Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI ಕೆಂಗಣ್ಣಿಗೆ ಗುರಿಯಾಗಿದ್ದ ಲಕ್ಷ್ಮಿ ವಿಲಾಸ್ ಬ್ಯಾಂಕ್, ಸಿಂಗಾಪುರ ಮೂಲದ ಬ್ಯಾಂಕ್​ ಜೊತೆ ವಿಲೀನ: ನಿಟ್ಟುಸಿರುಬಿಟ್ಟ ಗ್ರಾಹಕರು

ತಮಿಳುನಾಡಿನ ಕರೂರು ಮೂಲದ ಲಕ್ಷ್ಮೀ ವಿಲಾಸ್ ಬ್ಯಾಂಕ್‌ 1926ರಲ್ಲಿ ಸ್ಥಾಪನೆಯಾಗಿತ್ತು. ಆದರೆ ಕೆಟ್ಟ ಸಾಲ ಮತ್ತು ನಿಬಂಧನೆಗಳ ಏರಿಕೆಯಿಂದಾಗಿ ಬ್ಯಾಂಕ್​ಗೆ ಲಾಸ್ ಆಗಿತ್ತು. ಈಗ ವಿಲೀನ ಪ್ರಕ್ರಿಯೆ ಹಿನ್ನೆಲೆಯಲ್ಲಿ ಡಿಬಿಎಸ್ ಇಂಡಿಯಾ ಬ್ಯಾಂಕ್​ ₹2,500 ಕೋಟಿ ಬಂಡವಾಳ ಹೂಡಲಿದೆ.

RBI ಕೆಂಗಣ್ಣಿಗೆ ಗುರಿಯಾಗಿದ್ದ ಲಕ್ಷ್ಮಿ ವಿಲಾಸ್ ಬ್ಯಾಂಕ್, ಸಿಂಗಾಪುರ ಮೂಲದ ಬ್ಯಾಂಕ್​ ಜೊತೆ ವಿಲೀನ: ನಿಟ್ಟುಸಿರುಬಿಟ್ಟ ಗ್ರಾಹಕರು
ಸಿಂಗಾಪುರ ಮೂಲದ ಬ್ಯಾಂಕ್​ನೊಂದಿಗೆ ಲಕ್ಷ್ಮಿ ವಿಲಾಸ್ ಬ್ಯಾಂಕ್ ವಿಲೀನ
Follow us
ಆಯೇಷಾ ಬಾನು
|

Updated on:Nov 26, 2020 | 12:18 PM

ದೆಹಲಿ: ಬ್ಯಾಂಕ್​ಗಳ ವಿಲೀನಕ್ಕೆ ಕೇಂದ್ರ ಸರ್ಕಾರ ಉತ್ಸಾಹ ತೋರುತ್ತಿದೆ. ಈಗಾಗಲೇ ಅನೇಕ ಬ್ಯಾಂಕ್​ಗಳನ್ನು ಕೇಂದ್ರ ಸರ್ಕಾರ ವಿಲೀನಗೊಳಿಸಿದ್ದು, ಮತ್ತೊಂದು ಬ್ಯಾಂಕ್​ನ ವಿಲೀನ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಲಕ್ಷ್ಮಿ ವಿಲಾಸ್​ ಬ್ಯಾಂಕ್​ ಅನ್ನು ಅಧಿಕೃತವಾಗಿ ಸಿಂಗಾಪುರ ಮೂಲದ ಡಿಬಿಎಸ್​ ಬ್ಯಾಂಕ್ ಜೊತೆಗೆ ವಿಲೀನಕ್ಕೆ ಒಳಪಡಿಸಿದೆ. ಲಕ್ಷ್ಮಿ ವಿಲಾಸ್​ ಬ್ಯಾಂಕ್​ನ್ನು ಡಿಬಿಎಸ್ ಬ್ಯಾಂಕಿನ ಸಂಪೂರ್ಣ ಸ್ವಾಮ್ಯಕ್ಕೆ ಒಳಪಡಿಸಲು ನ.26 ನಡೆದ ಕೇಂದ್ರ ಸಂಪುಟದಲ್ಲಿ ಎಲ್ಲಾ ಸಚಿವರು ಒಮ್ಮತದಿಂದ ಒಪ್ಪಿಗೆ ಸೂಚಿಸಿದ್ದಾರೆ.

ವಿಲೀನದ ಬಗ್ಗೆ ಮೊದಲೇ ಸಿಕ್ಕಿತ್ತು ಸುಳಿವು! ಹಲವು ದಿನಗಳಿಂದ ಲಕ್ಷ್ಮಿ ವಿಲಾಸ್​ ಬ್ಯಾಂಕ್​ನ್ನು ಡಿಬಿಎಸ್​ ಜೊತೆ ವಿಲೀನಗೊಳಿಸುವ ಕುರಿತ ಮಾತು ಕೇಳಿ ಬಂದಿತ್ತು. ಆದರೆ ಕೊನೆಗೂ ವಿಲೀನ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಇನ್ನು ವಿಲೀನವಾಗುವುದರಿಂದ ಠೇವಣಿದಾರರು ಠೇವಣಿ ಹಿಂಪಡೆಯುವುದಕ್ಕೆ ಯಾವುದೇ ನಿರ್ಬಂಧಗಳಿಲ್ಲ. ಅಲ್ಲದೆ, ಠೇವಣಿ ಕುರಿತು ಯಾವುದೇ ಚಿಂತೆ ಬೇಕಿಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಭರವಸೆ ನೀಡಿದ್ದಾರೆ. ಹಾಗಾದ್ರೆ ವಿಲೀನದ ಪರಿಣಾಮ ಏನು ಅನ್ನೋದನ್ನ ಇಲ್ಲಿ ಓದಿ ತಿಳಿಯಿರಿ.

ಬ್ಯಾಂಕ್​ಗೆ ನಿರಂತರ ನಷ್ಟ! ತಮಿಳುನಾಡಿನ ಕರೂರು ಮೂಲದ ಲಕ್ಷ್ಮೀ ವಿಲಾಸ್ ಬ್ಯಾಂಕ್‌ 1926ರಲ್ಲಿ ಸ್ಥಾಪನೆಯಾಗಿತ್ತು. ಆದರೆ ಕೆಟ್ಟ ಸಾಲ ಮತ್ತು ನಿಬಂಧನೆಗಳ ಏರಿಕೆಯಿಂದಾಗಿ ಬ್ಯಾಂಕ್​ಗೆ ಲಾಸ್ ಆಗಿತ್ತು. ಈಗ ವಿಲೀನ ಪ್ರಕ್ರಿಯೆ ಹಿನ್ನೆಲೆಯಲ್ಲಿ ಡಿಬಿಎಸ್ ಇಂಡಿಯಾ ಬ್ಯಾಂಕ್​ ₹2,500 ಕೋಟಿ ಬಂಡವಾಳ ಹೂಡಲಿದೆ.

ಈ ಹಿಂದೆ ಬ್ಯಾಂಕ್​ನ ಗ್ರಾಹಕರಿಗೆ ಆರ್​ಬಿಐ ಹಲವು ನಿರ್ಬಂಧ ಹೇರಿತ್ತು. ಅದನ್ನ ಹಿಂಪಡೆಯುವ ಸಾಧ್ಯತೆ ಇದೆ. ಬ್ಯಾಂಕ್ ಆರ್ಥಿಕ ಪರಿಸ್ಥಿತಿ ಕುಸಿತದ ಪರಿಣಾಮ ವಿಲೀನ ಮಾಡುತ್ತಿರುವ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಒಟ್ನಲ್ಲಿ ಬ್ಯಾಂಕ್​ನಲ್ಲಿ ದಿಢೀರ್ ನಡೆದ ಹಲವು ಬೆಳವಣಿಗೆಗಳು ಲಕ್ಷ್ಮೀ ವಿಲಾಸ್ ಬ್ಯಾಂಕ್​ನ ಗ್ರಾಹಕರ ನಿದ್ದೆಗೆ ಭಂಗ ತಂದಿತ್ತು. ಆದರೆ ಕೇಂದ್ರ ಸರ್ಕಾರದ ಕ್ರಮದಿಂದ ಗ್ರಾಹಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ: ಕುಸಿಯುತ್ತಿದೆ ಲಕ್ಷ್ಮೀ ವಿಲಾಸ್ ಬ್ಯಾಂಕ್ ಷೇರು ಮೌಲ್ಯ: ಗ್ರಾಹಕರ ಮುಂದಿರುವ ಆಯ್ಕೆಗಳೇನು?

Published On - 7:35 am, Thu, 26 November 20