ಬಡ ಮಕ್ಕಳ ಹಸಿವು ನೀಗಿಸುತ್ತಿದ್ದ ಅಕ್ಷಯ ಪಾತ್ರೆಯಲ್ಲಿ ನಡೀತಾ ಅವ್ಯವಹಾರ? ಸ್ವತಂತ್ರ ಟ್ರಸ್ಟಿಗಳ ರಾಜೀನಾಮೆ..
ಹಸಿವು ನೀಗಿಸೋ ದೊಡ್ಡ ಸಂಸ್ಥೆಯೊಂದಿಗೆ ಖ್ಯಾತಿ ಪಡೆದಿದ್ದ ಅಕ್ಷಯ ಪಾತ್ರೆ ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ಅಕ್ಷಯ ಪಾತ್ರೆ ಟ್ರಸ್ಟ್‌ನಲ್ಲಿ ಹಣಕಾಸಿನ ಅವ್ಯವಹಾರ ಹಾಗೂ ಅಕ್ಷಯ ಪಾತ್ರೆ ಹೆಸರಿನಲ್ಲಿ ಸರ್ಕಾರ ಅನುದಾನ ದುರಪಯೋಗ ಮಾಡಿಕೊಳ್ಳಲಾಗ್ತಿದೆಯಂತೆ.
ಬೆಂಗಳೂರು: ಅಕ್ಷಯ ಪಾತ್ರೆ.. ಕಡಿಮೆ ದುಡ್ಡಲ್ಲಿ ಬಡ ಮಕ್ಕಳ ಹಸಿವು ನೀಗಿಸೋ ಕೆಲ್ಸ ಮಾಡ್ತಿರೋ ಈ ಟ್ರಸ್ಟ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಕಾರಣ ಅಕ್ಷಯ ಪಾತ್ರೆಯ ಸ್ವತಂತ್ರ ಟ್ರಸ್ಟಿಗಳಾದ ಮೋಹನ್ ದಾಸ್ ಪೈ, ವಿ. ಬಾಲಕೃಷ್ಣನ್. ಅಭಯ್ ಜೈನ್, ರಾಜ್ ಕುಂದ್ರಾ ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡೋದ್ರ ಜತೆಗೆ ಅಕ್ಷಯ ಪಾತ್ರೆಯ ಚೇರ್ಮನ್ ಮಧು ಪಂಡಿತ್ ದಾಸ್ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅಕ್ಷಯ ಪಾತ್ರೆಯಲ್ಲಿ ಸಾರ್ವಜನಿಕರ ದುಡ್ಡು ದುರುಪಯೋಗ ಮಾಡಲಾಗ್ತಿದೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ.
ಅಕ್ಷಯ ಪಾತ್ರೆ ಸ್ವತಂತ್ರ ಟ್ರಸ್ಟಿಗಳ ರಾಜೀನಾಮೆ! ಹೌದು.. ಸಾರ್ವಜನಿಕರಿಂದ ಹಣ ಸಂಗ್ರಹಣೆ ಹಾಗೂ ಐಟಿ ಬಿಟಿ ಕಂಪನಿಗಳಿಂದ ಸಿಎಸ್ಆರ್ ಫಂಡ್ ಪಡೆದು ಕಡಿಮೆ ದುಡ್ಡಲ್ಲಿ ಊಟ ಹಂಚುವ ಕೆಲ್ಸ ಮಾಡ್ತಿರೋ ಅಕ್ಷಯ ಪಾತ್ರೆ ವಿರುದ್ಧ ಅವ್ಯವಹಾರದ ಆರೋಪ ಕೇಳಿ ಬಂದಿದೆ. ಜೊತೆಗೆ ಅಕ್ಷಯ ಪಾತ್ರೆಯ ಚೇರ್ಮನ್ ಮಧು ಪಂಡಿತ್ ದಾಸ್ ವಿರುದ್ಧ ಐವರು ಸ್ವತಂತ್ರ ಟ್ರಸ್ಟಿಗಳು ಅಸಮಧಾನ ವ್ಯಕ್ತಪಡಿಸಿದ್ದು, ಮಧು ಪಂಡಿತ್ ದಾಸ್ ರಾಜೀನಾಮೆಗೆ ಒತ್ತಡ ಹಾಕಲಾಗ್ತಿದೆ.
ಅಕ್ಷಯ ಪಾತ್ರೆಗೆ ಸರ್ಕಾರದಿಂದ ಅಗತ್ಯ ಧಾನ್ಯಗಳನ್ನ ನೀಡಲಾಗ್ತಿದೆ. ಅಕ್ಕಿ, ಬೆಳೆ ಸೇರಿದಂತೆ ಇತರೆ ಪದಾರ್ಥಗಳನ್ನ ಉಚಿತವಾಗಿ ಕಳುಹಿಸಿ ಕೊಡಲಾಗ್ತಿದೆ. ಆದ್ರೆ ಆ ಪದಾರ್ಥದಲ್ಲಿ ಅಕ್ಷಯ ಪಾತ್ರೆ ಅಡುಗೆ ಮಾಡಿ ಅದನ್ನ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿಕೊಂಡು ಹಣ ಮಾಡುತ್ತಿದೆ. ಜೊತೆಗೆ ಇದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಇಟ್ಟಿಲ್ಲ ಎಂದು ಆರೋಪ ಕೇಳಿ ಬಂದಿದೆ. ಜೊತೆಗೆ ಅಕ್ಷಯ್ ಪಾತ್ರೆಗೆ ಬರುವ ಅನುದಾನಗಳನ್ನ ಚೇರ್ಮನ್ ಮಧು ಪಂಡಿತ್ ದಾಸ್ ಇಸ್ಕಾನ್ ದೇವಸ್ಥಾನಕ್ಕೆ ಬಳಕೆ ಮಾಡಿಕೊಳ್ತಿದ್ದಾರಂತೆ.
ಜೈಪುರ್ ಹಾಗೂ ಇತರ ಭಾಗದಲ್ಲಿ ನಡೆಯುವ ದೇವಸ್ಥಾನದ ಕಾಮಗಾರಿಗಳಿಗೆ ಅಕ್ಷಯ ಪಾತ್ರೆ ಟ್ರಸ್ಟ್ ಮುಖಾಂತರ ಬಿಲ್ ಪಾವತಿ ಮಾಡ್ತಿದ್ದಾರಂತೆ. ಜೊತೆಗೆ ಲೆಕ್ಕ ಪರಿಶೋಧಕರು ಕೆಲ ಅವ್ಯವಹಾರದ ಬಗ್ಗೆಯೂ ಧ್ವನಿ ಎತ್ತಿದ್ದು, ಅದನ್ನೂ ಹತ್ತಿಕ್ಕೋ ಕೆಲ್ಸ ಮಾಡಲಾಗ್ತಿದೆ ಅಂತಾ ಟ್ರಸ್ಟಿಗಳು ಬೇಸರ ವ್ಯಕ್ತಪಡಿಸಿ ರಾಜೀನಾಮೆ ನೀಡಿದ್ದಾರೆ. ಅದಕ್ಕೆ ಈಗ ಅಕ್ಷಯ ಪಾತ್ರೆ ಮುಖ್ಯಸ್ಥ ಮಧು ದಾಸ್ ಪಂಡಿತ್ ರಾಜೀನಾಮೆ ನೀಡಿ ತನಿಖೆಗೆ ಅವಕಾಶ ನೀಡಬೇಕು ಅಂತಾ ಒತ್ತಾಯಗಳು ಕೇಳಿ ಬರ್ತಿದೆ.
ಇನ್ನೂ ಈ ಬಗ್ಗೆ ಇಸ್ಕಾನ್ನಿಂದ ಸ್ಪಷ್ಟನೆ ಸಿಕ್ಕಿಲ್ಲ, ಕೇವಲ ಪತ್ರಿಕಾ ಪ್ರಕಟನೆ ನೀಡಿರುವ ಇಸ್ಕಾನ್, ಟ್ರಸ್ಟಿಗಳ ರಾಜೀನಾಮೆ ನೀಡಿರುವ ಬಗ್ಗೆ ಒಪ್ಪಿಕೊಂಡಿದ್ದು, ತನಿಖೆಗೆ ಸಮಿತಿ ರಚಿಸಲಾಗಿದೆ ಅಂತಾ ಹೇಳಿದೆ.ಸದ್ಯ ಇಸ್ಕಾನ್ನ ಅಕ್ಷಯ್ ಪಾತ್ರಾ ವಿವಾದದ ಕೇಂದ್ರ ಬಿಂದುವಾಗಿದ್ದು ಅಕ್ಷಯ ಪಾತ್ರೆ ಚೇರ್ಮನ್ ವಿರುದ್ಧ ಸ್ವತಂತ್ರ ಟ್ರಸ್ಟಿಗಳು ಕಿಡಿಕಾರಿದ್ದಾರೆ. ಜೊತೆಗೆ ರಾಜೀನಾಮೆ ನೀಡಿ ಟ್ರಸ್ಟ್‌ನಿಂದ ಹೊರಗೆ ಬಂದಿದ್ದಾರೆ.