AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಪುತ್ರಿ ಇರಾ ಖಾನ್ ಹೊಸ ಲವ್ ಸ್ಟೋರಿ, ಪ್ರೀತಿಯಲ್ಲಿರೋ ಹುಡುಗ ಯಾರು ಗೊತ್ತಾ?

ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಪುತ್ರಿ ಪ್ರೇಮ ಪುರಾಣ ಸಂಚಲನ ಮೂಡಿಸಿದೆ. ಈಗಾಗಲೇ ಒಂದು ಬಾರಿ ಲವ್ವಲ್ಲಿ ಬಿದ್ದು ಬ್ರೇಕಪ್ ಮಾಡಿಕೊಂಡಿರೋ ಅಮೀರ್ ಪುತ್ರಿ ಹೊಸ ಲವ್ ಸ್ಟೋರಿಗೆ ಲಾಕ್​ಡೌನ್ ಕಾರಣವಾಗಿದೆ.

ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಪುತ್ರಿ ಇರಾ ಖಾನ್ ಹೊಸ ಲವ್ ಸ್ಟೋರಿ,  ಪ್ರೀತಿಯಲ್ಲಿರೋ ಹುಡುಗ ಯಾರು ಗೊತ್ತಾ?
ಅಮೀರ್ ಖಾನ್ ಮತ್ತು ಪುತ್ರಿ ಇರಾ ಖಾನ್
ಆಯೇಷಾ ಬಾನು
ಆಯೇಷಾ ಬಾನು|

Updated on:Nov 26, 2020 | 11:41 AM

Share

ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಪುತ್ರಿ ಪ್ರೀತಿ ವಿಚಾರ ಸದ್ಯ ಸಾಕಷ್ಟು ಸದ್ದು ಮಾಡ್ತಿದೆ. ಅಂದ ಹಾಗೆ ಸದ್ಯ ಸದ್ದಿಲ್ಲದೇ ಅಮೀರ್ ಪುತ್ರಿ ಇರಾ ಖಾನ್ ಪ್ರೀತಿಯಲ್ಲಿ ಮುಳುಗಿದ್ದಾರಂತೆ. ಹಾಗಾಗಿ ಇರಾ ಈಗಾಗಲೇ ಒಂದು ಬಾರಿ ಪ್ರೀತಿ ಪ್ರೇಮ ಅಂತ ಕೈ ಕೈ ಹಿಡಿದು ಸುತ್ತಾಡಿ. ಬ್ರೇಕ್ ಅಪ್ ನೋವಲ್ಲಿ ಕಾಲ ಕಳೆದು ಈಗ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ.

ಅಮೀರ್ ಪುತ್ರಿ ಇರಾ ಖಾನ್ ಈ ಮೊದಲು ಮಿಶಲ್ ಕ್ರಿಪಲಾನಿ ಜೊತೆ ಸುತ್ತಾಡಿದ್ರು. ಎರಡು ವರ್ಷಗಳ ಕಾಲ ಡೇಟ್ ಮಾಡಿದ್ರು. ಆದರೆ 2019ರಿಂದ ಮಿಶಲ್ ಕೃಪಲಾನಿಯಿಂದ ದೂರ ಆಗಿದ್ರು. ಹೀಗಾಗಿ ಸದ್ಯ ಈಗ ಲಾಕ್​ಡೌನ್​ನಲ್ಲಿ ಮತ್ತೆ ಹೊಸ ಪ್ರೇಮ್ ಕಹಾನಿ ಇರಾ ಖಾನ್ ಲೈಫಲ್ಲಿ ಶುರುವಾಗಿದೆ.

ಫಿಟ್ ನೆಸ್ ಕೋಚ್ ಜೊತೆ ಇರಾ ಖಾನ್ ಲವ್ವಿ ಡವ್ವಿ ಅಂದ ಹಾಗೆ ಅಮೀರ್ ಖಾನ್ ಪುತ್ರಿ ಇರಾ ಖಾನ್ ಸದ್ಯ ಪ್ರೀತಿಯಲ್ಲಿ ಬಿದ್ದಿರೋದು ಫಿಟ್ ನೆಸ್ ಕೋಚ್ ನೂಪರ್ ಶಿಕಾರೆ ಜೊತೆ ಅನ್ನೋ ಸುದ್ದಿ ದೊಡ್ಡ ಸಂಚಲನ ಮೂಡಿಸಿದೆ. ಇರಾ ಖಾನ್ ಜೊತೆ ಪ್ರೀತಿಯಲ್ಲಿರೋ ನೂಪುರ್ ಶಿಖಾರೆ, ಅಮೀರ್ ಖಾನ್‌ಗೆ ಫಿಟ್ ನೆಸ್ ಕೋಚ್ ಮಾತ್ರವಲ್ಲ ಇತ್ತೀಚೆಗೆ ಲಾಕ್‌ಡೌನ್ ಟೈಮ್‌ನಲ್ಲಿ ಇರಾಗೂ ಕೋಚ್ ಆಗಿ ಕೆಲಸ ಮಾಡ್ತಿದ್ರಂತೆ.

ಹೀಗಾಗಿ ಸದ್ಯ ಲಾಕ್‌ಡೌನ್‌ನಲ್ಲಿ ಪ್ರೀತಿಗೆ ಜಾರಿದ ಜೋಡಿ ಕಳೆದ ಆರು ತಿಂಗಳಿಂದ ಜೊತೆ ಜೊತೆಯಾಗಿ ಸುತ್ತಾಟ ನಡೆಸಿದ್ದಾರೆ ಅನ್ನೋ ಸುದ್ದಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸದ್ಯ ಈ ಸುದ್ದಿ ಬಗ್ಗೆ ಅಧಿಕೃತವಾಗಿ ಕುಟುಂಬದವರು ಮಾಹಿತಿ ನೀಡಿಲ್ಲ. ಆದ್ರೆ ಅಮೀರ್ ಪುತ್ರಿ ಇರಾ ಏನ್ ಹೇಳ್ತಾರೆ ಇನ್ನು ನೂಪುರ್ ಜೊತೆಗಾದ್ರೂ ಸಪ್ತಪದಿ ತುಳಿಯೋ ಹಂತಕ್ಕೆ ಜೊತೆಯಾಗಿ ನಿಲ್ತಾರಾ ಅನ್ನೋದನ್ನ ಕಾದು ನೊಡಬೇಕಿದೆ.

Published On - 9:19 am, Thu, 26 November 20

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!