ಒಂದೆರಡು ವರ್ಷ ಪ್ರಾಯೋಗಿಕವಾಗಿ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸೋಣ: ರಾಜನಾಥ್ ಸಿಂಗ್

ನೂತನ ಕೃಷಿ ಕಾಯ್ದೆಗಳನ್ನು ಒಂದೆರಡು ವರ್ಷ ಪ್ರಾಯೋಗಿಕವಾಗಿ ಜಾರಿಗೊಳಿಸೋಣ. ಅವುಗಳಿಂದ ಯಾವುದೇ ಪ್ರಯೋಜನ ಲಭ್ಯವಾಗುವುದಿಲ್ಲ ಎಂದು ಆಗಲೂ ಅನಿಸಿದರೆ ಕೇಂದ್ರ ಸರ್ಕಾರ ನೀವು ಸೂಚಿಸಿದ ಎಲ್ಲಾ ತಿದ್ದುಪಡಿಗಳನ್ನು ಮಾಡಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೊಸ ಪ್ರಸ್ತಾಪ ಮುಂದಿಟ್ಟಿದ್ದಾರೆ.

ಒಂದೆರಡು ವರ್ಷ ಪ್ರಾಯೋಗಿಕವಾಗಿ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸೋಣ: ರಾಜನಾಥ್ ಸಿಂಗ್
ರಕ್ಷಣಾ ಸಚಿವ ರಾಜನಾಥ್ ಸಿಂಗ್
Updated By: ರಾಜೇಶ್ ದುಗ್ಗುಮನೆ

Updated on: Dec 25, 2020 | 7:39 PM

ದೆಹಲಿ: ನೂತನ ಕೃಷಿ ಕಾಯ್ದೆಗಳನ್ನು ಒಂದೆರಡು ವರ್ಷ ಪ್ರಾಯೋಗಿಕವಾಗಿ ಜಾರಿಗೊಳಿಸೋಣ. ಅವುಗಳಿಂದ ಯಾವುದೇ ಪ್ರಯೋಜನ ಲಭ್ಯವಾಗುವುದಿಲ್ಲ ಎಂದು  ಅನಿಸಿದರೆ ಕೇಂದ್ರ ಸರ್ಕಾರ ನೀವು ಸೂಚಿಸಿದ ಎಲ್ಲಾ ತಿದ್ದುಪಡಿಗಳನ್ನು ಮಾಡಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೊಸ ಪ್ರಸ್ತಾವ ಮುಂದಿಟ್ಟಿದ್ದಾರೆ.

ಬರೋಬ್ಬರಿ ತಿಂಗಳಿಂದ ಗಡಿಗಳಲ್ಲಿ ಧರಣಿ ನಿರತರಾಗಿರುವ ರೈತರು ಮತ್ತು ಅವರ ಕುಟುಂಬದ ಕುರಿತು ನಮಗೆ ಅಪಾರ ಗೌರವವಿದೆ. ಸ್ವತಃ ನಾನೂ ರೈತ ಕುಟುಂಬದ ಹಿನ್ನೆಲೆಯವನೇ ಆಗಿದ್ದು, ಕೇಂದ್ರ ಸರ್ಕಾರ ರೈತರ ಹಿತಕ್ಕೆ ಧಕ್ಕೆ ಬರುವಂತಹ ಯಾವುದೇ ಕೆಲಸಕ್ಕೂ ಕೈಹಾಕುವುದಿಲ್ಲ ಎಂದು ಅವರು ತಿಳಿಸಿದರು.

ದೆಹಲಿಯ ದ್ವಾರ್ಕಾದಲ್ಲಿ ವರ್ಚುವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾಷಣವನ್ನು ಆಲಿಸಿದ ಅವರು, ನೂತನ ಕೃಷಿ ಕಾಯ್ದೆಗಳಲ್ಲಿನ ಒಂದು ಅಂಶವೂ ರೈತ ವಿರೋಧಿಯಾಗಿಲ್ಲ. ಕನಿಷ್ಠ ಬೆಂಬಲ ಬೆಲೆಯನ್ನು ಮುಂಚಿನಂತೆಯೇ ಮುಂದುವರೆಸಲಾಗುವುದು ಎಂದು ಅವರು ನೂತನ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡರು.

ಸದ್ಯ ನೂತನ ಕೃಷಿ ಕಾಯ್ದೆಗಳನ್ನು ಅನುಷ್ಠಾನಗೊಳಿಸೋಣ. ಒಂದು ವೇಳೆ ನಿಮಗೂ ಇವುಗಳಿಂದ ಕಿಂಚಿತ್ತೂ ಪ್ರಯೋಜನವಾಗದಿದ್ದರೆ, ಕೃಷಿ ಕಾಯ್ದೆಗಳಲ್ಲಿ ನೀವು ಹೇಳಿದಂತೆಯೇ ಬದಲಾವಣೆ ಮಾಡೋಣ. ಕೇವಲ ಮಾತುಕತೆಯ ಮೂಲಕವಷ್ಟೇ ಈ ಸಮಸ್ಯೆ ಬಗೆಹರಿಯಲು ಸಾಧ್ಯ ಎಂದು ಅವರು ವಿವರಿಸಿದ್ದಾರೆ.

ಕೇಂದ್ರ ಮತ್ತು ರೈತರ ನಡುವೆ ಸಂಧಾನ ಏರ್ಪಡಿಸಲು ಸಿದ್ಧ: ದುಷ್ಯಂತ್ ಚೌಟಾಲಾ