದುಃಖವಾಗಿದೆ. ಮೃತರ ಕುಟುಂಬಕ್ಕೆ ನನ್ನ ಸಂತಾಪ. ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ ಎಂದು ಮುಖ್ಯಮಂತ್ರಿ ಡಾ. ಮಾಣಿಕ್ ಸಾಹಾ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಬರೆದಿದ್ದಾರೆ.

ರಾಜ್ಯ ಸಚಿವ ಸಂಪುಟದ ಸದಸ್ಯ ಮತ್ತು ಹಿರಿಯ ರಾಜಕಾರಣಿ, ನಮ್ಮ ಸರ್ಕಾರಿ ಪಾಲುದಾರ ಐಪಿಎಫ್‌ಟಿಯ ಹಿರಿಯ ನಾಯಕ ನರೇಂದ್ರ ಚಂದ್ರ ದೇವವರ್ಮ ಅವರ ನಿಧನದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ಅವರ ಅಗಲಿದ ಆತ್ಮಕ್ಕೆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಶಾಂತಿ” ಎಂದು ರಾಜ್ಯಸಭಾ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದ ನಾಸಿಕ್​​ನಲ್ಲಿರುವ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ; ಭಾರೀ ಬೆಂಕಿಗೆ ಮಹಿಳೆ ಸಾವು, 17 ಮಂದಿಗೆ ಗಾಯ

1997 ರಲ್ಲಿ IPFT ರಚನೆಯ ನಂತರ, ಅದು 2001 ರಲ್ಲಿ ಕಣ್ಮರೆಯಾಯಿತು. 2009 ರಿಂದ, ಪಕ್ಷವು ಸ್ವತಃ ಪುನರುಜ್ಜೀವನಗೊಳ್ಳಲು ಪ್ರಾರಂಭಿಸಿತು. ತ್ರಿಪುರಾದ  ರಚನೆಗೆ ಒತ್ತಾಯಿಸಲು ಅದು ದೆಬ್ಬರ್ಮಾ ನೇತೃತ್ವದಲ್ಲಿ ತ್ರಿಪುರಾ ಮತ್ತು ದೆಹಲಿಯಲ್ಲಿ ಪ್ರತಿಭಟನೆಗಳ ಸರಣಿಯನ್ನು ಆಯೋಜಿಸಿತು.ಅವರ ಪ್ರತಿಭಟನೆಗಳು ಬಿಜೆಪಿಯನ್ನು ಆಕರ್ಷಿಸಿದವು, ಅದು ನಂತರ ಎರಡು ದಶಕಗಳ ಕಾಲ ಅಧಿಕಾರದಲ್ಲಿದ್ದ ಎಡರಂಗವನ್ನು 2018 ರಲ್ಲಿ ‘ನಿರ್ಮೂಲನೆ’ ಮಾಡಲು ಅವರೊಂದಿಗೆ ಮೈತ್ರಿ ಮಾಡಿಕೊಂಡಿತು.

IPFT ರಚನೆಯ ಮೊದಲು ದೆಬ್ಬರ್ಮಾಅವರು ತ್ರಿಪುರಾ ಉಪಜಾತಿ ಜುಬಾ ಸಮಿತಿ (TUJS), ತ್ರಿಪುರಾ ಹಿಲ್ ಪೀಪಲ್ಸ್ ಪಾರ್ಟಿ ಮತ್ತು ತ್ರಿಪುರಾ ಟ್ರೈಬಲ್ ನ್ಯಾಷನಲ್ ಕೌನ್ಸಿಲ್ ಸೇರಿದಂತೆ ಹಲವಾರು ಸ್ಥಳೀಯ ಪ್ರಾದೇಶಿಕ ಪಕ್ಷಗಳಲ್ಲಿ ನೇರ ಅಥವಾ ಪರೋಕ್ಷವಾಗಿ ತೊಡಗಿಸಿಕೊಂಡಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:49 pm, Sun, 1 January 23