Miss India 2020: ದಕ್ಷಿಣ ಭಾರತದ ಚೆಲುವೆ ಮಾನಸಾ ವಾರಣಾಸಿಗೆ ಒಲಿಯಿತು ‘ಮಿಸ್ ಇಂಡಿಯಾ 2020’ ಮುಕುಟ

Miss India 2020: ದಕ್ಷಿಣ ಭಾರತದ ಚೆಲುವೆ ಮಾನಸಾ ವಾರಣಾಸಿಗೆ ಒಲಿಯಿತು ‘ಮಿಸ್ ಇಂಡಿಯಾ 2020’ ಮುಕುಟ
ಮಿಸ್ ಇಂಡಿಯಾ 2020 ಮುಕುಟ ತೊಟ್ಟ ಮಾನಸಾ ವಾರಣಾಸಿ (ಮಧ್ಯ), ರನ್ನರ್ ಅಪ್ ಮಾನ್ಯಾ ಸಿಂಗ್ಮ (ಬಲ), ಮಿಸ್ ಗ್ರಾಂಡ್ ಇಂಡಿಯಾ ಮನಿಕಾ ಶಿಯೋಖಂಡ್ (ಎಡ)

Manasa Varanasi: ನಿನ್ನೆ ರಾತ್ರಿ ನಡೆದ ಅಂತಿಮ ಸುತ್ತಿನ ಸಮಾರಂಭದಲ್ಲಿ 23 ವರ್ಷದ ತೆಲಂಗಾಣದ ಚೆಲುವೆ ಮಾನಸಾ ವಾರಣಾಸಿ (Manasa Varanasi) ಅವರನ್ನು ಮಿಸ್ ಇಂಡಿಯಾ 2020 ಆಗಿ ಘೋಷಿಸಲಾಯಿತು. Miss India 2020

guruganesh bhat

|

Feb 11, 2021 | 12:44 PM

ಬಹು ನಿರೀಕ್ಷಿತ ಮಿಸ್ ಇಂಡಿಯಾ 2020 (Miss India 2020) ಘೋಷಣೆಯಾಗಿದೆ. ಯಾರೀ ಸುಂದರಿ ಎಂದು ಕುತೂಹಲದಿಂದ ಕಿವಿ ನೆಟ್ಟಗಾಯಿತೇ!? 2020ನೇ ಸಾಲಿನ ಭಾರತದ ಸುಂದರಿ, ಸುರಸುಂದರಿಯಾಗಿ ಮಿಂಚಿದವರೇ ತೆಲಂಗಾಣದ ಮಾನಸಾ ವಾರಣಾಸಿ. (Manasa Varanasi). ನಿನ್ನೆ ರಾತ್ರಿ ನಡೆದ ಅಂತಿಮ ಸುತ್ತಿನ ಸಮಾರಂಭದಲ್ಲಿ 23 ವರ್ಷದ ಚೆಲುವೆ ಮಾನಸಾ ವಾರಣಾಸಿ ಅವರನ್ನು ಮಿಸ್ ಇಂಡಿಯಾ 2020 ಆಗಿ ಘೋಷಿಸಲಾಯಿತು. 2019ರ ಮಿಸ್ ಇಂಡಿಯಾ ಆಗಿದ್ದ ಸುಮನ್ ರತನ್ ಸಿಂಗ್ ಅವರು ಮಾನಸಾರಿಗೆ ‘ಮಿಸ್ ಇಂಡಿಯಾ 2020’ ಮುಕುಟ ತೊಡಿಸಿದರು.

ಯಾರು ಈ ಮಾನಸಾ ವಾರಣಾಸಿ? ಡಿಸೆಂಬರ್​ನಲ್ಲಿ ಮಿಸ್ ವರ್ಲ್ಡ್​​ ​ ಸ್ಪರ್ಧೆಗೆ ತಯಾರಿ.. ತೆಲಂಗಾಣದ 23 ವರ್ಷದ ಯುವತಿ ಮಾನಸಾ ವಾರಣಾಸಿ. ಆರ್ಥಿಕ ಮಾಹಿತಿ ವಿನಿಮಯ ತಜ್ಞೆಯಾಗಿ (Financial Information Exchange Analyst ) ಕೆಲಸ ನಿರ್ವಹಿಸುತ್ತಿದ್ದಾರೆ. ಮಿಸ್ ಇಂಡಿಯಾ ಆಗಿ ಹೊರಹೊಮ್ಮಿರುವ ಅವರು, ಈ ವರ್ಷದ ಡಿಸೆಂಬರ್​ನಲ್ಲಿ ನಡೆಯಲಿರುವ 70ನೇ ಮಿಸ್ ವರ್ಲ್ಡ್​​ ​ ಸ್ಪರ್ಧೆಯಲ್ಲಿ (Miss World 2021) ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಉತ್ತರ ಪ್ರದೇಶದ ಮಾನ್ಯಾ ಸಿಂಗ್ ಮಿಸ್ ಇಂಡಿಯಾ 2020ರ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಹರ್ಯಾಣದ ಸುಂದರಿ ಮನಿಕಾ ಶಿಯೋಕಂಡ್ ಮಿಸ್ ಗ್ರಾಂಡ್ ಇಂಡಿಯಾ 2020 ಪಟ್ಟಕ್ಕೆ ಪಾತ್ರವಾಗಿದ್ದಾರೆ. ಸೆಲೆಬ್ರಿಟಿಗಳ ದಂಡೇ ನೆರೆದಿದ್ದ ಮಿಸ್ ಇಂಡಿಯಾ 2020 ಘೋಷಣೆ ಸಮಾರಂಭ ವಾಣಿ ಕಪೂರ್ ನೃತ್ಯಕ್ಕೂ ಸಾಕ್ಷಿಯಾಯಿತು.

ಮಿಸ್ ಇಂಡಿಯಾ 2020 ಆಯ್ಕೆ ಸಮಿತಿಯಲ್ಲಿ ಯಾರಿದ್ದರು? ಕಲಾವಿದರು, ಫ್ಯಾಷನ್ ಡಿಸೈನರ್​ಗಳು ಸೇರಿದಂತೆ ಮಿಸ್ ಇಂಡಿಯಾ 2020ರ ಆಯ್ಕೆ ಸಮಿತಿ ವೈವಿಧ್ಯಮಯವಾಗಿತ್ತು. ನೇಹಾ ಧುಪಿಯಾ, ಚಿತ್ರಾಂಗದಾ ಸಿಂಗ್, ಪುಲ್ಕಿತ್ ಸಾಮ್ರಾಟ್, ಪ್ರಸಿದ್ಧ ವಿನ್ಯಾಸಗಾರರಾದ ಫಲ್ಗುಣಿ ಮತ್ತು ಶೇನ್ ಪೀಕಾಕ್ ಅವರುಗಳಿದ್ದ ಅಯ್ಕೆ ಸಮಿತಿ ಮಾನಸಾ ವಾರಣಾಸಿಯವರನ್ನು ಮಿಸ್ ಇಂಡಿಯಾ 2020 ಆಗ ಆಯ್ಕೆ ಮಾಡಿದೆ. ಮಿಸ್ ಇಂಡಿಯಾ 2020ರ ಘೋಷಣೆ ಸಮಾರಂಭವು ಫೆಬ್ರವರಿ 28ರಂದು ಖಾಸಗಿ ಮನರಂಜನಾ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಮೂಲಕ 2020ರ ಭಾರತ ಸುಂದರಿ ಪಟ್ಟ ದಕ್ಷಿಣ ಭಾರತದ ಪಾಲಿಗೆ ದಕ್ಕಿದಂತಾಗಿದೆ.

ಇದನ್ನೂ ಓದಿ: ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಪುತ್ರಿ ಇರಾ ಖಾನ್ ಹೊಸ ಲವ್ ಸ್ಟೋರಿ, ಪ್ರೀತಿಯಲ್ಲಿರೋ ಹುಡುಗ ಯಾರು ಗೊತ್ತಾ?

Follow us on

Related Stories

Most Read Stories

Click on your DTH Provider to Add TV9 Kannada