ಹರಿಯಾಣದ ಅಂಬಾಲಾದಲ್ಲಿ ಬಸ್‌ಗೆ ಟ್ರಕ್ ಡಿಕ್ಕಿ: 7 ಸಾವು, 4 ಮಂದಿಗೆ ಗಾಯ

|

Updated on: Mar 04, 2023 | 10:59 AM

ಟ್ರೇಲರ್ ಟ್ರಕ್ ಹಿಂದಿನಿಂದ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿರುವ ಘಟನೆ ಹರಿಯಾಣದ ಅಂಬಾಲಾದಲ್ಲಿ ನಡೆದಿದೆ.

ಹರಿಯಾಣದ ಅಂಬಾಲಾದಲ್ಲಿ ಬಸ್‌ಗೆ ಟ್ರಕ್ ಡಿಕ್ಕಿ: 7 ಸಾವು, 4 ಮಂದಿಗೆ ಗಾಯ
ಸಾಂದರ್ಭಿಕ ಚಿತ್ರ
Follow us on

ಅಂಬಾಲಾ: ಟ್ರೇಲರ್ ಟ್ರಕ್ ಹಿಂದಿನಿಂದ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿರುವ ಘಟನೆ ಹರಿಯಾಣದ (Haryana) ಅಂಬಾಲಾದ (Ambala) ಯಮುನಾ ನಗರ-ಪಂಚಕುಲ ಹೆದ್ದಾರಿಯಲ್ಲಿ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಶಹಜಾದ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಈ ದುರ್ಘಟನೆ ನಡೆದಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ.

ಬಿರ್ ಬಹಾನ್, ಶಹಜಾದ್‌ಪುರ ಪೊಲೀಸ್ ಠಾಣೆ ಎಸ್‌ಎಚ್‌ಒ ಎಎನ್‌ಐಗೆ ಲೋಡ್ ಮಾಡಿದ ಟ್ರೈಲರ್ ಟ್ರಕ್ ಹಿಂದಿನಿಂದ ಚಲಿಸುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿಸಿದ್ದಾರೆ.

ಟ್ರೈಲರ್ ಟ್ರಕ್ ಚಾಲಕನು ಚಕ್ರಗಳ ಮೇಲೆ ನಿದ್ರಿಸುತ್ತಿದ್ದ, ಈ ಸಮಯದಲ್ಲಿ ಹಿಂದಿನಿಂದ ಬಂದು ಬಸ್‌ಗೆ ಗುದ್ದಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಹೇಳಿದರು, ಅಪಘಾತವು ಎಷ್ಟು ಭೀಕರವಾಗಿದೆಯೆಂದರೆ ಟ್ರೇಲರ್ ಟ್ರಕ್ ರಾಂಗ್ ಸೈಡ್‌ನಲ್ಲಿ ಪಲ್ಟಿಯಾಗಿದೆ.

ಇದನ್ನೂ ಓದಿ: Uttar Pradesh Accident: ಸ್ಕೂಟಿಗೆ ಡಿಕ್ಕಿ ಹೊಡೆದು, 6 ವರ್ಷದ ಮಗುವನ್ನು 2 ಕಿ.ಮೀ ಎಳೆದೊಯ್ದ ಟ್ರಕ್

ಎರಡೂ ವಾಹನಗಳ ಚಾಲಕರು ಅಪಾಯದಿಂದ ಪಾರಾಗಿದ್ದಾರೆ. ಅಪಘಾತದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

Published On - 10:58 am, Sat, 4 March 23