ದಕ್ಷಿಣ ಪೆಸಿಫಿಕ್‌ನಲ್ಲಿ 7.7 ತೀವ್ರತೆಯ ಭೂಕಂಪ, ಸುನಾಮಿ ಖಚಿತ ಪಡಿಸಿದ ಆಸ್ಟ್ರೇಲಿಯಾ ಹವಾಮಾನ ಇಲಾಖೆ

|

Updated on: Feb 11, 2021 | 8:21 AM

Tsunami Confirmed | ದಕ್ಷಿಣ ಪೆಸಿಫಿಕ್‌ನಲ್ಲಿ ಸಂಭವಿಸಿದ 7.7 ತೀವ್ರತೆಯ ಭೂಕಂಪದಲ್ಲಿ ಸುನಾಮಿ ಉಂಟಾಗಿದೆ ಎಂದು ಆಸ್ಟ್ರೇಲಿಯಾದ ಹವಾಮಾನ ಇಲಾಖೆ ಗುರುವಾರ ತಿಳಿಸಿದೆ.

ದಕ್ಷಿಣ ಪೆಸಿಫಿಕ್‌ನಲ್ಲಿ 7.7 ತೀವ್ರತೆಯ ಭೂಕಂಪ, ಸುನಾಮಿ ಖಚಿತ ಪಡಿಸಿದ ಆಸ್ಟ್ರೇಲಿಯಾ ಹವಾಮಾನ ಇಲಾಖೆ
Follow us on

ದೆಹಲಿ: ದಕ್ಷಿಣ ಪೆಸಿಫಿಕ್‌ನಲ್ಲಿ ಸಂಭವಿಸಿದ 7.7 ತೀವ್ರತೆಯ ಭೂಕಂಪದಲ್ಲಿ ಸುನಾಮಿ ಉಂಟಾಗಿದೆ ಎಂದು ಆಸ್ಟ್ರೇಲಿಯಾದ ಹವಾಮಾನ ಇಲಾಖೆ ಗುರುವಾರ ತಿಳಿಸಿದೆ. ಆಸ್ಟ್ರೇಲಿಯಾದ ಮುಖ್ಯ ಭೂಭಾಗದಿಂದ ಪೂರ್ವಕ್ಕೆ ಸುಮಾರು 550 ಕಿಲೋಮೀಟರ್ (340 ಮೈಲಿ) ದೂರದಲ್ಲಿರುವ ಲಾರ್ಡ್ ಹೋವ್ ದ್ವೀಪಕ್ಕೆ ಇದರಿಂದ ಅಪಾಯವಿದೆ ಎಂದು ಆಸ್ಟ್ರೇಲಿಯಾದ ಹವಾಮಾನ ಇಲಾಖೆ ಟ್ವೀಟ್ ಮೂಲಕ ಎಚ್ಚರಿಸಿದೆ.

ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ದಕ್ಷಿಣ ಪೆಸಿಫಿಕ್​ನಲ್ಲಿ ಭೂಕಂಪ ಸಂಭವಿಸಿದ್ದು, ನ್ಯೂಜಿಲೆಂಡ್, ವನವಾಟು (Vanuatu), ನ್ಯೂ ಕ್ಯಾಲೆಡೋನಿಯಾ ಮತ್ತು ಈ ಪ್ರದೇಶದ ಇತರ ರಾಷ್ಟ್ರಗಳಿಗೆ ಸುನಾಮಿ ಎಚ್ಚರಿಕೆ ನೀಡಿದೆ.

USGS ಪ್ರಕಾರ, ಗುರುವಾರ ಮಧ್ಯರಾತ್ರಿ (1320 ಜಿಎಂಟಿ ಬುಧವಾರ) ಸುಮಾರು 415 ಕಿಲೋಮೀಟರ್ (258 ಮೈಲಿ) ಮತ್ತು ನ್ಯೂ ಕ್ಯಾಲೆಡೋನಿಯಾದ ವಾವೊದಿಂದ ಪೂರ್ವಕ್ಕೆ 10 ಕಿಲೋಮೀಟರ್ ಆಳದಲ್ಲಿ ಭೂಕಂಪನ ಸಂಭವಿಸಿದೆ.

ಇದನ್ನೂ ಓದಿ: ರಾಜಸ್ಥಾನದಲ್ಲಿ 4.2 ಮಧ್ಯಮ ತೀವ್ರತೆಯ ಭೂಕಂಪ: ದೆಹಲಿ-ಎನ್‌ಸಿಆರ್‌ನಲ್ಲೂ ನಡುಕ